ಇದು ಎಂಥಾ ಲೋಕವಯ್ಯಾ...;  ನಾಯಿ ಕಚ್ಚಿದ್ದಕ್ಕೆ ಮಾಲೀಕ ಜೈಲಿಗೆ

NAYI
Published on

‘ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯಲ್ಲ, ಬದಲಿಗೆ ಮನುಷ್ಯ ನಾಯಿಗೆ ಕಚ್ಚಿದರೆ ಸುದ್ದಿ’ ಎನ್ನುವ ತೀರಾ ಹಳೆಯ ಮಾತಿದೆ. ಆದರೆ ಅಹಮಬಾದ್​ನಲ್ಲಿ ಈಚೆಗೆ ಮನುಷ್ಯನಿಗೆ ನಾಯಿ ಕಚ್ಚಿರುವುದೇ ದೊಡ್ಡ ಸುದ್ದಿಯಾಗಿದೆ. ಹಾಗಂತ ಆ ಮನುಷ್ಯನಿಗೆ ಏನೂ ತೊಂದರೆಯಾಗಿಲ್ಲ.

ಇಂಜೆಕ್ಷನ್ ಹಾಕಿಸಿಕೊಂಡು ಆತ ಹುಷಾರಾಗಿದ್ದಾನೆ. ಆದರೆ ನಾಯಿಯ ಮಾಲೀಕ ಮಾತ್ರ ಜೈಲಿಗೆ ಹೋಗಿದ್ದಾನೆ! ಭರೇಶ್ ಎನ್ನುವವರು ಡಾಬರ್​ವುನ್ ನಾಯಿ ಸಾಕಿದ್ದಾರೆ. ಈಚೆಗೆ ಅದು ಅವಿನಾಶ್ ಎನ್ನುವವರಿಗೆ ಕಚ್ಚಿ ಗಾಯಗೊಳಿಸಿತ್ತು. ಇದು ನಾಯಿಯ ತಪ್ಪಾದರೆ, ಇದನ್ನು ನೋಡುತ್ತಿದ್ದ ಮಹಿಳೆಯೊಬ್ಬರು ಗಾಬರಿಯಿಂದ ಓಡಿ ಹೋಗುವಾಗ ಬಿದ್ದು ಮೂಳೆ ಮುರಿದುಕೊಂಡಿದ್ದರು.

ನಂತರ ಅವಿನಾಶ್ ಹಾಗೂ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ವಿಷಯ ಕೋರ್ಟ್​ವರೆಗೂ ಹೋಯಿತು. ಇವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸಂತ್ರಸ್ತರು ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿರುವ ಕೋರ್ಟ್ ಭರೇಶ್​ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ!

|ಸುಚೇತನಾ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net