

ಹೈಹೀಲ್ಸ್ ಧರಿಸಿ ನಡೆದಾಡುವುದು ಹಲವು ಲಲನೆಯರಿಗೆ ಪ್ರೆಸ್ಟೀಜ್ ಸಂಕೇತವಾದರೆ, ಕುಳ್ಳಗೆ ಇರುವವರು ತಾವು ಎತ್ತರ ಕಾಣಿಸಲಿ ಎಂದು ಈ ಚಪ್ಪಲಿ ಧರಿಸುತ್ತಾರೆ. ಕಾರಣ ಏನೇ ಇರಲಿ, ಗ್ರೀಸ್ನ ಐತಿಹಾಸಿಕ ತಾಣಗಳ ವೀಕ್ಷಣೆಗೆ ಹೋಗುವುದಿದ್ದರೆ ಮಾತ್ರ ಫ್ಲ್ಯಾಟ್ ಚಪ್ಪಲಿಯನ್ನೇ ಧರಿಸಿ ಹೋಗಬೇಕು.
ಏಕೆಂದರೆ ಇಲ್ಲಿ ಹೈಹೀಲ್ಸ್ ನಿಷೇಧಿಸಲಾಗಿದೆ. ಅತ್ಯಂತ ಶಾರ್ಪ್ ಇರುವ ಹೈಹೀಲ್ಸ್ಗಳಿಂದ ಪ್ರಾಚ್ಯ ವಸ್ತುಗಳು ಹಾಳಾಗುತ್ತವೆ ಎನ್ನುವ ಕಾರಣದಿಂದ ನಿಷೇಧ ಹೇರಲಾಗಿದೆ. ಒಂದು ವೇಳೆ ಇಂಥ ಚಪ್ಪಲಿ ಧರಿಸಿ ಹೋದರೆ ಆ ಚಪ್ಪಲಿಗಿಂತ ದುಬಾರಿ ದಂಡ ತೆರಬೇಕಾಗುತ್ತದೆ!
| ಸುಚೇತನಾ