

ಹಸುಗಳು ಎಂದಾದರೂ ನಾನ್ವೆಜ್ ತಿಂದಿದ್ದನ್ನು ನೋಡಿದ್ದೀರಾ? ಇಂಥ ವಿಚಿತ್ರ ನೋಟ ಕಾಣಸಿಗುವುದು ಬೇರ್ಯಾವುದೋ ದೇಶದಲ್ಲಲ್ಲ. ಬದಲಿಗೆ ನಮ್ಮದೇ ಗೋವಾ ರಾಜ್ಯದಲ್ಲಿ. ಇಲ್ಲಿಯ ಹಸುಗಳು ಹೆಚ್ಚಿನ ಪ್ರಮಾಣದಲ್ಲಿವೆ.
ಹೋಟೆಲ್ಗಳ ಮುಂದೆ ಎರಾಬಿರ್ರಿಯಾಗಿ ಎಸೆಯುವ ಮೂಳೆ-ಮಾಂಸಗಳ ರುಚಿ ನೋಡಿರುವ ಈ ಬೀಡಾಡಿ ದನಗಳು ಶುದ್ಧ ಮಾಂಸಾಹಾರಿ ಯಾಗುತ್ತಿವೆಯಂತೆ. ಮಾಂಸ ಸಿಗದಿದ್ದರೆ ನೇರವಾಗಿ ಹೋಟೆಲ್ ಒಳಗೆ ನುಗ್ಗುವ ಪ್ರಯತ್ನವನ್ನೂ ಮಾಡಿರುವ ವರದಿಯಾಗಿದೆ. ಇದು ಗೋವಾ ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿರುವ ಕಾರಣ, ಅಲ್ಲಿಯ ಹಸುಗಳನ್ನು ಪುನಃ ವೆಜಿಟೇರಿಯನ್ ಆಗಿ ಮಾಡಲು ಸಾಹಸ ಪಡುತ್ತಿದೆಯಂತೆ.
|ಸುಚೇತನಾ