ಪಂಚ್​ ಬೀಟ್​ನಲ್ಲಿ ಸಂಯುಕ್ತಾ: ಹಿಂದಿ ವೆಬ್​ಸಿರೀಸ್​ನಲ್ಲಿ ಕಿರಿಕ್​ ಹುಡುಗಿ

samyukta hegde
Published on

ಕನ್ನಡದಲ್ಲಿ "ಕಿರಿಕ್​ ಪಾರ್ಟಿ' ಸಿನಿಮಾ ಮೂಲಕ ಖಾತೆ ತೆರೆದು ಬಳಿಕ ತೆಲುಗು ಮತ್ತು ತಮಿಳಿನಲ್ಲಿಯೂ ನಟಿಸಿದ್ದಾರೆ ನಟಿ ಸಂಯುಕ್ತಾ ಹೆಗ್ಡೆ. ಇದೀಗ ಇದೇ ಸಂಯುಕ್ತಾ ಸದ್ದಿಲ್ಲದೆ, ಬಾಲಿವುಡ್​ ಮೆಟ್ಟಿಲು ಏರಿದ್ದಾರೆ. ಹಿಂದಿಯಲ್ಲಿ ತಯಾರಾಗಿರುವ "ಪಂಚ್​ ಬೀಟ್​' ವೆಬ್​ಸಿರೀಸ್​ನ ಸೀಸನ್​ 2ರಲ್ಲಿ ವಿಶೇಷ ಪಾತ್ರವೊಂದನ್ನು ಸಂಯುಕ್ತಾ ಮಾಡಿದ್ದು, ಶುಕ್ರವಾರ ಚಿತ್ರದ ಟ್ರೇಲರ್​ ಬಿಡುಗಡೆ ಆಗಲಿದೆ.

ಏನಿದು "ಪಂಚ್​ ಬೀಟ್​'? ಇದೊಂದು ವೆಬ್​ಸಿರೀಸ್​. ಬಾಲಿವುಡ್​ನ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್​ ತಮ್ಮದೇ ಆಲ್ಟ್​ ಬಾಲಾಜಿ ಒಟಿಟಿಗಾಗಿ ಈ ಸರಣಿಯನ್ನು ನಿರ್ಮಾಣ ಮಾಡಿದ್ದಾರೆ. ಹದಿಹರೆಯದವರನ್ನೇ ಗಮನದಲ್ಲಿಟ್ಟುಕೊಂಡು, ಅವರ ಆಸೆ, ಆಕಾಂೆ, ತುಡಿತ ಹೀಗೆ ಹಲವು ಅಂಶಗಳನ್ನು ಆಧರಿಸಿ ಆಕಾಶ್​ ಚೌಬೇ ಈ ಸರಣಿಯನ್ನು ನಿರ್ದೇಶನ ಮಾಡಿದ್ದಾರೆ.

ಅಂದಹಾಗೆ, ಈ ವೆಬ್​ಸಿರೀಸ್​ನಲ್ಲಿ ಸಂಯುಕ್ತಾ ಹೆಗ್ಡೆ ವಿಶೇಷ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಜೀವ ರಕ್ಷಕ ಕಲೆಗಳನ್ನು ಕಲಿತು, ಅಪ್ಪನ ಜಿಮ್​ ನಡೆಸುವ ಮಿಶಾ ಹೆಸರಿನ ಯುವತಿಯ ಪಾತ್ರ ಮಾಡಿದ್ದಾರೆ. ಅಷ್ಟೇ ಅಲ್ಲ ನಿಜ ಜೀವನದಲ್ಲಿ ಸಂಯುಕ್ತಾ ಏನೆಲ್ಲ ಕಲಿತಿದ್ದಾರೋ ಆ ಎಲ್ಲವೂ ಈ ಸಿನಿಮಾದಲ್ಲಿ ಕಾಣಬಹುದಂತೆ. ಒಂದರ್ಥದಲ್ಲಿ ಈ ಪಾತ್ರ ಅವರನ್ನೇ ಹೋಲುತ್ತದೆಯಂತೆ ಎಂದು ಸಂಯುಕ್ತಾ ಹೇಳಿಕೊಂಡಿದ್ದಾರೆ. ಪ್ರಿಯಾಂಕ್​ ಶರ್ಮಾ, ಸಮೀರ್​ ಸೋನಿ, ನಿಕಿ ವಾಲಿಯಾ, ಸಿಂುಜಾ, ಕಾಜಲ್​ ತ್ಯಾಗಿ, ಸಿದ್ಧಾರ್ಥ್​ ಶರ್ಮಾ ಸೇರಿ ಹಲವು ಯುವ ಕಲಾವಿದರ ದಂಡೇ ಈ ವೆಬ್​ಸಿರೀಸ್​ನಲ್ಲಿದೆ. ಅಂದಹಾಗೆ, ಈ ವೆಬ್​ಸರಣಿ ಜೂನ್​ 27 ರಿಂದ ಪ್ರಸಾರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net