

ವಿಜಯಪುರ:c ತೊರವಿ ನರಸಿಂಹದೇವರ ಸನ್ನಿಧಾನದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂದಿಂದ ಹಮ್ಮಿಕೊಂಡಿದ್ದ ಗಾಯತ್ರಿ ಜಪಯಜ್ಞ ಹಾಗೂ ಮಹಾರುದ್ರ ಹೋಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಜಪಿಸಿದ 36 ಲಕ್ಷ ಗಾಯತ್ರಿ ಮಂತ್ರವನ್ನು ಶನಿವಾರ ಭಗವಂತನಿಗೆ ಸಮರ್ಪಿಸಲಾಯಿತು.
ಅತ್ಯಂತ ಪ್ರಭಾವಶಾಲಿ, ಪರಮ ಪವಿತ್ರ ಮತ್ತು ಚತುರ್ವೇದ ಸಾರವಾಗಿರುವ ಗಾಯತ್ರಿ ಮಂತ್ರ ನಿತ್ಯ ಪಠಣದಿಂದ ಏಕಾಗ್ರತೆ, ಸ್ಮರಣಶಕ್ತಿ ವೃದ್ಧಿ, ಆತ್ಮಸ್ಥೆರ್ಯ ಹೆಚ್ಚುತ್ತದೆ. ಜೀವನದಲ್ಲಿ ಉತ್ಸಾಹ, ದೇಹದಲ್ಲಿ ಚೈತನ್ಯ, ಮುಖದಲ್ಲಿ ತೇಜಸ್ಸು ಮೂಡುತ್ತದೆ. ಕ್ರೋಧ ನಿಯಂತ್ರಿಸಿ ಮಾನಸಿಕ ಶಾಂತಿ, ನೆಮ್ಮದಿ ಮತ್ತು ಉತ್ತಮ ಆರೋಗ್ಯ ಲಭಿಸುತ್ತದೆ. ದಾರಿ ತಪು$್ಪತ್ತಿರುವ ಯುವ ಜನತೆಯನ್ನು ಸನ್ಮಾರ್ಗದತ್ತ ತರುವ ಪ್ರಯತ್ನವಾಗಿ ಈ ಕಾರ್ಯಕ್ರಮ ಹಮ್ಮ್ಮಿಕೊಳ್ಳಲಾಗಿತ್ತು. ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಶನಿವಾರ ಬೆಳಗ್ಗೆ 8ಕ್ಕೆ ಮಹಾರುದ್ರ ಹೋಮ ಪ್ರಾರಂಭವಾಯಿತು. 11ಜನ ಋತ್ವಿಜರು ಹೋಮದ ನೇತೃತ್ವ ವಹಿಸಿದ್ದರು. ಹಿರಿಯ ವಿದ್ವಾಂಸ ಪಂ.ಮಧ್ವಾಚಾರ್ಯ ಮೊಕಾಶಿ ನೇತೃತ್ವದಲ್ಲಿ ನಡೆದ ಗಾಯತ್ರಿ ಜಪಯಜ್ಞದಲ್ಲ್ಲಿ 22 ಜನ ಋತ್ವಿಜರು ಪಾಲ್ಗೊಂಡಿದ್ದರು. ಮಹಿಳೆಯರು ಪಠಿಸಿದ 14 ಲಕ್ಷ ಕೃಷ್ಣ ಜಪ ನರಸಿಂಹ ದೇವರಿಗೆ ಸಮರ್ಪಿಸಲಾಯಿತು.
ಪಂ.ವೇದನಿಧಿ ಆಚಾರ್ಯ, ಶ್ರಿಕಾಂತಾಚಾರ್ಯ ಆಶ್ರಿತ, ಕೃಷ್ಣಾಚಾರ್ಯ ಗಲಗಲಿ, ಸುಧನ್ವ ಸಂಗಮ, ತೊರವಿ ನರಸಿಂಹ ದೇವಸ್ಥಾನ ಸಮಿತಿ ಅಧ್ಯಕ್ಷ ರಾವೇಂದ್ರ ಕುಲಕರ್ಣಿ, ಉಪಾಧ್ಯಕ್ಷ ಶಶಿಕಾಂತ ಜೋಶಿ, ಕಾರ್ಯದರ್ಶಿ ಸಂತೋಷ ಕುಲಕರ್ಣಿ ಹಾಗೂ ವಿಪ್ರ ಸಮಾಜದ ಪ್ರಮುಖರಾದ ಉಲ್ಲಾಸ ಪಾಟೀಲ, ಎಸ್.ಎಂ.ದೇಸಾಯಿ, ವಿದ್ಯಾ ಕುಲಕರ್ಣಿ, ಚೈತ್ರಾ ಗೊರಟೆಕರ, ಆನಂದ ಕುಲಕರ್ಣಿ, ಪ್ರದಿಪ ಕುಲಕರ್ಣಿ, ರಮೇಶ ನಾಮಣ್ಣವರ, ಪವನ ಗಲಗಲಿ, ಸಂದೀಪ ಕುಲಕರ್ಣಿ, ಕೆ.ಬಿ.ಕುಲಕರ್ಣಿ, ರಾಜೇಂದ್ರ ಜೋಶಿ, ಸುಧೀಂದ್ರ ಜೋಶಿ, ಗೋವಿಂದ ದೇಶಪಾಂಡೆ, ಪ್ರಹ್ಲಾದ ಕುಲಕರ್ಣಿ, ವಿಜಯ ಜೋಶಿ, ಅನಂತ ಕುಲಕರ್ಣಿ, ಅಂಬಾದಾಸ ಜೋಶಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.