ಉಪ್ಪಿನಕಾಯಿ ಬಿಜಿನೆಸ್​ನಲ್ಲಿ ಯಶಸ್ವಿಯಾಗುವುದು ಹೇಗೆ?

Pickle 1
Published on

‘ಉಪ್ಪಿನಕಾಯಿ’ ಎಂದಾಕ್ಷಣ ಬಾಯಿಯಲ್ಲಿ ನೀರೂ ರುತ್ತಿರಬೇಕಲ್ವಾ? ಉಪ್ಪಿನಕಾಯಿ ವೈಶಿಷ್ಟ್ಯವೇ ಅಂಥದ್ದು. ಆ ಹುಳಿ, ಉಪ್ಪು, ಖಾರದ ರುಚಿ ಬಾಯಿಯಲ್ಲಿ ಹರಡಿ, ಊಟದ ಗಮ್ಮತ್ತನ್ನು ದುಪ್ಪಟ್ಟುಗೊಳಿಸುತ್ತದೆ. ಉಪ್ಪಿನಕಾಯಿ

ಇಲ್ಲದ ಊಟ ಸಂಪೂರ್ಣವೇ ಆಗದು ಎನ್ನುವಷ್ಟರ ಮಟ್ಟಿಗೆ ಪ್ರಾಮುಖ್ಯತೆ ಗಳಿಸಿದೆ. ಸಾಂಪ್ರದಾಯಿಕ ದೇಶವಾದ ಭಾರತದಲ್ಲಂತೂ ಎಲ್ಲರ ಮನೆಯಲ್ಲೂ ಊಟಕ್ಕೆ ಉಪ್ಪಿನಕಾಯಿ ಬೇಕೇಬೇಕು. ಹಾಗಾಗಿಯೇ, ಉಪ್ಪಿನಕಾಯಿ ಉದ್ಯಮವೂ ಬಹಳ ಬೇಡಿಕೆ ಪಡೆದುಕೊಳ್ಳುತ್ತಿದೆ. ಹಲವರು ಮನೆಯಿಂದಲೇ ಸಣ್ಣ ಪ್ರಮಾಣದಲ್ಲಿ ಉಪ್ಪಿನಕಾಯಿ ವ್ಯವಹಾರ ಆರಂಭ ಮಾಡಿ, ಸದ್ಯ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಇತರ ಉದ್ಯಮಗಳಂತೆ ಸಾಕಷ್ಟು ಬಂಡವಾಳ ಬೇಕಿಲ್ಲದ ಉಪ್ಪಿನಕಾಯಿ ಉದ್ಯಮ ಹಲವಾರು ಜನರನ್ನು, ಅದರಲ್ಲೂ ಹೆಂಗಳೆಯರನ್ನು ತನ್ನತ್ತ ಸೆಳೆಯುತ್ತಿದೆ. ಉಪ್ಪಿನಕಾಯಿ ಗ್ರಾಹಕರಿಗೆ ಊಟದ ರುಚಿ ಹೆಚ್ಚಿಸುವ ಜತೆಗೆ ತಯಾರಕರ ಜೇಬನ್ನೂ ತುಂಬಿಸುತ್ತಿದೆ ಎಂದರೆ ತಪ್ಪಾಗಲಾರದು. ಹೌದಲ್ವಾ, ‘ನಾನು ಇದರ ಬಗ್ಗೆ ಯೋಚನೆಯನೇ ಮಾಡಿಲ್ಲ, ನಾನು ಯಾಕೆ, ನನ್ನದೇ ಆದ ಸ್ವಂತ ಉಪ್ಪಿನಕಾಯಿ ಉದ್ಯಮ ಆರಂಭ ಮಾಡಬಾರದು’ ಅಂತ ಅಂದುಕೊಳ್ಳುತ್ತಿದ್ದರೆ, ನಿಮಗೆ ಬೇಕಾದ ಪೂರ್ಣ ಮಾಹಿತಿ ಈ ಅಂಕಣದಲ್ಲಿದೆ.

ಉಪ್ಪಿನಕಾಯಿ ಉದ್ಯಮ ಎಂದರೇನು?: ಮನೆಯಲ್ಲಿ ಮಾತ್ರ ತಯಾರಿಸುತ್ತಿದ್ದ ಉಪ್ಪಿನಕಾಯಿ ಈಗ ದೊಡ್ಡ ಉದ್ಯಮವಾಗಿ ಬೆಳೆದಿದೆ. ಉಪ್ಪಿನಕಾಯಿಗೆ ಬೇಕಿರುವ ಕಚ್ಚಾ ಸಾಮಗ್ರಿ ಖರೀದಿಯಿಂದ ಹಿಡಿದು ಕಾರ್ವಿುಕರ ಸಹಾಯದಿಂದ ರುಚಿಕರ ಉಪ್ಪಿನ ಕಾಯಿ ತಯಾರಿಸಿ ಅಂಗಡಿಗಳಿಗೆ ಹಂಚಿಕೆ ಮಾಡಿ, ಗ್ರಾಹಕರಿಗೆ ತಲುಪಿಸಿ, ಅದರಿಂದ ಒಂದಷ್ಟು ಲಾಭ ಮಾಡುವುದೇ ಉಪ್ಪಿನಕಾಯಿ ಉದ್ಯಮ. ಈ ಉದ್ಯಮ ವನ್ನು ಮನೆಯಿಂದಲೇ ಸಣ್ಣದಾಗಿ, ಕಡಿಮೆ ಬಂಡವಾಳ ದೊಂದಿಗೆ ಆರಂಭಿಸಬಹುದು. ಇಲ್ಲ ದೊಡ್ಡ ಮಟ್ಟದ ಫ್ಯಾಕ್ಟರಿ ಕಟ್ಟಿ ಕಾರ್ವಿುಕರನ್ನು ಸೇರಿಸಿಕೊಂಡು ಬೃಹತ್ ಪ್ರಮಾಣದಲ್ಲೂ ಬಿಜಿನೆಸ್ ವಿಸ್ತರಿಸಬಹುದು. ಕಡಿಮೆ ಬಂಡವಾಳ ಮತ್ತು ಹೆಚ್ಚು ಬಂಡವಾಳ ಇರುವವರಿಗೂ ಒಪ್ಪುವ ಬಿಜಿನೆಸ್ ಇದು. ಉದ್ಯಮಶೀಲ ಮನಸ್ಥಿತಿ ಇದ್ದರೆ, ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ಪನ್ನ ತಯಾರಿಸಿದರೆ ಉಪ್ಪಿನಕಾಯಿ ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯ.

ವೆರೈಟಿ ಗುರುತಿಸುವುದು ಬಹಳ ಮುಖ್ಯ: ಮಾವಿನಕಾಯಿ, ನಿಂಬೆಕಾಯಿ, ಅಪ್ಪೆ ಮಿಡಿ, ಮಿಕ್ಡ್್ಸ ತರಕಾರಿ, ಕ್ಯಾರೆಟ್, ನೆಲ್ಲಿಕಾಯಿ, ಅಮ್ಟೆಕಾಯಿ, ಹಾಗಲಕಾಯಿ, ಕವಳೆಕಾಯಿ, ಟೊಮ್ಯಾಟೋ, ಹಿರಳೆಕಾಯಿ, ಮೆಣಸಿನಕಾಯಿ, ಮೀನಿನ ಉಪ್ಪಿನಕಾಯಿ ಹೀಗೆ ಹತ್ತಾರು ಬಗೆಯ ಉಪ್ಪಿನ

ಕಾಯಿಗಳಿವೆ. ಆದರೆ, ಯಾವ ಉಪ್ಪಿನಕಾಯಿ ಜನರಿಗೆ ಇಷ್ಟವಾಗುತ್ತದೆ? ಯಾವ ಭಾಗದಲ್ಲಿ ಯಾವ ವೆರೈಟಿಗೆ ಹೆಚ್ಚು ಬೇಡಿಕೆ ಇದೆ? ನೀವು ತಯಾರಿಸಲು ನಿರ್ಧರಿಸುವ ಉಪ್ಪಿನಕಾಯಿ ವೈಶಿಷ್ಟ್ಯವೇನು? ರುಚಿ ಮತ್ತು ಗುಣಮಟ್ಟ ಹೇಗೆ ಕಾಯ್ದುಕೊಳ್ಳುತ್ತೀರಿ... ಹೀಗೆ ಹಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕಂಡುಕೊಂಡಾಗ ಮಾತ್ರ ಉಪ್ಪಿನಕಾಯಿ ಬಿಜಿನೆಸ್​ನಲ್ಲಿ ಯಶಸ್ವಿಯಾಗಲು ಸಾಧ್ಯ

ಸರ್ಕಾರದ ಸವಲತ್ತುಗಳು

ಪಿಎಂ ಮೈಕ್ರೋ ಫುಡ್ ಪೊ›ಸೆಸಿಂಗ್ ಎಂಟಪ್ರೖೆಸಸ್ ಯೋಜನೆಯಲ್ಲಿ ಶೇ.35 ಸಬ್ಸಿಡಿ, ಮುದ್ರಾ ಯೋಜನೆ ಯಲ್ಲಿ 50 ಸಾವಿರದಿಂದ 10 ಲಕ್ಷ ರೂ.ವರೆಗೆ ಸಾಲ ದೊರೆಯುತ್ತದೆ. ಕರ್ನಾಟಕ ರಾಜ್ಯ ಹಣಕಾಸು ನಿಗಮದ ಯೋಜನೆಯಲ್ಲಿ ಮಹಿಳಾ ಉದ್ಯಮಿಗಳು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಸೇವಾ ಕ್ಷೇತ್ರಗಳನ್ನು ಪ್ರಾರಂಭಿಸಲು 5 ರಿಂದ 20 ಲಕ್ಷ ರೂ. ವರೆಗೆ ಸಾಲ ಲಭ್ಯ. ಈ ರೀತಿ ಸರ್ಕಾರದ ಹಲವಾರು ಯೋಜನೆಗಳು ಸ್ವ-ಉದ್ಯೋಗಿಗಳಿಗೆ ಸಹಾಯಕವಾಗಿವೆ.

ಕೋರ್ಸ್​ನಲ್ಲಿ ಏನೇನಿದೆ?

  • ಕೋರ್ಸ್ ಪರಿಚಯ
  • ಕೋರ್ಸ್​ನ ಮಾರ್ಗದರ್ಶಕರ ಪರಿಚಯ
  • ಉಪ್ಪಿನಕಾಯಿ ಬಿಜಿನೆಸ್ ಯಾಕೆ?
  • ಉಪ್ಪಿನಕಾಯಿ ಘಟಕಕ್ಕೆ ಸ್ಥಳದ ಆಯ್ಕೆ
  • ನೋಂದಣಿ, ಮಾಲೀಕತ್ವ ಮತ್ತು ಅನುಮತಿ
  • ಮೂಲಸೌಕರ್ಯ, ಬಂಡವಾಳ ಅಗತ್ಯತೆ ಮತ್ತು ಸರ್ಕಾರದ ಸವಲತ್ತು
  • ಯಾವ ಉಪ್ಪಿನಕಾಯಿ ಮಾಡುವುದು?
  • ಬೇಡಿಕೆ, ಪೂರೈಕೆ ಮತ್ತು ಹಂಚಿಕೆ
  • ಬೆಲೆ ನಿಗದಿ ಮತ್ತು ಅಕೌಂಟ್ಸ್
  • ಫ್ರಾಂಚೈಸಿ, ಬ್ರಾಂಡಿಂಗ್, ಮಾರ್ಕೆಟಿಂಗ್ ಮತ್ತು ಗ್ರಾಹಕ ಸೇವೆ

ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಉಪ್ಪಿನಕಾಯಿ ಕೋರ್ಸ್ ಹಲವರು ತಾವು ತಯಾರಿಸುವ ರುಚಿಕರ ಉಪ್ಪಿನಕಾಯಿಗೆ ಸಾಕಷ್ಟು ಪ್ರಸಿದ್ಧಿ ಹೊಂದಿರುತ್ತಾರೆ. ಆದರೆ, ಅದನ್ನು ಮಾರಾಟ ಮಾಡಿ ಹಣ ಗಳಿಸುವ ಪರಿ ಅರಿತಿರುವುದಿಲ್ಲ. ಉಪ್ಪಿನಕಾಯಿ ಮಾರಾಟ ಮಾಡುವುದಕ್ಕೆ ಸರ್ಕಾರದಿಂದ, ನೋಂದಣಿ ಪಡೆಯಬೇಕಾ? ಉಪ್ಪಿನಕಾಯಿ ಉದ್ಯಮಕ್ಕೆ ಬೇಕಾದ ಮೂಲಭೂತ ಅಗತ್ಯತೆಗಳಾವುವು? ತರಹೇವಾರಿ ಉಪ್ಪಿನಕಾಯಿಗಳಲ್ಲಿ ಯಾವುದು ಉತ್ತಮ? ಬೆಲೆ ನಿಗದಿಪಡಿಸೋದು ಹೇಗೆ? ಈಗಿರುವ ಉದ್ಯಮಗಳಿಗೆ ಕಠಿಣ ಸ್ಪರ್ಧೆ ನೀಡಲು ನಾವು ಮಾಡಬೇಕಾದದ್ದಾದರೂ ಏನು? ಇದರ ಮಾರ್ಕೆಟಿಂಗ್, ಬ್ರಾ್ಯಂಡಿಂಗ್ ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗದೇ ತಮ್ಮ ಇಚ್ಛೆಯ ಉದ್ಯೋಗ ಆರಂಭಿಸದೇ ಸುಮ್ಮನಾಗಿರುವವರಿಗಾಗಿಯೇ ಇಂಡಿಯನ್ ಮನಿ .ಕಾಮ್ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಯಶಸ್ವಿಯಾಗಿ ಉಪ್ಪಿನಕಾಯಿ ಬಿಜಿನೆಸ್ ಕಟ್ಟುವುದು ಹೇಗೆ ಎಂಬ ಕೋರ್ಸ್ ಒಂದನ್ನು ವಿನ್ಯಾಸಗೊಳಿಸಲಾಗಿದೆ. ಇದೇ ಕ್ಷೇತ್ರದಲ್ಲಿ ಬಹಳ ಸಣ್ಣ ಪ್ರಮಾಣದಲ್ಲಿ, ಮನೆಯಿಂದಲೇ ಉದ್ಯಮವನ್ನು ಆರಂಭಿಸಿ ಈಗ ದೊಡ್ಡ ಪ್ರಮಾಣದಲ್ಲಿ ಹೆಸರುವಾಸಿಯಾಗಿ, ಲಕ್ಷಾಂತರ ರೂಪಾಯಿ ಗಳಿಸುತ್ತಿರುವವರು ನಿಮ್ಮ ಮಾರ್ಗದರ್ಶಕರಾಗಿ, ನಿಮಗೆ ಸಂಪೂರ್ಣ ಮಾಹಿತಿಯನ್ನು ಕೊಡುವ ಮೂಲಕ ಉಪ್ಪಿನಕಾಯಿ ಬಿಜಿನೆಸ್​ನಲ್ಲಿ ಯಶಸ್ವಿಯಾಗುವುದು ಹೇಗೆ ಎಂಬುದನ್ನು ವಿವರಿಸುತ್ತಾರೆ. ಮನಸ್ಸಿದ್ದರೆ ಮಾರ್ಗ, ದುಡಿಯಬೇಕೆಂದವರಿಗೆ ಹಲವಾರು ಆಯ್ಕೆಗಳಿವೆ. ನಿಮ್ಮ ಮಾರ್ಗದರ್ಶಕರು, ನೀವು ನಿಮ್ಮ ಗುರಿ ಮುಟ್ಟಲು ನಿಮಗೆ ಸಹಾಯ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಮತ್ತೆ ನೀವು? ಆದಷ್ಟು ಬೇಗ, ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿರುವ ‘ಯಶಸ್ವಿಯಾಗಿ ಉಪ್ಪಿನಕಾಯಿ ಬಿಜಿನೆಸ್ ಕಟ್ಟುವುದು ಹೇಗೆ?’ ಎಂಬ ಕೋರ್ಸ್ ಅನ್ನು ನೋಡಲಾರಂಭಿಸಿ ಮತ್ತು ನಿಮ್ಮ ಹಣ ಗಳಿಕೆ ವೃದ್ಧಿಗೊಳಿಸಿ. ಮಾರ್ಗದರ್ಶಕರ ವಿವರ

  • ಡಾ. ಲಕ್ಷ್ಮೀ ದೇವಿ ಗೋಪಿನಾಥ್- ಮಾಲೀಕರು, ಮಥುರಾ ಪ್ರಾಡಕ್ಟ್್ಸ
  • ನಾರಾಯಣ ಭಟ್ - ಮಾಲೀಕರು, ನಂಜನಗೂಡು ಸುರುಚಿ ಪಿಕ್ಕಲ್ಸ್
  • ಇದಾಯತ್ ಉಲ್ಲಾ -ಮಾಲೀಕರು, ಜೆಮಿನಿ ಪಿಕ್ಕಲ್ಸ್ಗೇ
  • ನಾಗೇಶ್ ಕುಮಾರ್- ಮಾಲೀಕರು, ಮನೆ ಉಪ್ಪಿನಕಾಯಿ
  • ನವೀನ್ ಸೋಮಯಾಜಿ- ಮಾಲೀಕರು, ಸೋನಾ ಪಿಕ್ಕಲ್ಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net