

ಅಡುಗೆ ಮಾಡುವ ಮತ್ತು ಮಾರಾಟ ಮಾಡುವ ವ್ಯವಸ್ಥೆ ಹೊಂದಿರುವ ವಾಹನವನ್ನು ಬೇಕಾದಲ್ಲಿಗೆ ತೆಗೆದುಕೊಂಡು ಹೋಗಿ ಜನರಿಗೆ ಆಹಾರ ಪೂರೈಸುವ ವ್ಯವಸ್ಥೆಯನ್ನು ಫುಡ್ ಟ್ರಕ್ ಬಿಸಿನೆಸ್ ಎಂದು ಹೇಳಬಹುದು. ಒಂದು ಆಟೋ, ಕಾರ್, ಟೆಂಪೋ, ವ್ಯಾನ್ ಇದ್ದರೆ ಸಾಕು ಅದನ್ನು ಆಲ್ಟ್ರೇಷನ್ ಮಾಡಿಸಿ ಅಡುಗೆ ತಯಾರಿಸಲು ಬೇಕಾದ ಸಲಕರಣೆಗಳನ್ನು ಅಳವಡಿಸಿಕೊಂಡು ಫುಡ್ ಟ್ರಕ್ ಬಿಸಿನೆಸ್ ಅರಂಭಿಸಬಹುದು. ಆರಂಭಿಕ 50 ಸಾವಿರ ರೂ. ಬಂಡವಾಳದಿಂದ ಹಿಡಿದು 1 ಲಕ್ಷ , 3 ಲಕ್ಷ , 5 ಲಕ್ಷ, 10 ಲಕ್ಷ ರೂ. ವರೆಗೆ ಖರ್ಚು ಮಾಡಿ ಫುಡ್ ಟ್ರಕ್ ವಾಹನ ವಿನ್ಯಾಸ ಮಾಡಿಸಿಕೊಳ್ಳಬಹುದು. ಫುಡ್ ಟ್ರಕ್ಗೆ ಎಷ್ಟು ವೆಚ್ಚ ಮಾಡಬೇಕು ಎನ್ನುವುದನ್ನು ನೀವು ಎಷ್ಟು ಬಂಡವಾಳ ಹಾಕಲು ಶಕ್ತರಾಗಿದ್ದೀರಿ ಎನ್ನುವ ಆಧಾರದಲ್ಲಿ ನಿರ್ಧರಿಸಬೇಕಾಗುತ್ತದೆ. ಹಳೆಯ ವಾಹನ ಖರೀದಿಸಿ ಬಾಡಿ ಬಿಲ್ಡಿಂಗ್ ಮಾಡಿಸಿಕೊಂಡರೆ ಖರ್ಚು ಕಡಿಮೆ. ಹೋಟೆಲ್ ಆರಂಭಿಸಲು ಬೇಕಿರುವ ಬಂಡವಾಳದ ಲೆಕ್ಕಾಚಾರ ಮಾಡಿದರೆ ಫುಡ್ ಟ್ರಕ್ ಚೀಪ್ ಆಂಡ್ ಬೆಸ್ಟ್.
ಬೇಕಿರುವ ಅನುಮತಿ: ಫುಡ್ ಟ್ರಕ್ ಬಿಸಿನೆಸ್ ಮಾಡೋಕೆ ಆರ್ಟಿಒ, ಅಗ್ನಿಶಾಮಕ ಇಲಾಖೆ, ಕಾಪೋರೇಷನ್ ಮತ್ತು ಆಹಾರ ಇಲಾಖೆಯ ಲೈಸೆನ್ಸ್ ಬೇಕಾಗುತ್ತದೆ. ಇದನ್ನೆಲ್ಲ ಸುಲಭದಲ್ಲಿ ಪಡೆಯೋದು ಹೇಗೆ ಅನ್ನೋದನ್ನು ಶೈನ್ ಶೆಟ್ಟಿ ನಿಮಗೆ ಕೋರ್ಸ್ನಲ್ಲಿ ತಿಳಿಸಿಕೊಟ್ಟಿದ್ದಾರೆ.
ಮೆನು ಮಹತ್ವ: ಫುಡ್ ಟ್ರಕ್ ಬಿಸಿನೆಸ್ ಸಕ್ಸಸ್ ಆಗಬೇಕು ಅಂದ್ರೆ ನಿಮ್ಮ ಪ್ರದೇಶದಲ್ಲಿ ಜನರು ಇಷ್ಟಪಟ್ಟು ತಿನ್ನುವ ಆಹಾರ ಎನ್ನುವುದನ್ನು ಅರಿತುಕೊಳ್ಳಬೇಕು. ಈಗಾಗಲೆ ಆ ಪ್ರದೇಶದಲ್ಲಿ ಎಷ್ಟು ಫುಡ್ ಟ್ರಕ್ಗಳಿವೆ? ಆ ಟ್ರಕ್ಗಳಲ್ಲಿ ಯಾವ ರೀತಿಯ ಆಹಾರ ಪೂರೈಕೆಯಾಗುತ್ತಿದೆ? ನಿಮ್ಮ ಫುಡ್ ಟ್ರಕ್ನಲ್ಲಿ ಸಿಗುವ ವೆರೈಟಿ ಏನು? ವಾಸ್ತವದಲ್ಲಿ ನೀವು ಕೊಡುವ ಆಹಾರ ಜನರಿಗೆ ಇಷ್ಟವಾಗುವುದೇ? ನಿಮಗೆ ಲಾಭ ಗಳಿಸಲು ಸಾಧ್ಯವೇ ಎನ್ನುವ ಅಂಶಗಳನ್ನು ಅರಿತುಕೊಳ್ಳಬೇಕು.
ಲಾಭದ ಲೆಕ್ಕಾಚಾರ: ಒಂದೇ ಜಾಗದಲ್ಲಿರುವ ಹೋಟೆಲ್ ಅಥವಾ ರೆಸ್ಟೋರೆಂಟ್ಗಳಿಗಿಂತಲೂ ಅಲ್ಲಿ-ಇಲ್ಲಿ ತಿರುಗಾಡುತ್ತ ಊರಿನ ಜನರಿಗೆ ಖಾದ್ಯ ಬಡಿಸುವ ಫುಡ್ ಟ್ರಕ್ ಬಿಸಿನೆಸ್ ಬಹಳ ಲಾಭಾದಾಯಕ. ಬೆಳಗ್ಗೆ, ಮಧ್ಯಾಹ್ನ ಕಾಲೇಜು ಅಥವಾ ಆಫೀಸ್ಗಳ ಮುಂದೆ, ಸಂಜೆ ಹೊತ್ತು ರೈಲ್ವೆ ಅಥವಾ ಬಸ್ನಿಲ್ದಾಣಗಳ ಆಸುಪಾಲಿನಲ್ಲಿ ಫುಡ್ ಟ್ರಕ್ ನಿಲ್ಲಿಸ್ಕೊಂಡು ಬುದ್ಧಿವಂತಿಕೆಯಿಂದ ಕೆಲ್ಸ ಮಾಡಿದ್ದೇ ಆದ್ರೆ ಇದಕ್ಕಿಂತ ಲಾಭ ಕೊಡುವ ಸಿಂಪಲ್ ಉದ್ಯಮ ಬೇರೊಂದಿರಲ್ಲ. ಅಷ್ಟೇ ಅಲ್ಲ ಒಂದೇ ಕಿಚನ್ ಇಟ್ಕೊಂಡು ಅಡುಗೆ ಮಾಡುತ್ತಾ ಹಲವಾರು ಟ್ರಕ್ಗಳನ್ನ ಬಳಸಿ ಸಾಕಷ್ಟು ಜನಸಂಖ್ಯೆ ಇರೋ ವಿವಿಧ ಏರಿಯಾಗಳಲ್ಲಿ ಮಾರಾಟ ಮಾಡೋಕೆ ಶುರು ಮಾಡಿದ್ರೆ ಕೈ ತುಂಬಾ ದುಡ್ಡು.
ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಶೈನ್ ಶೆಟ್ಟಿ: ಬಹಳಷ್ಟು ಜನ ಹೋಟೆಲ್ ಉದ್ಯಮವನ್ನು ಬೆಳೆಸೋಕೆ ತುಂಬಾ ಶ್ರಮಿಸ್ತಾರೆ. ಆದರೆ ಪರಿಶ್ರಮದ ಜತೆಗೆ ಬುದ್ಧಿವಂತಿಕೆನೂ ಮುಖ್ಯ ಅನ್ನೋದನ್ನ ಮರೆತು ಬಿಡ್ತಾರೆ. ಹಾಗಾದ್ರೆ, ಬುದ್ಧಿವಂತಿಕೆಯಿಂದ ಫುಡ್ ಟ್ರಕ್ ಬಿಸಿನೆಸ್ ಆರಂಭಿಸೋದು ಹೇಗೆ? ಒಳ್ಳೆಯ ವ್ಯಾಪಾರ ಆಗುವ ಹಾಗೆ ಮಾಡೋದು ಹೇಗೆ? ಎಷ್ಟು ಜನ ಕೆಲಸಗಾರರು ಬೇಕು? ಮಾರ್ಕೆಟಿಂಗ್ ಮಾಡೋದು ಹೇಗೆ? ಇವೆಲ್ಲವನ್ನ ನಿಮಗೆ ಹೇಳಿ ಕೊಡೋಕೆ ಇಂಡಿಯನ್ ಮೆನಿ ಡಾಟ್ ಕಾಂ ಒಬ್ಬ ಒಳ್ಳೆಯ ಸ್ಟಾರ್ ಅನ್ನು ಹುಡುಕಿದೆ. ಯಾರು ಅಂತಿರಾ? ಕನ್ನಡದ ಬಿಗ್ಬಾಸ್ ಸೀಸನ್ 7ರ ವಿನ್ನರ್, ನಟ, ಬೆಂಗಳೂರಿನ ಬನಶಂಕರಿಯಲ್ಲಿ ಸಣ್ಣದಾಗಿ ಫುಡ್ ಟ್ರಕ್ ಬಿಸಿನೆಸ್ ಆರಂಭಿಸಿ ಈಗ ಗಲ್ಲಿ ಕಿಚನ್ ಎಂಬ ಫುಡ್ ಟ್ರಕ್ ಬ್ರಾ್ಯಂಡ್ ಕಟ್ಟಿ ಖ್ಯಾತಿಗಳಿಸಿರುವ ಶೈನ್ ಶೆಟ್ಟಿ. ಇವರೇ ಖುದ್ದಾಗಿ ನಿಮಗೆ ಈ ಫುಡ್ ಟ್ರಕ್ ಬಿಸಿನೆಸ್ನಲ್ಲಿ ಲಾಭ ಗಳಿಸೋದು ಹೇಗೆ ಎಂಬುದನ್ನು ವಿವರಿಸ್ತಾರೆ. ತೆರೆಯ ಮೇಲೆ ಪ್ರಖ್ಯಾತಿ ಗಳಿಸಿದ ವ್ಯಕ್ತಿ ತೆರೆಯ ಹಿಂದೆ ಫುಡ್ ಟ್ರಕ್ ಬಿಸಿನೆಸ್ ಆರಂಭಿಸಲು ಕಾರಣ ಏನು? ಇವೆಲ್ಲದರ ಸಮಗ್ರ ಮಾಹಿತಿ, ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿರುವ ಫುಡ್ ಟ್ರಕ್ ಬಿಸಿನೆಸ್ ಶುರು ಮಾಡೋದು ಹೇಗೆ? ಎಂಬ ಕೋರ್ಸ್ನಲ್ಲಿ ಲಭ್ಯ. ಆದಷ್ಟು ಬೇಗ ನೀವೂ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ ಲೋಡ್ ಮಾಡಿ,ಫುಡ್ ಟ್ರಕ್ ಬಿಸಿನೆಸ್ ನೋಡಲು ಆರಂಭಿಸಿ, ಶ್ರೀಮಂತಿಕೆಯ ಪ್ರಯಾಣ ಶುರು ಮಾಡಿ.