ವೈಜ್ಞಾನಿಕವಾಗಿ ಕುರಿ-ಮೇಕೆ ಸಾಕಣೆ ಮಾಡುವುದು ಹೇಗೆ?

Kuri money mathu
Published on
ಕುರಿ ಕೊಬ್ಬಿದಷ್ಟು ಲಾಭ ಎಂಬ ಮಾತಿನಂತೆ ಬಲಿಷ್ಠವಾದ ಕುರಿ ಮತ್ತು ಮೇಕೆಗಳಿಗೆ ದಿನ ಕಳೆದಂತೆ ಎಲ್ಲೆಡೆ ಬೇಡಿಕೆ ಹೆಚ್ಚಾಗುತ್ತಿದೆ. ಸ್ವಂತ ಉದ್ಯೋಗದ ಆಕಾಂಕ್ಷಿಗಳಿಗೆ, ಕೃಷಿಯ ಜತೆ ಉಪಕಸುಬು ಮಾಡಿ ಆದಾಯ ಹೆಚ್ಚಿಸಿಕೊಳ್ಳಬೇಕು ಎನ್ನುವವರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ಒಳ್ಳೆಯ ಆಯ್ಕೆ. ಕರ್ನಾಟಕದ ಹಲವೆಡೆ ಅನೇಕ ಪ್ರಗತಿಪರ ರೈತರು ಕುರಿ ಮತ್ತು ಮೇಕೆ ಸಾಕಣೆ ಮಾಡಿ ವಾರ್ಷಿಕ 30 ಲಕ್ಷದ ರೂ.ವರೆಗೆ ಆದಾಯ ಗಳಿಸುತ್ತಿದ್ದಾರೆ. ಕುರಿ ಸಾಕಾಣಿಕೆಯು ಲಾಭದಾಯಕ ವೃತ್ತಿಯಾಗಿರುವುದರಿಂದ ಎಲ್ಲರಿಗೂ ಭವಿಷ್ಯವಿದೆ. ಇಂದಿಗೂ ಸಾಕಷ್ಟು ಜನ ಹಳೆ ಪದ್ಧತಿಯಲ್ಲೇ ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಆದರೆ, ವೈಜ್ಞಾನಿಕವಾಗಿ ಕುರಿ ಸಾಕಾಣಿಕೆ ಮಾಡಿದಾಗ ಮಾತ್ರ ಈ ವೃತ್ತಿಯಲ್ಲಿ ಬೆಳೆಯಲು ಸಾಧ್ಯ. ಕುರಿಗಳಿಗೆ ಬರುವ ರೋಗ, ಅದರ ನಿವಾರಣೆ, ಕುರಿ ತಳಿಗಳ ಭಿನ್ನತೆ, ಮೇವು ವಿತರಣೆ, ಕುರಿ ಶೆಡ್ ನಿರ್ಮಾಣ ಸೇರಿದಂತೆ ಪ್ರಮುಖ ಅಂಶಗಳ ಬಗ್ಗೆ ವೈಜ್ಞಾನಿಕವಾಗಿ ಮಾಹಿತಿ ಪಡೆದು ಕುರಿ ಸಾಕಾಣಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು. ಹಾಗಾದ್ರೆ ನಾನು ಕೂಡ ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಹಣ ಗಳಿಸಲು ಸಾಧ್ಯಾನಾ? ಅಂತ ನೀವು ಕೇಳಿದ್ರೆ, ಹೌದು ಖಂಡಿತ ಸಾಧ್ಯ.

ಕೋವಿಡ್​ನಿಂದ ನೊಂದವರಿಗೂ ಕುರಿ-ಮೇಕೆ ಸಾಕಣೆ ಆಸರೆ: ಕೋವಿಡ್ ಸಂಕಷ್ಟ ಹಲವರ ಬದುಕನ್ನು ಮೂರಾಬಟ್ಟೆಯಾಗಿಸಿದೆ. ಅನೇಕ ಕಂಪನಿಗಳು ಬಾಗಿಲು ಮುಚ್ಚಿದ ಪರಿಣಾಮ ಸಂಬಳ ನಂಬಿ ಬದುಕುತ್ತಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲ ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದರೂ ಸಂಬಳದ ಖಾತರಿಯಿಲ್ಲದಂತಾಗಿದೆ. ಈ ಅಭದ್ರತೆಯ ಸ್ಥಿತಿಯಿರುವುದರಿಂದ ಹೆಚ್ಚಿನ ಜನರು ಕುರಿ-ಮೇಕೆ ಸಾಕಾಣಿಕೆಯತ್ತ ಆಸಕ್ತಿ ತೋರುತ್ತಿದ್ದಾರೆ.

ಬೇಡಿಕೆ: ನಮ್ಮ ದೇಶದ ಜಿಡಿಪಿಗೆ ವ್ಯವಸಾಯದ ಕೊಡುಗೆ ಶೇ 18 ರಷ್ಟು. ಇದರ ಪೈಕಿ ಶೇ 33ರಷ್ಟು ಅಂದರೆ, ಒಟ್ಟು ಜಿಡಿಪಿಯಲ್ಲಿ ಶೇ 6ರಷ್ಟು ಕುರಿ, ಮೇಕೆ ಮತ್ತು ಹಸು ಸಾಕಣೆಯ ಕೊಡುಗೆಯಿದೆ. ಇನ್ನು ನಮ್ಮ ದೇಶದಲ್ಲಿ ಮಾಂಸಪ್ರಿಯರ ಸಂಖ್ಯೆ ಜಾಸ್ತಿ ಇರುವ ಕಾರಣ ಕುರಿ ಹಾಗು ಮೇಕೆಗೆ ಬಹಳ ಬೇಡಿಕೆ ಇದ್ದು ಬೆಲೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಮಾಂಸದ ಕಾರಣದಿಂದ ಮಾತ್ರವಲ್ಲದೇ ಚರ್ಮ ಮತ್ತು ಉಣ್ಣೆಯಿಂದ ಹಲವು ಉತ್ಪನ್ನಗಳು ತಯಾರಾಗುವ ಕಾರಣ ಕುರಿ ಮತ್ತು ಮೇಕೆ ಸಾಕಾಣಿಕೆ ಉದ್ಯಮ ಉತ್ತಮ ರೀತಿಯಲ್ಲಿ ಯಶಸ್ಸು ಕಾಣುತ್ತಿದೆ. ಬಹಳಷ್ಟು ಜನ ಸಣ್ಣ ಪ್ರಮಾಣದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಆರಂಭ ಮಾಡಿ ಈಗ ದೊಡ್ಡ ಮಟ್ಟದಲ್ಲಿ ಲಾಭಾಂಶವನ್ನು ಗಳಿಸುತ್ತಿದ್ದಾರೆ.

ಕುರಿ ಮತ್ತು ಮೇಕೆ ತಳಿಗಳು: ನಮ್ಮ ದೇಶದಲ್ಲಿ ಒಟ್ಟಾರೆ 44 ರೀತಿಯ ಕುರಿ ಮತ್ತು 34 ಜಾತಿಯ ಮೇಕೆಗಳಿವೆ. ಕುರಿ ತಳಿಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ. 1. ಮಾಂಸ ಉತ್ಪಾದಕ ಕುರಿ ತಳಿಗಳು: ಡಾರ್ಸೆಟ್, ಸಫೊಲ್ಕ್, ಚೆವಿಯಟ್ ಮತ್ತಿತರ ತಳಿಗಳು 2. ಉಣ್ಣೆ ಉತ್ಪಾದಕ ಕುರಿ ತಳಿಗಳು: ಮೆರಿನೊ, ರಾಂಬುಲೆಟ್ ಮತ್ತಿತರ ತಳಿಗಳು 3. ಉಣ್ಣೆ ಮತ್ತು ಮಾಂಸ ಉತ್ಪಾದಕ ಕುರಿ ತಳಿಗಳು: ಮೊಂಟಾಡೇಲ್, ಕೂಕಾ ಇತ್ಯಾದಿ ಉಣ್ಣೆ ಮತ್ತು ಮಾಂಸ ಉತ್ಪಾದನೆಗೆ ಪ್ರಸಿದ್ಧವಾಗಿವೆ.

ಕಲಿಕೆಯಿಂದ ಮಾತ್ರ ಗಳಿಕೆ ಸಾಧ್ಯ: ಪ್ರತಿ ವೃತ್ತಿಯು ಕಲಿಕೆಯನ್ನು ಅಪೇಕ್ಷಿಸುತ್ತದೆ. ಕಲಿಕೆಯಿಂದ ಜ್ಞಾನ ಗಳಿಸಿದರೆ ಯಾರು ಬೇಕಾದರೂ ಹಣ ಸಂಪಾದಿಸಬಹುದು. ನಿರಂತರ ಕಲಿಕೆಯೊಂದಿಗೆ ಪರಿಶ್ರಮ ಹಾಕುವವರು ಯಾವುದೇ ವೃತ್ತಿಯಲ್ಲಿ ಸಫಲರಾಗುತ್ತಾರೆ. ಜ್ಞಾನ ಪಡೆದುಕೊಳ್ಳುವ ಅವಕಾಶ ಸಿಕ್ಕಾಗ ಕೈಚೆಲ್ಲದೆ ಸದುಪಯೋಗಪಡಿಸಿಕೊಳ್ಳಬೇಕು.

ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಕುರಿ-ಮೇಕೆ ಸಾಕಾಣಿಕೆ ಕೋರ್ಸ್

ನಾರಿ ಸುವರ್ಣ, ಬನ್ನೂರು, ಉಸ್ಮನಾಬಾದಿ, ಬೋಯರ್.. ಅಬ್ಬಬ್ಬಾ ಒಂದಾ ಎರಡಾ? ಇಂಡಿಯನ್ ಮನಿ ಡಾಟ್ ಕಾಂ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಕುರಿ-ಮೇಕೆ ಕುರಿತ ಹಲವು ಕೋ ಕೋರ್ಸ್​ಗಳಿವೆ. ಕುರಿ ಮತ್ತು ಮೇಕೆ ಸಾಕಾಣಿಕೆಗೆ ಬೇಕಾದ ಸಮಗ್ರ ಮಾಹಿತಿ ಅಡಕವಾಗಿದೆ. ಕುರಿ-ಮೇಕೆ ಸಾಕಣೆಯಲ್ಲಿ ಯಶಸ್ಸು ಗಳಿಸಿ ಲಕ್ಷಾಂತರ ರೂ. ಸಂಪಾದಿಸುತ್ತಿರುವ ತಜ್ಞರೇ ನಿಮಗೆ ಕೋ ಕೋರ್ಸ್​ನಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಹಾಗಾದ್ರೆ ಇನ್ನೇಕೆ ತಡ, ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ ಕುರಿ-ಮೇಕೆ ಸಾಕಣೆ ಬಗ್ಗೆ ಇರುವ ಕೋ ಕೋರ್ಸ್​ಗಳನ್ನು ವೀಕ್ಷಿಸಿ, ನೀವೂ ಹೆಚ್ಚೆಚ್ಚು ಸಂಪಾದಿಸಿ.

ಕೃಷಿ ಸಂಬಂಧಿತ ಉಪಕಸುಬುಗಳ ಬಗ್ಗೆ ಕೋರ್ಸ್: ಕೋಳಿ ಸಾಕಣೆ ಕೋರ್ಸ್, ಹಂದಿ ಸಾಕಣೆ ಕೋರ್ಸ್, ಕುರಿ ಮತ್ತು ಮೇಕೆ ಸಾಕಾಣಿಕೆ ಕೋರ್ಸ್, ಮೀನು ಕೃಷಿ ಕೋರ್ಸ್, ಹೈನುಗಾರಿಕೆ ಕೋರ್ಸ್, ಕಡಕ್​ನಾಥ್ ಕೋಳಿ ಸಾಕಣೆ ಕೋರ್ಸ್, ಜೇನು ಸಾಕಣೆ ಕೋರ್ಸ್, ಸೀಗಡಿ ಕೃಷಿ ಕೋರ್ಸ್, ಗಾಣದ ಎಣ್ಣೆ ಬಿಸಿನೆಸ್ ಕೋರ್ಸ್ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಕೋರ್ಸ್​ಗಳಿವೆ.

ಕುರಿ-ಮೇಕೆ ಸಾಕಣೆ ಬಗ್ಗೆ ಇಲ್ಲಿವೆ ಸಮಗ್ರ ಕೋರ್ಸ್​ಗಳು

  • ಕುರಿ ಮತ್ತು ಮೇಕೆ ಸಾಕಾಣಿಕೆ ಬೇಸಿಕ್ ಕೋರ್ಸ್
  • ಉಸ್ಮಾನಾಬಾದಿ ಮೇಕೆ ಸಾಕಣೆ ಕೋರ್ಸ್
  • ಬನ್ನೂರು ಕುರಿ ಸಾಕಣೆ ಕೋರ್ಸ್
  • ಬೋಯರ್ ಮೇಕೆ ಸಾಕಣೆ ಕೋರ್ಸ್
  • ನಾರಿಸುವರ್ಣ ಕುರಿ ಸಾಕಣೆ ಕೋರ್ಸ್

ಕುರಿ-ಮೇಕೆ ಸಾಕಾಣಿಕೆಗೆ ಸರ್ಕಾರದ ಸವಲತ್ತುಗಳು: ಕುರಿ-ಮೇಕೆ ಸಾಕಾಣಿಕೆಗೂ ಬ್ಯಾಂಕ್​ಗಳಿಂದ ಸಾಲ ಸೌಲಭ್ಯ ಸಿಗುತ್ತದೆ. ಇದಲ್ಲದೆ ಕುರಿ ಮತ್ತು ಮೇಕೆ ಶೆಡ್ ನಿರ್ವಣಕ್ಕೆ ನರೇಗಾ ಯೋಜನೆಯಡಿ ರೂ. 68 ಸಾವಿರ ಸಹಾಯಧನ ನೀಡಲಾಗುತ್ತದೆ. ಆಸಕ್ತರು ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಸಂರ್ಪಸಿ ಸಹಾಯಧನ ಪಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net