

ನರ್ಸರಿ ಘಟಕಗಳಲ್ಲಿ ಕಂಡುಬರುವ ಸಸಿ ಕೊಳೆ ರೋಗವನ್ನು ನಿರ್ವಹಣೆ ಮಾಡುವುದು ಹೇಗೆ?
| ವೇಣು ಚಿಕ್ಕಬಳ್ಳಾಪುರ
ತರಕಾರಿ ಅಥವಾ ಹೂವಿನ ಬೆಳೆಗಳಲ್ಲಿ ಉತ್ತಮ ಗುಣಮಟ್ಟದ ಅಧಿಕ ಇಳುವರಿಯನ್ನು ಪಡೆಯಲು ಆರೋಗ್ಯಕರ ಮತ್ತು ಪೀಡೆಮುಕ್ತ ಗುಣಮಟ್ಟದ ಸಸಿಗಳ ಉತ್ಪಾದನೆಯು ಅತೀ ಮುಖ್ಯ. ಇತ್ತೀಚಿಗೆ ರೈತರು ನೆರಳು ಪರದೆ ನರ್ಸರಿ ಟಕಗಳಲ್ಲಿ/ಸಂರತ ಮನೆಗಳಲ್ಲಿ, ಪೋ&ಟ್ರೇಗಳಲ್ಲಿ ಉತ್ತಮ ಗುಣಮಟ್ಟದ ಸಸಿಗಳ ಉತ್ಪಾದನೆಯನ್ನು ಕೈಗೊಂಡಿದ್ದಾರೆ. ಪೋ&ಟ್ರೇಗಳಲ್ಲಿ ಚೆನ್ನಾಗಿ ಕಳಿತ ಹಾಗೂ ನಿರ್ಜೀವಗೊಳಿಸಿದ ತೆಂಗಿನ ನಾರನ್ನು ಮಾಧ್ಯಮವನ್ನಾಗಿ ಬಳಸಬಹುದು. ಈ ಮಾಧ್ಯಮವನ್ನು ಬಳಸುವ ಮೊದಲು ಜೈವಿಕ ಗೊಬ್ಬರಗಳಾದ ಟ್ರೆಕೋಡರ್ಮ ಮತ್ತು ಸುಡೊಮೊನಾಸ್ ಅನ್ನು ಪ್ರತಿ ಒಂದು ಕಿ. ಗ್ರಾಂ ಮಾಧ್ಯಮಕ್ಕೆ 5 ಗ್ರಾಂ ನಂತೆ ಉಪಚರಿಸಬೇಕು. ಹೀಗೆ ಮಾಡುವುದರಿಂದ ನರ್ಸರಿಗಳಲ್ಲಿ ಕಂಡು ಬರುವ ಸಸಿ ಕೊಳೆ ರೋಗವನ್ನು ನಿರ್ವಹಣೆ ಮಾಡುವುದಲ್ಲದೆ, ಸಸಿಗಳನ್ನು ಬಲ ಪಡಿಸಿ ಆರೋಗ್ಯದಿಂದಿರಿಸಬಹುದು.
| ಡಾ. ಶಾಲಿನಿ ಎಂ. ತೋಟಗಾರಿಕೆ ತರು