ಬಾಯಿಯಲ್ಲಿ ನೀರು ತರಿಸುವ ಪಾಲಕ್​ ರೈಸ್

ಪಾಲಕ್​​​​​ರಹೆ
Published on

ಅಕ್ಕಿಯನ್ನು ಉಪಯೋಗಿಸಿ ಅನೇಕ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಇಂಥ ಖಾದ್ಯಗಳ ಪೈಕಿ ಇಲ್ಲಿ ಕೆಲವುಗಳ ಪರಿಚಯ ನೀಡಲಾಗಿದೆ.

ಬೇಕಾಗುವ ಸಾಮಗ್ರಿ: 1 ಕೆ.ಜಿ ಅಕ್ಕಿ, 1 ಕಟ್ಟು ಪಾಲಕ್​, ಪುದಿನ, 100 ಗ್ರಾಂ ಹಸಿಮೆಣಸು, 1 ಕಟ್ಟು ಕೊತ್ತಂಬರಿ, ಒಂದೂವರೆ ಚಮಚ ಅಡುಗೆ ಎಣ್ಣಿ, ಒಂದೂವರೆ ಇಂಚು ಹಸಿ ಶುಂಠಿ, 6- 8 ಲವಂಗ, ಉಪ್ಪು.

ಮಾಡುವ ವಿಧಾನ: ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆಯಿರಿ. ಹಸಿ ಮೆಣಸು, ಪುದೀನಾ ತುಸು ಬಿಸಿ ಮಾಡಿಕೊಂಡು ತೊಳೆದ ಪಾಲಕ್ ಸೊಪ್ಪಿನೊಂದಿಗೆ ಮಿಕ್ಸಿ ಜಾರಿನಲ್ಲಿ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಲವಂಗ, ಹಸಿ ಶುಂಠಿಯ ಕತ್ತರಿಸಿದ ತುಂಡುಗಳನ್ನು ಹಾಕಿ. ನಂತರ ಪೇಸ್ಟ್ ಮಾಡಿದ ಪಾಲಕ್ ಸೊಪ್ಪನ್ನು ಹಾಕಿ ಚೆನ್ನಾಗಿ ತಾಳಿಸಿ. ಈಗ ಅಕ್ಕಿಯ ಪ್ರಮಾಣಕ್ಕೆ ತಕ್ಕಂತೆ ನೀರು, ಉಪ್ಪನ್ನು ಹಾಕಿ ನೀರು ಕುದಿಸಿ. ನಂತರ ಅಕ್ಕಿಯನ್ನು ಹಾಕಿ ಅನ್ನ ತಯಾರಿಸಿ.

|ಅರವಿಂದ ಬಿ ಲೋಕರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net