ಈರುಳ್ಳಿ ಪುಲಾವ್ಗೆ ಮನಸೋಲದವರಿಲ್ಲ

ಇರುಳ್ಳಿ
Published on

ಅಕ್ಕಿಯನ್ನು ಉಪಯೋಗಿಸಿ ಅನೇಕ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಇಂಥ ಖಾದ್ಯಗಳ ಪೈಕಿ ಇಲ್ಲಿ ಕೆಲವುಗಳ ಪರಿಚಯ ನೀಡಲಾಗಿದೆ.

ಬೇಕಾಗುವ ಸಾಮಗ್ರಿ: ಅಕ್ಕಿ 250 ಗ್ರಾಂ, ಹಾಲು 10 ಎಮ್​ಲ್, ಈರುಳ್ಳಿ 250 ಗ್ರಾಂ, ಲವಂಗ 4, ಏಲಕ್ಕಿ 6, ಒಣದ್ರಾಕ್ಷಿ 10, ಗೋಡಂಬಿ 10, ಬಾದಾಮಿ 10, ಚಕ್ಕೆ 1 ಇಂಚು ತುಂಡು, ತುಪ್ಪ 50 ಗ್ರಾಂ, ಎಣ್ಣೆ 50 ಗ್ರಾಂ, ಉಪ್ಪು 2 ಚಮಚ.

ಮಾಡುವ ವಿಧಾನ : ಪಾತ್ರೆಯಲ್ಲಿ ಎಣ್ಣೆ, ತುಪ್ಪ ಹಾಕಿ ಕಾಯಿಸಿ ಈರುಳ್ಳಿ ಹಾಕಿ. ನಂತರ ಲವಂಗ, ಏಲಕ್ಕಿ, ಚಕ್ಕೆ ಕೆಂಪಗೆ ಬಾಡಿಸಿ. ನೀರು ಹಾಕಿ ಕುದ್ದ ನಂತರ ಅಕ್ಕಿ ಹಾಕಿ ಉಪ್ಪು ಹಾಕಿ ಮುಚ್ಚಿ. ಅನ್ನ ಬೆಂದ ನಂತರ ಹಾಲನ್ನು ಹಾಕಿ ಮತ್ತೆ ಕುದಿಸಿ ಕೆಳಗಿಳಿಸಿರಿ. ಅದಕ್ಕೆ ತುಂಡು ಮಾಡಿದ ಬಾದಾಮಿ, ದ್ರಾಕ್ಷಿ, ಗೋಡಂಬಿ ಮಿಕ್ಸ್ ಮಾಡಿ.

|ಅರವಿಂದ ಬಿ ಲೋಕರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net