ಅನ್ನದೊಳಗಿನ ಬಗೆಯನು ಕಾಣಿರಣ್ಣ; ಕೆಂಪು ಮೂಲಂಗಿ ಪುಲಾವ್

ಸರಗ
Published on

ಅಕ್ಕಿಯನ್ನು ಉಪಯೋಗಿಸಿ ಅನೇಕ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಇಂಥ ಖಾದ್ಯಗಳ ಪೈಕಿ ಇಲ್ಲಿ ಕೆಲವುಗಳ ಪರಿಚಯ ನೀಡಲಾಗಿದೆ.

ಬೇಕಾಗುವ ಸಾಮಗ್ರಿ: 50 ಗ್ರಾಂ ಕೆಂಪು ಮೂಲಂಗಿ, ಬಾಸುಮತಿ ಅಕ್ಕಿ, 250 ಗ್ರಾಂ, ತುಪ್ಪ 1 ಸೌಟು, ಮೊಸರು 8 ಚಮಚ, ಹಸಿಮೆಣಸು 4, ಗರಂ ಮಸಾಲಾ ಪುಡಿ 1 ಚಮಚ, ಲವಂಗ 4, ಅರಿಶಿಣಪುಡಿ 2 ಚಿಟಿಕೆ, ಉಪ್ಪು 3 ಚಮಚ.

ಮಾಡುವ ವಿಧಾನ : ಮೊದಲು ಬಾಸುಮತಿ ಅಕ್ಕಿಯನ್ನು 5 ನಿಮಿಷ ನೆನೆಹಾಕಿ ಬಸಿದಿಡಿ. ಪಾತ್ರೆಯಲ್ಲಿ ತುಪ್ಪ ಹಾಕಿ ಅಕ್ಕಿಯನ್ನು ಹುರಿಯಿರಿ. ಈರುಳ್ಳಿ, ಹಸಿಮೆಣಸು, ಅರಿಶಿಣ ಪುಡಿ, ಗರಂ ಮಸಾಲೆ, ಲವಂಗ ಸೇರಿಸಿ. ಸ್ವಲ್ಪ ಹೊತ್ತು ಹುರಿದು ಮೊಸರು ಹಾಗೂ ಕೆಂಪು ಮೂಲಂಗಿ ಹೋಳನ್ನು ಹಾಕಿ ಅಕ್ಕಿಗೆ 2ರಷ್ಟು ನೀರು ಹಾಕಿ 10 ನಿಮಿಷ ಬೇಯಲು ಬಿಡಿ. ನಂತರ ಉಪ್ಪು ಹಾಕಿ ಕಲಕಿ ತಟ್ಟೆ ಮುಚ್ಚಿ, ಸಣ್ಣ ಉರಿಯಲ್ಲಿ 5 ನಿಮಿಷ ಹದವಾಗಿ ಬೆಂದ ನಂತರ ಕೆಳಗೆ ಇಳಿಸಿ.

|ಅರವಿಂದ ಬಿ ಲೋಕರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net