

ಅಕ್ಕಿಯನ್ನು ಉಪಯೋಗಿಸಿ ಅನೇಕ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಇಂಥ ಖಾದ್ಯಗಳ ಪೈಕಿ ಇಲ್ಲಿ ಕೆಲವುಗಳ ಪರಿಚಯ ನೀಡಲಾಗಿದೆ.
ಬೇಕಾಗುವ ಸಾಮಗ್ರಿ : 1 ಕೆ ಜಿ ಅಕ್ಕಿ, 250 ಗ್ರಾಂ ಬೆಂಡೆಕಾಯಿ, 2 ಈರುಳ್ಳಿ, ಸ್ವಲ್ಪ ಪುದಿನ, 100 ಗ್ರಾಂ ಹಸಿ ಮೆಣಸು, ಸ್ವಲ್ಪ ಕೊತ್ತಂಬರಿ, 1 ಚಮಚ ಜೀರಿಗೆ, 1 ಚಮಚ ಜೀರಿಗೆ ಪುಡಿ, 2 ಚಮಚ ಖಾರದ ಪುಡಿ, 2 ಚಮಚ ಗರಮ ಮಸಾಲೆ ಪುಡಿ, 3 ಚಮಚ ಅಡುಗೆ ಎಣ್ಣೆ, ಒಂದೂವರೆ ಇಂಚು ಹಸಿ ಶುಂಠಿ, ಉಪ್ಪು.
ಮಾಡುವ ವಿಧಾನ: ಉಗುರು ಬೆಚ್ಚಗಿನ ನೀರಿನಲ್ಲಿ ಬೆಂಡೆ ತೊಳೆದು ಹತ್ತಿ ಬಟ್ಟೆಯಿಂದ ಒರೆಸಿ ಅಡ್ಡವಾಗಿ ಸೀಳಬೇಕು. ಅದಕ್ಕೆ ಖಾರದ ಪುಡಿ, ಮಸಾಲೆ ಪುಡಿ, ಜೀರಿಗೆ ಪುಡಿ ತುಂಬಬೇಕು. ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿಯಾದ ಮೇಲೆ ಮಸಾಲೆ ತುಂಬಿದ ಬೆಂಡೆಕಾಯಿಯನ್ನು ಎಣ್ಣೆಯಲ್ಲಿ ತಾಳಿಸಿ. ಮತ್ತೊಂದು ಅಡುಗೆ ಪಾತ್ರೆ/ಬಾಣಲೆಯಲ್ಲಿ 1 ಚಮಚ ಎಣ್ಣೆ ಕಾಯಿಸಿ ಹೆಚ್ಚಿಕೊಂಡ ಹಸಿ ಶುಂಠಿ, ಜೀರಿಗೆ ಹಾಕಿ ತಾಳಿಸಿ. ಅಕ್ಕಿಯ ಪ್ರಮಾಣಕ್ಕೆ ತಕ್ಕಂತೆ ನೀರನ್ನು ಹಾಕಿ ಕುದಿಸಿ . ನಂತರ ಅಕ್ಕಿಯನ್ನು ಹಾಕಿ ಅನ್ನ ತಯಾರಿಸಿ. ಅದಕ್ಕೆ ಎಣ್ಣಿಯಲ್ಲಿ ತಾಳಿಸಿದ ಬೆಂಡೆಕಾಯಿಯನ್ನು ಚುಚ್ಚಿ 5 ನಿಮಿಷ ಅನ್ನದ ಪಾತ್ರೆಯನ್ನು ಮುಚ್ಚಬೇಕು.
|ಅರವಿಂದ ಬಿ ಲೋಕರೆ