ಐಪಿಒ ಹೂಡಿಕೆಯಲ್ಲಿ ಲಾಭ ಗಳಿಸೋದು ಹೇಗೆ?

Sudhir F
Published on
ಒಂದಲ್ಲ, ಎರಡಲ್ಲ ಸಾಲು ಸಾಲು ಐಪಿಒಗಳು ಈ ವರ್ಷ ಜರುಗುತ್ತಿವೆ. 2021ರ ಜನವರಿಯಲ್ಲೇ ರೆಲ್ವೆ ಫೈನಾನ್ಸ್ ಕಾಪೋರೇಷನ್, ಇಂಡಿಗೋ ಪೇಂಟ್ಸ್, ಹೋಮ್ ಫಸ್ಟ್ ಫೈನಾನ್ಸ್ ಕಾಪೋರೇಷನ್ ಮತ್ತು ಸ್ಟೌ ಕ್ರಾಫ್ಟ್ ಕಂಪನಿಗಳು ಐಪಿಒ ನಡೆಸಿವೆ. ಸ್ವಲ್ಪ ರಿಸ್ಕ್ ಇದ್ದರೂ ಪರವಾಗಿಲ್ಲ ಹೆಚ್ಚು ದುಡ್ಡು ಗಳಿಸಬೇಕು ಎನ್ನುವವರಿಗೆ ಐಪಿಒ ಒಂದು ಒಳ್ಳೆಯ ಹೂಡಿಕೆ ಸಾಧನ. ಆದರೆ ಎಲ್ಲ ಐಪಿಒಗಳಲ್ಲೂ ಲಾಭ ಗಳಿಸಲು ಸಾಧ್ಯವಿಲ್ಲ. ಹಾಗಾದ್ರೆ ಲಾಭ ಸಿಗೋ ಐಪಿಒ ಗುರುತಿಸೋದು ಹೇಗೆ? ಐಪಿಒ ಹೂಡಿಕೆ ಆರಂಭಿಸೋದು ಹೇಗೆ? ಐಪಿಒದಿಂದ ಸಿಗುವ ಲಾಭದ ಪ್ರಮಾಣ ಎಷ್ಟು? ಐಪಿಒದಲ್ಲಿರುವ ಪ್ರಮುಖ ಹಂತಗಳೇನು? ಹೀಗೆ ಐಪಿಒ ಬಗ್ಗೆ ಮಾಹಿತಿ ಈ ಅಂಕಣದಲ್ಲಿದೆ.

ಐಪಿಒಎಂದರೇನು?: ಐಪಿಒ ಅಂದ್ರೆ ಆರಂಭಿಕ ಸಾರ್ವಜನಿಕ ಹೂಡಿಕೆ. ಇನೀಷಿಯಲ್ ಪಬ್ಲಿಕ್ ಆಫರಿಂಗ್ ಎನ್ನುವುದು ಐಪಿಒ ವಿಸõತ ರೂಪ. ಖಾಸಗಿ ಕಂಪನಿಯೊಂದು ಮೊದಲ ಬಾರಿಗೆ ಸಾರ್ವಜನಿಕರಿಗೆ ತನ್ನ ಷೇರುಗಳನ್ನು ನೀಡುವ ಪ್ರಕ್ರಿಯೆಯನ್ನು ಐಪಿಒ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಕಂಪನಿ ಬಳಿ 1 ಲಕ್ಷ ಷೇರುಗಳಿದ್ದು, ಅದರಲ್ಲಿ 30 ಸಾವಿರ ಷೇರುಗಳನ್ನು ಸಾರ್ವಜನಿಕರಿಗೆ ಕೊಡಲು ನಿರ್ಧರಿಸಿದೆ ಎಂದಾದರೆ ಆ 30 ಷೇರುಗಳನ್ನು ನೀವು ಐಪಿಒ ಮೂಲಕ ಖರೀದಿಸಬಹುದು. ಉದ್ಯಮ ವಿಸ್ತರಣೆಗೆ, ಸಾಲ ಮರುಪಾವತಿಗೆ ಹೀಗೆ ಅನೇಕ ಕಾರಣಗಳಿಗೆ ಐಪಿಒ ಮೂಲಕ ಕಂಪನಿಗಳು ಬಂಡವಾಳ ಸಂಗ್ರಹಿಸುತ್ತವೆ. ಐಪಿಒ ಮಾಡಿದ ಕಂಪನಿಯು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗುತ್ತದೆ.

ಐಪಿಒದಿಂದ ನಿಮಗೇನು ಲಾಭ?: ನೀವು ಐಪಿಒ ಮೂಲಕ ಹಣ ಹೂಡಿಕೆ ಮಾಡಿರುವ ಕಂಪನಿ ಭವಿಷ್ಯದಲ್ಲಿ ಉತ್ತಮ ಪ್ರಗತಿ ತೋರಿ ಹೆಚ್ಚೆಚ್ಚು ಲಾಭ ಗಳಿಸಿದರೆ ಆ ಲಾಭದಲ್ಲಿ ನಿಮಗೂ ಪಾಲಿರುತ್ತದೆ. ಕಂಪನಿ ಉತ್ತಮ ಸಾಧನೆ ತೋರಿದರೆ ಹೆಚ್ಚು ಪರಿಶ್ರಮವಿಲ್ಲದೆ ನೀವು ಲಾಭದ ಪಾಲುದಾರರಾಗುತ್ತೀರಿ. ಆದರೆ, ನೀವು ಹೂಡಿಕೆ ಮಾಡಿರುವ ಕಂಪನಿ ನಷ್ಟ ಅನುಭವಿಸಿದರೆ ಅದರ ಹೊರೆಯನ್ನೂ ಹೊರಬೇಕಾಗುತ್ತದೆ. ಉತ್ತಮ ಕಂಪನಿಗಳ ಐಪಿಒದಲ್ಲಿ ಹೂಡಿಕೆ ಮಾಡಿದರೆ ಷೇರು ಮಾರುಕಟ್ಟೆಯಲ್ಲಿ ಆ ಕಂಪನಿ ಲಿಸ್ಟಿಂಗ್ ಆಗುವ ದಿನವೇ ಷೇರಿನ ಬೆಲೆ ಡಬಲ್ ಆಗಿರುವ ಉದಾಹರಣೆಗಳಿವೆ.
ಐಪಿಒ ಅಂದ್ರೆ ಬ್ಯಾಂಕ್​ನಿಂದ ಸಾಲ ಪಡೆದ ಹಾಗಾ?: ನಾನು ಒಂದು ಎಕರೆ ಜಮೀನು ಕೊಂಡುಕೊಳ್ಳಬೇಕು. ಆ ಒಂದು ಎಕರೆ ಜಮೀನಿಗೆ 10 ಲಕ್ಷ ರೂ. ಎಂದು ಭಾವಿಸೋಣ. ನನಗೆ ಎರಡು ಆಯ್ಕೆಗಳಿವೆ. ನನ್ನ ಬಳಿ 10 ಲಕ್ಷ ರೂ. ಹಣವಿಲ್ಲ, 5 ಲಕ್ಷ ರೂ. ಮಾತ್ರ ಇದೆ. ಆಯ್ಕೆ -1: 5 ಲಕ್ಷ ರೂ. ಅನ್ನು ನಾನು ಬ್ಯಾಂಕ್​ನಿಂದ ಸಾಲ ಪಡೆಯುತ್ತೇನೆ. ಸಾಲ ಪಡೆದ ನಂತರದಲ್ಲಿ ಬಡ್ಡಿ, ಅಸಲು ಪಾವತಿಸಿದರೆ ಮಾಲೀಕತ್ವ ನನ್ನದಾಗುತ್ತದೆ. ಆಯ್ಕೆ -2: ನನ್ನ ಬಳಿ 5 ಲಕ್ಷ ರೂ. ಇದೆ ಬ್ಯಾಂಕ್ ಸಾಲ ಕೊಡುತ್ತಿಲ್ಲ. ಸ್ನೇಹಿತನ ಬಳಿ ಹೋಗಿ 5 ಲಕ್ಷ ರೂ. ಹೂಡಿಕೆಗೆ ಕೇಳುತ್ತೇನೆ. ಆತ ಹಣ ನೀಡಿದ ನಂತರದಲ್ಲಿ ಇಬ್ಬರ ಹೆಸರಿನಲ್ಲೂ ಭೂಮಿ ನೋಂದಣಿಯಾಗುತ್ತದೆ. ತಲಾ ಶೇ.50 ಮಾಲೀಕತ್ವ ಇಬ್ಬರ ಹೆಸರಲ್ಲೂ ಇರುತ್ತದೆ. ಇಲ್ಲಿ ಸ್ನೇಹಿತನಿಗೆ ಸಾಲ, ಬಡ್ಡಿ ಕೊಡಬೇಕಾಗಿಲ್ಲ. ಮುಂದೊಂದು ದಿನ ಸ್ನೇಹಿತನಿಗೆ ದುಡ್ಡು ಬೇಕಾದರೆ ಎರಡು ಆಯ್ಕೆಗಳಿವೆ. ಆಯ್ಕೆ -1: ಅರ್ಧ ಎಕರೆ ಜಮೀನನ್ನು ನನಗೆ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಮಾರಾಟ ಮಾಡುತ್ತಾನೆ. ಆಯ್ಕೆ-2: ಅರ್ಧ ಎಕರೆ ಜಮೀನು ಬೇರೆಯವರಿಗೆ ಮಾರಾಟ ಮಾಡುತ್ತಾನೆ. ಆ ಅರ್ಧ ಎಕರೆ ಜಮೀನಿಗೆ ಹೊಸ ಮಾಲೀಕನ ಆಗಮನವಾಗುತ್ತದೆ. ಹಾಗಾಗಿ ಐಪಿಒ ಎನ್ನುವುದು ಸಾಲ ಪಡೆದ ಹಾಗಲ್ಲ.

ಐಪಿಒ ಹೂಡಿಕೆ ಬಗ್ಗೆ ಸಿ.ಎಸ್. ಸುಧೀರ್ ಅವರಿಂದ ಕಲಿಯಿರಿ

ಐಪಿಒ ಹೂಡಿಕೆ ಮಾಡಿ ಯಶಸ್ವಿಯಾಗುವುದು ಹೇಗೆ ಎನ್ನುವ ಕೋರ್ಸ್ ಅನ್ನು ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಖುದ್ದು ಸಿ.ಎಸ್.ಸುಧೀರ್ ಅವರೇ ವಿನ್ಯಾಸಗೊಳಿಸಿದ್ದಾರೆ. ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಅವರು ಈ ಕೋರ್ಸ್​ನಲ್ಲಿ ಉದಾಹರಣೆ ಸಮೇತ ವಿವರಣೆಗಳನ್ನು ನೀಡಿದ್ದಾರೆ. ಐಪಿಒದಲ್ಲಿ ಹೂಡಿಕೆ ಮಾಡುವುದು ಹೇಗೆ? ಎನ್ನುವ ವಿಚಾರದಿಂದ ಹಿಡಿದು ಐಪಿಒದಲ್ಲಿ ಹೆಚ್ಚು ಹಣ ಗಳಿಸಲು ಸರಿಯಾದ ಹಾದಿ ಯಾವುದು? ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ. ಹಾಗಾದ್ರೆ ಇನ್ನೇಕೆ ತಡ ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ ಲೋಡ್ ಮಾಡಿ, ಐಪಿಒ ಹೂಡಿಕೆಯಲ್ಲಿ ಯಶಸ್ವಿಯಾಗುವುದು ಹೇಗೆ ಎನ್ನುವ ಕೋರ್ಸ್ ವೀಕ್ಷಿಸಿ, ಶ್ರೀಮಂತಿಕೆಯ ಪ್ರಯಾಣ ಶುರು ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net