ಮನಿಮಾತು | ಸೂಪರ್ ​ಮಾರ್ಕೆಟ್ ಬಿಜಿನೆಸ್​ನಲ್ಲಿ ಸಕ್ಸಸ್ ಆಗೋದು ಹೇಗೆ?

Money Mathu
Published on

‘ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ’ ಅಂತ ದೊಡ್ಡವರು ಸುಮ್ನೆ ಹೇಳಿಲ್ಲ. ನಮ್ಮ ಜೀವನದಲ್ಲಿ ಏನ್ ಬೇಕೋ ಬೇಡ್ವೋ? ಆದ್ರೆ, ನಮ್ಮ ದೈನಂದಿನ ಜೀವನ ಸಾಗಿಸೋಕೆ ದಿನಸಿ ಅಂತೂ ಬೇಕೇ ಬೇಕು. ಬಹುಶಃ ನೀವು ಗಮನಿಸಿರಬಹುದು, ಕರೊನಾ ಹೆಮ್ಮಾರಿ ನಮ್ಮ ದೇಶಕ್ಕೆ ಆವರಿಸಿದಾಗ, ಎಲ್ಲವೂ ಬಂದ್ ಆದವು. ಆದ್ರೆ, ಅಂತಹ ಸಂದರ್ಭದಲ್ಲೂ ಚಿಂತೆಯಿಲ್ಲದೆ ಲಾಭ ಗಳಿಸಿದ್ದು, ದಿನಸಿ ಅಂಗಡಿಗಳು ಮತ್ತು ಸೂಪರ್​ಮಾರ್ಕೆಟ್​ಗಳು ಮಾತ್ರ. ಯಾವುದೇ ಉದ್ಯಮದಲ್ಲಾದ್ರೂ, ಲಾಭ-ನಷ್ಟ ಮಾಮೂಲಿ. ಆದ್ರೆ, ಆರ್ಥಿಕ ಏರಿಳಿತದ ಸಂದರ್ಭದಲ್ಲೂ ಬೇಡಿಕೆಯ ಸ್ಥಿರತೆಯೊಂದಿಗೆ ಹೆಚ್ಚು ಲಾಭ ಗಳಿಸಲು ಕಿರಾಣಿ ಅಂಗಡಿಗಳು, ಸೂಪರ್​ಮಾರ್ಕೆಟ್ ಉದ್ಯಮದಿಂದ ಸಾಧ್ಯ. ಹಾಗಾಗಿಯೇ ಸೂಪರ್​ಮಾರ್ಕೆಟ್​ನ ಬೇಡಿಕೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಒಂದು ಏರಿಯಾದಲ್ಲಿ ಏನಿಲ್ಲಾ ಅಂದ್ರೂ 10-20 ದಿನಸಿ ಅಂಗಡಿ ಇದ್ದೆ ಇರ್ತಾವೆ. ಹೀಗಾಗಿಯೇ 2013ರಲ್ಲಿ 22,12,500 ಕೋಟಿ ರೂ. ಇದ್ದಂಥ ದಿನಸಿ ಮಾರುಕಟ್ಟೆಯ ಮೌಲ್ಯ ಕಳೆದ ವರ್ಷ ಅಂದ್ರೆ, 2019ರಲ್ಲಿ 44,25,000 ಕೋಟಿ ರೂ. ಆಗಿದೆ. ಅಂದ್ರೆ ಪೂರ್ತಿ ಡಬಲ್. ಹಾಗಾದ್ರೆ, ನಾನು ಕೂಡ ದಿನಸಿ ವ್ಯಾಪಾರ ಮಾಡಿ ಲಾಭ ಗಳಿಸ್ಬೇಕು. ಆದ್ರೆ, ಹೂಡಿಕೆ ಮಾಡೋದಕ್ಕೆ ಸಾಕಷ್ಟು ಬಂಡವಾಳ ಇಲ್ವಲ್ಲ ಅಂತ ಅನ್ಕೊಂಡ್ರಾ? ಬೇಜಾರು ಮಾಡ್ಕೊಳ್ಳುವ ಅಗತ್ಯಾನೇ ಇಲ್ಲ. ಯಾಕಂದ್ರೆ, ಸಣ್ಣ ಕಿರಾಣಿ ಅಂಗಡಿ ತೆರೆಯೋಕೆ ನಿಮಗೆ ಸಾಕಷ್ಟು ಬಂಡವಾಳದ ಅಗತ್ಯತೆ ಏನೂ ಇಲ್ಲ. ಒಂದು ವೇಳೆ, ನಾನು ದೊಡ್ಡ ಮಟ್ಟದಲ್ಲೇ ಸೂಪರ್​ಮಾರ್ಕೆಟ್ ಓಪನ್ ಮಾಡ್ಬೇಕು ಅಂತ ಅನ್ಕೊಂಡ್ರೆ ಸಾಲ ಸೌಲಭ್ಯದ ಮೂಲಕ ಅದನ್ನೂ ಸ್ಥಾಪಿಸಿ ಲಾಭದ ಸಿಹಿ ನೋಡಬಹುದು.

ಸೂಪರ್​ಮಾರ್ಕೆಟ್ ಅಂದ್ರೆ ಏನು?: ಕಿರಾಣಿ ಅಂಗಡಿಗಳ ವಿಸõತ ರೂಪವೇ ಸೂಪರ್​ಮಾರ್ಕೆಟ್. ಮನೆಗೆ ಬೇಕಾಗುವ ಎಲ್ಲ ವಸ್ತುಗಳನ್ನು ಒಂದೇ ಸೂರಿನಡಿ ಪೂರೈಸುವ ಉದ್ದೇಶವನ್ನು ಸೂಪರ್​ಮಾರ್ಕೆಟ್​ಗಳು ಹೊಂದಿರುತ್ತವೆ. ನಿಮಗೆ ಬೇಕಾದ ವಸ್ತುಗಳನ್ನು ನೀವೇ ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಅಲ್ಲಿರುತ್ತದೆ. ಹಾಗಾಗಿ ಸಾಂಪ್ರದಾಯಿಕ ಕಿರಾಣಿ ಅಂಗಡಿಗಳಿಗಿಂತ ಸೂಪರ್​ಮಾರ್ಕೆಟ್​ಗಳು ಹೆಚ್ಚು ಜನಪ್ರಿಯವಾಗುತ್ತಿವೆ.

ಬಿಜಿನೆಸ್ ಆರಂಭಿಸುವ ಮುನ್ನ...

ಸ್ಥಳದ ಆಯ್ಕೆ: ನೀವು ಯಾವ ಸ್ಥಳದಲ್ಲಿ ಸೂಪರ್​ವಾರ್ಕೆಟ್ ಆರಂಭಿಸುತ್ತೀರಿ ಅನ್ನೋದು ಬಹಳ ಮುಖ್ಯ. ಯಾಕಂದ್ರೆ, ನೀವು ಯಾರಿಗೂ ಕಾಣದ ಅಥವಾ ಬಹಳ ಕಡಿಮೆ ಜನ ಅಡ್ಡಾಡುವ ಸ್ಥಳದಲ್ಲಿ ಆರಂಭಿಸಿದರೆ, ಯಾವ ಲಾಭವೂ ಆಗೋದಿಲ್ಲ. ಗ್ರಾಹಕರ ಮನಗೆಲ್ಲಬೇಕು: ನಿಮ್ಮ ಸೂಪರ್​ವಾರ್ಕೆಟ್​ಗೆ ಆಗಮಿಸುವ ಎಲ್ಲ ಗ್ರಾಹಕರ ಮನಗೆಲ್ಲುವಂಥ ಕೆಲಸವಾದಾಗ ಮಾತ್ರ ನಿಮ್ಮ ಬಿಜಿನೆಸ್ ಗೆಲ್ಲುತ್ತದೆ. ತರಬೇತಿ ಪಡೆದ ಸಿಬ್ಬಂದಿ: ನಿಮ್ಮ ಸೂಪರ್​ವಾರ್ಕೆಟ್​ಗೆ ಆಗಮಿಸುವ ಗ್ರಾಹಕರನ್ನು ಮತ್ತೆ ನಿಮ್ಮ ವ್ಯಾಪಾರ ಮಳಿಗೆಗೆ ಬರುವಂತೆ ಮಾಡುವ ಪೂರ್ಣ ಜವಾಬ್ದಾರಿ ಅಲ್ಲಿನ ಸಿಬ್ಬಂದಿಯದು. ಅಂದರೆ, ಅಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ನಗುಮುಖದಿಂದ ಸೇವೆ ನೀಡಿದಲ್ಲಿ ಮಾತ್ರ ಗ್ರಾಹಕರ ಮನಸೂರೆ ಮಾಡಲು ಸಾಧ್ಯ. ನಿರ್ವಹಣೆ: ನಿಮ್ಮ ಸೂಪರ್​ವಾರ್ಕೆಟ್​ನ ಸ್ವಚ್ಛತೆ, ಅಲ್ಲಿನ ಸರಕು ನಿರ್ವಹಣೆ ಮತ್ತು ಪದಾರ್ಥಗಳ ಗುಣಮಟ್ಟ, ಲಭ್ಯತೆ ಯಿಂದ ಮಾತ್ರ ಯಾವುದೇ ಬಿಜಿನೆಸ್ ಉನ್ನತಿ ಹೊಂದಲು ಸಾಧ್ಯ.

ಕೋರ್ಸ್​ನಲ್ಲಿ ಏನಿದೆ?

  • ಸೂಪರ್​ ಮಾರ್ಕೆಟ್ ಬಿಸಿನೆಸ್ ಯಾಕೆ?
  • ಮಾರ್ಗದರ್ಶಕರ ಪರಿಚಯ
  • ಬೇಕಿರುವ ಬಂಡವಾಳ
  • ಸ್ಥಳದ ಆಯ್ಕೆ
  • ನೋಂದಣಿ, ಮಾಲೀಕತ್ವ ಮತ್ತು ನಿಯಂತ್ರಣ
  • ಬೇಕಾಗುವ ಮಾನವ ಸಂಪನ್ಮೂಲ
  • ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ಮತ್ತು ಫ್ರಾಂಚೈಸಿ
  • ಇಂಟೀರಿಯರ್ ಡಿಜೈನ್
  • ಉತ್ಪನ್ನ ವರ್ಗೀಕರಣ ಮತ್ತು ನಿರ್ವಹಣೆ
  • ಸಂಗ್ರಹಣೆ, ಪೂರೈಕೆ ಮತ್ತು ಸಾಲ ನಿರ್ವಹಣೆ
  • ಬೆಲೆ ನಿಗದಿ ಮತ್ತು ರಿಯಾಯಿತಿ
  • ದಾಸ್ತಾನು ನಿರ್ವಹಣೆ ಮತ್ತು ಲೆಕ್ಕ ಪರಿಶೋಧನೆ
  • ಡಿಜಿಟಲೈಸೇಶನ್ ಮತ್ತು ಹೋಂ ಡೆಲಿವರಿ
  • ಲಾಭದ ಲೆಕ್ಕಾಚಾರ ಮತ್ತು ಹಣಕಾಸು ನಿರ್ವಹಣೆ
  • ಗ್ರಾಹಕರ ಮನಗೆಲ್ಲುವುದು ಹೇಗೆ?
  • ಸುರಕ್ಷತೆಯ ಮಹತ್ವ
  • ದಿನವಹಿ ನಿರ್ವಹಣೆ ಮತ್ತು ಕಾನೂನು ಅನುಸರಣೆ

ಮಾರ್ಗದರ್ಶಕರ ಪರಿಚಯ

  • ಕೆ.ವಿ.ಯೋಗೇಶ್ - ಆರ್ಯ ಮಿನಿ ಸೂಪರ್​ ಮಾರ್ಕೆಟ್
  • ಸೋನಾರಾಮ್ - ರಾಮದೇವ್ ಸೂಪರ್​ ಮಾರ್ಕೆಟ್
  • ಜಮಿಲ್ ಉದ್ದೀನ್ ಖಾನ್- ಸೂಪರ್​ ಮಾರ್ಕೆಟ್ ಬಜಾರ್
  • ಶಿನಾಜ್ - ಇ.ಕೆ. ರಿಟೇಲ್ಸ್
  • ಇಶ್ತಿಯಾಕ್ ಹಸನ್ - ಅನ್ಪಾಲ್ ಹೈಪರ್ ಮಾರ್ಕೆಟ್

ಸೂಪರ್ ಮಾರ್ಕೆಟ್ ಅನುಕೂಲ

  • ಎಲ್ಲ ಸರಕುಗಳು ಸ್ಪರ್ಧಾತ್ಮಕ ಬೆಲೆಗಳಲ್ಲಿ ಲಭ್ಯ
  • ಆಯ್ಕೆಯಲ್ಲಿ ಗ್ರಾಹಕರಿಗೆ ಪೂರ್ಣ ಸ್ವಾತಂತ್ರ್ಯ
  • ಸುಲಭ ಮತ್ತು ತ್ವರಿತ ಶಾಪಿಂಗ್
  • ಸಮಯ ಉಳಿತಾಯ
  • ಉಚಿತ ರ್ಪಾಂಗ್ ಸ್ಥಳಾವಕಾಶ
  • ಉದ್ಯೋಗಾವಾಕಾಶ
  • ಕಾರ್ವಿುಕ ವೆಚ್ಚದಲ್ಲಿ ಉಳಿತಾಯ

ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಸೂಪರ್​ ಮಾರ್ಕೆಟ್ ಕೋರ್ಸ್

ನೀವು ಕೂಡ ಸೂಪರ್​ ಮಾರ್ಕೆಟ್ ಆರಂಭ ಮಾಡಬೇಕಂದ್ರೆ, ಎಲ್ಲಿ ರಿಜಿಸ್ಟ್ರೇಷನ್ ಮಾಡಿಸ್ಬೇಕು? ಇದಕ್ಕೆ ಎಷ್ಟು ಬಂಡವಾಳ ಬೇಕು? ಇಂಟೀರಿಯರ್ ಡಿಜೈನ್ ಹೇಗಿರ್ಬೆಕು? ಎಷ್ಟು ಜನ ಕೆಲಸಗಾರರು ಬೇಕಾಗಬಹುದು? ಈ ಉದ್ಯೋಗದಲ್ಲಿ ಎದುರಾಗುವ ಸಮಸ್ಯೆಗಳಾವುವು, ಅದನ್ನೆದುರಿಸುವ ಬಗೆ ಹೇಗೆ? ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಮಾಡೋದು ಹೇಗೆ? ಎಂಬುದನ್ನು ಇದೆ ಬಿಜಿನೆಸ್​ನಲ್ಲಿ ಬಹಳ ವರ್ಷಗಳಿಂದ ಇದ್ದು ತಿಂಗಳಿಗೆ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿರುವ ಸೂಪರ್​ವಾರ್ಕೆಟ್ ಮಾಲೀಕರು ನಿಮಗೆ ವಿವರಿಸುತ್ತಾರೆ. ನಿಮ್ಮದೇ ಆದ ಸ್ವಂತ ಸೂಪರ್​ ಮಾರ್ಕೆಟ್ ಆರಂಭಿಸಲು ಮಾರ್ಗದರ್ಶನ ನೀಡುತ್ತಾರೆ. ಹಾಗಾದ್ರೆ ಮತ್ತ್ಯಾಕೆ ತಡ ಆದಷ್ಟು ಬೇಗ ಇಂಡಿಯನ್ ಮನಿ ಡಾಟ್ ಕಾಮ್ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ ಮತ್ತು ಸೂಪರ್​ ಮಾರ್ಕೆಟ್ ಬಿಜಿನೆಸ್​ನಲ್ಲಿ ಸಕ್ಸಸ್ ಆಗೋದು ಹೇಗೆ ಎಂಬ ಕೋರ್ಸ್ ನೋಡಲಾರಂಭಿಸಿ. ಸ್ವಂತ ಬಿಜಿನೆಸ್ ನೀವೇ ಆರಂಭಿಸಿ, ಹೆಚ್ಚು ಹಣ ಗಳಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net