ಪೇಪರ್ ಪ್ಲೇಟ್ ಬಿಸಿನೆಸ್​ನಲ್ಲಿ ಸಕ್ಸಸ್ ಆಗೋದು ಹೇಗೆ?

Paper Plate
Published on
ಪೇಪರ್ ಪ್ಲೇಟ್ ಮತ್ತು ಕಪ್ ತಯಾರಿಕೆ ಅತ್ಯಂತ ಸುರಕ್ಷಿತ ಮತ್ತು ದೀರ್ಘಾವಧಿಯ ಉದ್ಯಮಗಳಲ್ಲಿ ಒಂದಾಗಿದೆ. 1-2 ಲಕ್ಷ ರೂ. ಹೂಡಿಕೆ ಮಾಡಿ ಸಣ್ಣದಾಗಿ ಪೇಪರ್ ಪ್ಲೇಟ್ ಘಟಕ ಆರಂಭಿಸಬಹುದು. ಇಲ್ಲ ಕೋಟ್ಯಂತರ ರೂ. ಹೂಡಿಕೆ ಮಾಡಿ ದೊಡ್ಡ ಉದ್ಯಮ ಕಟ್ಟುತ್ತೇವೆ ಎನ್ನುವವರಿಗೂ ಈ ಕ್ಷೇತ್ರದಲ್ಲಿ ಅವಕಾಶಗಳಿವೆ. ಜಾಗತಿಕ ಪೇಪರ್ ಪ್ಲೇಟ್ ಮತ್ತು ಕಪ್​ಗಳ ಮಾರುಕಟ್ಟೆ ಮೌಲ್ಯ ಸುಮಾರು 18 ಲಕ್ಷ ಕೋಟಿ ರೂ. ಇದೆ. ಮದುವೆ, ಸಭೆ- ಸಮಾರಂಭಗಳು, ಹೋಟೆಲ್​ಗಳು, ಚಾಟ್ಸ್ ಸೆಂಟರ್​ಗಳು, ಫುಡ್ ಟ್ರಕ್​ಗಳು, ಆಫೀಸ್ ಕ್ಯಾಂಟೀನ್​ಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪೇಪರ್ ಪ್ಲೇಟ್​ಗಳಿಗೆ ಸದಾ ಬೇಡಿಕೆ ಇದ್ದೇಇದೆ. ಕಡಿಮೆ ಹೂಡಿಕೆ ಮಾಡಿ ಮನೆಯಲ್ಲೇ ಮಷಿನ್​ಗಳನ್ನು ಜೋಡಿಸಿ ಒಬ್ಬರೇ ಬಿಸಿನೆಸ್ ಆರಂಭಿಸುತ್ತೀರಿ ಅಂತಾದ್ರೆ, ಕಡಿಮೆ ಅಂದ್ರೂ ತಿಂಗಳಿಗೆ 30ರಿಂದ 35 ಸಾವಿರ ರೂ. ಸಂಪಾದಿಸಬಹುದು. ದೊಡ್ಡ ಮಟ್ಟದಲ್ಲಿ ಉದ್ಯಮದ ರೀತಿಯಲ್ಲಿ ಬಿಸಿನೆಸ್ ಮಾಡುತ್ತೇವೆ ಎನ್ನುವವರಿಗೆ ಹೆಚ್ಚಿನ ಗಳಿಕೆಗೆ ಅವಕಾಶಗಳಿವೆ.

ಪೇಪರ್ ಪ್ಲೇಟ್ ಘಟಕ ಬಿಸಿನೆಸ್ ಪ್ಲ್ಯಾನ್​: ಪೇಪರ್ ಪ್ಲೇಟ್ ಬಿಸಿನೆಸ್ ಅನ್ನು ನೀವೊಬ್ಬರೇ ಮಾಡುತ್ತಿದ್ದರೆ ಪೊ›ಪ್ರೖೆಟರ್​ಶಿಪ್ ಅಡಿಯಲ್ಲಿ ನೋಂದಣಿ ಮಾಡಿಸಬೇಕಾಗುತ್ತದೆ. ಪಾಟರ್°ರ್​ಶಿಪ್​ನಲ್ಲಿ ಪೇಪರ್ ಪ್ಲೇಟ್ ಬಿಸಿನೆಸ್ ಆರಂಭಿಸುವುದಾದರೆ ರಿಜಿಸ್ಟಾರ್ ಆಫ್ ಕಂಪನೀಸ್​ನಲ್ಲಿ ಲಿಮಿಟೆಡ್ ಲೈಯಬಲಿಟಿ ಪಾಟರ್°ರ್​ಶಿಪ್ ಅಥವಾ ಪ್ರೖೆವೇಟ್ ಲಿಮಿಟೆಡ್ ಕಂಪನಿಯಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಇದಲ್ಲದೆ, ಜಿಎಸ್​ಟಿ ನೋಂದಣಿ, ಟ್ರೇಡ್ ಲೈಸೆನ್ಸ್ ಪಡೆದುಕೊಳ್ಳಬೇಕಾಗುತ್ತದೆ. ಸಣ್ಣ ಕೈಗಾರಿಕೆಗಳಡಿ ನೋಂದಣಿ ಮಾಡಿಸಿಕೊಂಡರೆ ಸರ್ಕಾರದ ಕೆಲ ಸವಲತ್ತುಗಳು ನಿಮ್ಮ ಪೇಪರ್ ಪ್ಲೇಟ್ ಬಿಸಿನೆಸ್ ಘಟಕಕ್ಕೆ ದಕ್ಕುತ್ತವೆ. ಈ ಬಿಸಿನೆಸ್ ಆರಂಭಿಸಲು ಹೆಚ್ಚು ಜಾಗದ ಅವಶ್ಯಕತೆಯಿಲ್ಲ, 500 ಚದರಡಿ ಜಾಗವಿದ್ದರೂ ಘಟಕ ಆರಂಭಿಸಬಹುದು. ಮನೆಯಲ್ಲಿ ಸ್ಥಳಾವಕಾಶವಿದ್ದರೆ ಅಲ್ಲೇ ಸಣ್ಣ ಘಟಕ ಮಾಡಲು ಕೂಡ ಸಾಧ್ಯವಿದೆ. ಆದರೆ ಒಳ್ಳೆಯ ನೀರು, ವಿದ್ಯುತ್, ಒಳಚರಂಡಿ ವ್ಯವಸ್ಥೆ ಇರಬೇಕು ಅಷ್ಟೇ. ಮಷಿನ್ ಪೂರೈಕೆದಾರರನ್ನು ಸಂರ್ಪಸಿದ ಬಳಿಕ ನಿಮ್ಮ ಪೇಪರ್ ಪ್ಲೇಟ್ ಘಟಕದ ವಿನ್ಯಾಸ ಮಾಡಿದರೆ ಒಳಿತು. ಘಟಕದಲ್ಲಿ ಕಚ್ಚಾ ವಸ್ತುಗಳ ಶೇಖರಣೆಗೆ ಯಂತ್ರದ ಕಾರ್ಯಾಚರಣೆಗೆ, ಉತ್ತನ್ನಗಳ ಸಂಗ್ರಹಕ್ಕೆ ಪ್ರತ್ಯೇಕ ಜಾಗ ನಿಗದಿಪಡಿಸಿಕೊಳ್ಳಬೇಕು. ಸ್ಕ್ರಾ್ಯಪ್ ಪೇಪರ್ ಜತೆ ಪಾಲಿತಿನ್ ಶೀಟ್​ಗಳ ಪೇಪರ್ ತಯಾರಿಕೆ ಘಟಕದ ಮುಖ್ಯ ಕಚ್ಚಾ ವಸ್ತುಗಳು. ಪೇಪರ್ ಪ್ಲೇಟ್ ಘಟಕಕ್ಕೆ ಸೆಮಿ ಆಟೋಮೆಟಿಕ್ ಮಷಿನ್, ಫುಲ್ ಆಟೋಮೆಟಿಕ್ ಮಷಿನ್​ಗಳನ್ನು ಬಳಸಬಹುದು. ಇದರ ಜತೆ ಪೇಪರ್ ಕಟ್ಟಿಂಗ್ ಯಂತ್ರ, ಡಬ್ಬಲ್ ಡೈ ಪ್ರೆಸ್ ಮಷಿನ್, ಪ್ಯಾಕಿಂಗ್ ಮಷಿನ್ ಮತ್ತು ವೇಯಿಂಗ್ ಸ್ಕೇಲ್ ಅವಶ್ಯಕ. ಮಷಿನ್​ಗಳನ್ನು ಆದಷ್ಟು ಸ್ಥಳೀಯವಾಗಿ ಖರೀದಿಸುವುದು ಸೂಕ್ತ, ಇದರಿಂದ ಸರ್ವೀಸ್​ನ ಅಗತ್ಯ ಬಿದ್ದಾಗ ಸುಲಭವಾಗುತ್ತದೆ.

ಸಾವಿರಾರು ಜನರಿಗೆ ಬದುಕು ಕೊಟ್ಟಿರುವ ಬಿಸಿನೆಸ್: ಒಂದು ಅಂದಾಜಿನ ಪ್ರಕಾರ, ಬೆಂಗಳೂರಿನಲ್ಲೇ 10 ಸಾವಿರಕ್ಕೂ ಹೆಚ್ಚು ಮಂದಿ ಪೇಪರ್ ಪ್ಲೇಟ್ ಬಿಸಿನೆಸ್​ನಲ್ಲಿ ತೊಡಗಿದ್ದಾರೆ. ಮೈಸೂರಿನಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಈ ಉದ್ಯಮದಿಂದ ಜೀವನ ಕಟ್ಟಿಕೊಂಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳನ್ನು ಗಣನೆಗೆ ತೆಗೆದುಕೊಂಡರೆ ಈ ಸಂಖ್ಯೆ ಇನ್ನೂ ದೊಡ್ಡದಿದೆ.

ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಪೇಪರ್ ಪ್ಲೇಟ್ ಬಿಸಿನೆಸ್ ಕೋರ್ಸ್: ಹೊಸದೊಂದು ಬಿಸಿನೆಸ್ ಕಟ್ಟುವ ಮೂಲಕ ಜೀವನ ರೂಪಿಸಿಕೊಳ್ಳಬೇಕು ಎನ್ನುವವರಿಗಾಗಿ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಪೇಪರ್ ಪ್ಲೇಟ್ ಮತ್ತು ಕಪ್ ಮೇಕಿಂಗ್ ಕೋರ್ಸ್ ವಿನ್ಯಾಸಗೊಳಿಸಿದ್ದೇವೆ. ಪೇಪರ್ ಪ್ಲೇಟ್ ಘಟಕ ಆರಂಭಿಸಿ ಯಶಸ್ಸು ಸಾಧಿಸಿರುವ ತಜ್ಞರೇ ಕೋರ್ಸ್ ನಲ್ಲಿ ಮಾರ್ಗದರ್ಶಕರಾಗಿದ್ದಾರೆ. ಪೇಪರ್ ಪ್ಲೇಟ್ ತಯಾರಿಕೆ ಬಗ್ಗೆ ಸಮಗ್ರ ಮಾಹಿತಿ ಇಲ್ಲಿ ಅಡಕವಾಗಿದೆ. ಹಾಗಾದ್ರೆ ಇನ್ನೇಕೆ ತಡ ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ, ಆದಾಯದ ಹೊಸ ಮೂಲ ಕಂಡುಕೊಳ್ಳಿ.

ಬಿಸಿನೆಸ್ ಮಾಡುವವರಿಗೂ ಇವೆ ಹತ್ತಾರು ಆಯ್ಕೆಗಳು: ಬಿಸಿನೆಸ್ ಮಾಡಬೇಕು ಎನ್ನುವವರಿಗೂ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಹತ್ತಾರು ಕೋರ್ಸ್​ಗಳಿವೆ. ಫುಡ್ ಟ್ರಕ್ ಬಿಸಿನೆಸ್, ಹಳ್ಳಿಯಿಂದ ಬಿಸಿನೆಸ್ ಕಟ್ಟೋದು, ಹೋಟೆಲ್ ಆರಂಭಿಸೋದು, ಕರಕುಶಲ ವಸ್ತುಗಳ ತಯಾರಿಕೆ ಮತ್ತು ಮಾರಾಟ, ದಿನಸಿ ಅಂಗಡಿ ಆರಂಭಿಸೋದು, ಉಪ್ಪಿನಕಾಯಿ ಬಿಸಿನೆಸ್ ಆರಂಭಿಸೋದು, ಬೇಕರಿ ಶುರು ಮಾಡೋದು, ಹೇರ್ ಕಟ್ಟಿಂಗ್ ಶಾಪ್ ಆರಂಭಿಸೋದು, ಹೋಮ್ ಸ್ಟೇ ಶುರು ಮಾಡೋದು, ನಂದಿನಿ ಮಿಲ್ಕ್ ಪಾರ್ಲರ್ ಫ್ರಾಂಚೈಸಿ ಪಡೆಯೋದು, ತರಕಾರಿ ಅಂಗಡಿ ಪ್ರಾರಂಭ ಮಾಡೋದು, ಸೋಪ್ ತಯಾರಿಕೆ ಬಿಸಿನೆಸ್ ಮಾಡೋದು, ಮನೆಯಿಂದ ಕೇಕ್ ತಯಾರಿಸಿ ಮಾರಾಟ ಮಾಡೋದು.. ಹೀಗೆ ಆದಾಯ ಕಂಡುಕೊಳ್ಳುವ ಅನೇಕ ಆಯ್ಕೆಗಳು ಈ ಆಪ್​ನಲ್ಲಿವೆ.

ಕೋರ್ಸ್​ನಲ್ಲಿ ಏನಿದೆ?

  • ಕೋರ್ಸ್ ಪರಿಚಯ
  • ಮಾರ್ಗದರ್ಶಕರ ಪರಿಚಯ
  • ಪೇಪರ್ ಪ್ಲೇಟ್ ಬಿಸಿನೆಸ್ ಯಾಕೆ
  • ಪೇಪರ್ ಪ್ಲೇಟ್
  • ಬಿಸಿನೆಸ್​ಗೆ ಬೇಕಿರುವ ಬಂಡವಾಳ
  • ಅಗತ್ಯ ಮೂಲಸೌಕರ್ಯ
  • ಕಾರ್ವಿುಕರ ಅಗತ್ಯತೆ ಮತ್ತು ತರಬೇತಿ
  • ಕಚ್ಚಾ ವಸ್ತುಗಳ ಖರೀದಿ
  • ಬೆಲೆ ನಿಗದಿ
  • ಉತ್ಪಾದನಾ ಪ್ರಕ್ರಿಯೆ
  • ಮಾರ್ಕೆಟಿಂಗ್
  • ಬೇಡಿಕೆ-ಪೂರೈಕೆ ನಿರ್ವಹಣೆ
  • ರಫ್ತಿಗಿರುವ ಅವಕಾಶಗಳು
  • ಲೆಕ್ಕಪತ್ರ, ಹಣಕಾಸು ನಿರ್ವಹಣೆ
  • ಮಾರ್ಗದರ್ಶಕರ ಕಿವಿಮಾತು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net