ಷೇರು ಹೂಡಿಕೆಯಲ್ಲಿ ಲಾಭ ಗಳಿಕೆ ಹೇಗೆ?

Share Market
Published on

ಷೇರು ಮಾರುಕಟ್ಟೆ ಎಂದ ತಕ್ಷಣ ಅದು ಅರ್ಥವಾಗಲ್ಲ, ಜನಸಾಮಾನ್ಯರು ಅದರಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಲು ಸಾಧ್ಯವಿಲ್ಲ ಎಂಬೆಲ್ಲ ತಪ್ಪು ಕಲ್ಪನೆಗಳಿವೆ. ಆದರೆ ನಿಮಗೆ ಗೊತ್ತಿರಲಿ, ಷೇರು ಮಾರುಕಟ್ಟೆ ಅನ್ನೋದು ಕಬ್ಬಿಣದ ಕಡಲೆ ಅಲ್ಲ. ಜೂಜಾಟವೂ ಅಲ್ಲ, ಕಲಿಕೆಯೊಂದಿಗೆ ಷೇರು ಮಾರುಕಟ್ಟೆ ಪ್ರವೇಶ ಮಾಡಿದರೆ ಖಂಡಿತವಾಗಿಯೂ ಲಾಭದ ಸಿಹಿ ಕಾಣಬಹುದು.

ಒಳ್ಳೆಯ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ರೆ ಲಾಭ: ನಿಮಗೆ ಡಿ-ಮಾರ್ಟ್ ಬಗ್ಗೆ ಗೊತ್ತು ಅಲ್ವಾ? 2017ರ ಮಾರ್ಚ್​ನಲ್ಲಿ ಡಿ- ಮಾರ್ಟ್ (ಅವೆನ್ಸೂ ಸೂಪರ್ ಮಾರ್ಕೆಟ್ಸ್) ಷೇರು ಮಾರುಕಟ್ಟೆ

ಪ್ರವೇಶಿಸಿತು. ಈ ಷೇರಿನ ಆರಂಭಿಕ ಹೂಡಿಕೆ ಬೆಲೆ ಪ್ರತಿ ಷೇರಿಗೆ 299 ರೂ. ಆಗಿತ್ತು. ಇದೀಗ ಇದೇ ಡಿ-ಮಾರ್ಟ್ ಷೇರಿನ ಬೆಲೆ 5323ರ ಗಡಿ ದಾಟಿದೆ. 2019ರ ಸೆಪ್ಟೆಂಬರ್​ನಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಿದ ಐಆರ್​ಸಿಟಿಸಿ, ಅಂದ್ರೆ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಡೆವಲಪ್​ವೆುಂಟ್ ಕಾಪೋರೇಷನ್ ಷೇರಿನ ಆರಂಭಿಕ ಬೆಲೆ 320 ರೂಪಾಯಿ. ಇದೀಗ ಎರಡೇ ವರ್ಷಗಳಲ್ಲಿ ಐಆರ್​ಸಿಟಿಸಿ ಷೇರಿನ ಬೆಲೆ 5463ರ ಆಸುಪಾಸಿನಲ್ಲಿದೆ. ಹೌದು, ಸರಿಯಾದ ಕಂಪನಿಗಳನ್ನು ಆಯ್ಕೆ ಮಾಡಿ ಹೂಡಿಕೆ ಮಾಡಿದರೆ ಷೇರು ಮಾರುಕಟ್ಟೆಯಲ್ಲಿ ಸಂಪತ್ತು ಸೃಷ್ಟಿಸಲು ಸಾಧ್ಯ. ಹಾಗೆಂದ ಮಾತ್ರಕ್ಕೆ ಷೇರು ಮಾರುಕಟ್ಟೆಯಲ್ಲಿ ಇರುವ ಎಲ್ಲ ಕಂಪನಿಗಳೂ ಲಾಭ ಕೊಡುತ್ತವೆ ಎಂದಲ್ಲ. ಷೇರು ಹೂಡಿಕೆಯಲ್ಲಿ ನಿಮ್ಮ ಹಣ ಕರಗಿಸುವಂತಹ ಷೇರುಗಳೂ ಇರುತ್ತವೆ. ಅಳೆದು, ತೂಗಿ ಯಾವ ಕಂಪನಿ ಉತ್ತಮ? ಯಾವ ಕಂಪನಿಯ ಹೂಡಿಕೆಗೆ ಭವಿಷ್ಯವಿಲ್ಲ? ಎನ್ನುವುದನ್ನು ಅಂದಾಜು ಮಾಡಿ ಮುಂದುವರಿಯಬೇಕು (ಸೂಚನೆ: ಹಣಕಾಸು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ಇಲ್ಲಿ ಕಂಪನಿಗಳ ಹೆಸರನ್ನು ಬಳಸಲಾಗಿದೆ. ಇದು ಹೂಡಿಕೆ ಶಿಫಾರಸು ಅಲ್ಲ).

ಷೇರು ಹೂಡಿಕೆ ಯಾಕೆ?: ವರ್ಷದ ಹಿಂದೆ 70-80 ರೂ. ಆಸುಪಾಸಿನಲ್ಲಿದ್ದ ಪೆಟ್ರೋಲ್ ಬೆಲೆ ಈಗ 100 ರೂಪಾಯಿ ಗಡಿ ದಾಟಿ ಮುನ್ನುಗ್ಗುತ್ತಿದೆ. ಅಡುಗೆ ಎಣ್ಣೆ ಬೆಲೆ 80 ರಿಂದ 150 ರೂಪಾಯಿಗೆ ತಲುಪಿದೆ. ಅಕ್ಕಿ-ಬೇಳೆ ಸೇರಿ ದಿನಬಳಕೆ ವಸ್ತುಗಳ ಬೆಲೆ ಗಗನಮುಖಿಯಾಗುತ್ತಿದೆ. ಆದರೆ, ನಿಮ್ಮ ಸಂಬಳ ಆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆಯಾ? ಖಂಡಿತ ಇಲ್ಲ. ನೀವು ಮಾಡುವ ಸಾಂಪ್ರದಾಯಿಕ ಹೂಡಿಕೆಗಳಾದ ಎಂಡೋಮೆಂಟ್ ಅಥವಾ ಮನಿ ಬ್ಯಾಂಕ್ ಇನ್ಶೂರೆನ್ಸ್, ಫಿಕ್ಸೆಡ್ ಡೆಪಾಸಿಟ್, ಪಬ್ಲಿಕ್ ಪ್ರಾವಿಡೆಂಟ್ ಫಂಡ್. ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ನಿಮಗೆ ಹಣದುಬ್ಬರ ಅಂದರೆ ಬೆಲೆ ಏರಿಕೆಯನ್ನು ಮಿರಿ ಲಾಭ ಕೊಡುವುದಿಲ್ಲ. ಬೆಲೆ ಏರಿಕೆಯನ್ನು ಮೀರಿ ನಿಮ್ಮ ಹೂಡಿಕೆ ಮೊತ್ತ ಲಾಭ ತಂದುಕೊಡಬೇಕಾದರೆ ಅದಕ್ಕಿರುವ ಆಯ್ಕೆ ಷೇರುಪೇಟೆ. ಹಾಗಾದ್ರೆ ಸಾಂಪ್ರದಾಯಿಕ ಹೂಡಿಕೆಗಳನ್ನು ಮಾಡಲೇಬಾರದೇ ಎಂದು ನೀವು ಕೇಳಬಹುದು. ಸಾಂಪ್ರದಾಯಿಕ ಹೂಡಿಕೆಗಳ ಜತೆಗೆ ಷೇರು ಮಾರುಕಟ್ಟೆಯಲ್ಲೂ ಹೂಡಿಕೆ ಮಾಡಲು ಅರಿತುಕೊಳ್ಳುವುದು ಮುಖ್ಯ ಎಂದಷ್ಟೇ ನಾನು ಹೇಳುತ್ತಿದ್ದೇನೆ. ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡಬೇಡಿ ಎಂದು ಖ್ಯಾತ ಹೂಡಿಕೆ ತಜ್ಞ ವಾರನ್ ಬಫೆಟ್ ಹೇಳುತ್ತಾರೆ. ಹಣ ಹೂಡಿಕೆ ಮಾಡುವಾಗ ವೈವಿಧ್ಯತೆ ಕಾಯ್ದುಕೊಳ್ಳುವುದು ಬಹಳ ಮುಖ್ಯ ಎನ್ನುವುದು ಈ ಮಾತಿನ ಒಳ ಅರ್ಥ.

ಉತ್ತಮ ಐಪಿಒಗಳಿಂದಲೂ ಗಳಿಕೆ ಸಾಧ್ಯ: ಐಪಿಒ ಅಂದ್ರೆ ಆರಂಭಿಕ ಸಾರ್ವಜನಿಕ ಹೂಡಿಕೆ. ಇನೀಷಿಯಲ್ ಪಬ್ಲಿಕ್ ಆಫರಿಂಗ್ ಎನ್ನುವುದು ಐಪಿಒದ ವಿಸõತ ರೂಪ. ಖಾಸಗಿ ಕಂಪನಿಯೊಂದು ಮೊದಲ ಬಾರಿಗೆ ಸಾರ್ವಜನಿಕರಿಗೆ ತನ್ನ ಷೇರುಗಳನ್ನು ನೀಡುವ ಪ್ರಕ್ರಿಯೆಯನ್ನು ಐಪಿಒ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಕಂಪನಿಯ ಬಳಿ 1 ಲಕ್ಷ ಷೇರುಗಳಿದ್ದು ಅದರಲ್ಲಿ 30 ಸಾವಿರ ಷೇರುಗಳನ್ನು ಸಾರ್ವಜನಿಕರಿಗೆ ಕೊಡಲು ನಿರ್ಧರಿಸಿದೆ ಎಂದಾದರೆ, ಆ 30 ಷೇರುಗಳನ್ನು ನೀವು ಐಪಿಒ ಮೂಲಕ ಖರೀದಿಸಬಹುದು. ಉದ್ಯಮ ವಿಸ್ತರಣೆ, ಸಾಲ ಮರುಪಾವತಿ ಹೀಗೆ ಅನೇಕ ಕಾರಣಗಳಿಗೆ ಐಪಿಒ ಮೂಲಕ ಕಂಪನಿಗಳು ಬಂಡವಾಳ ಸಂಗ್ರಹಿಸುತ್ತವೆ. ಐಪಿಒ ಮಾಡಿದ ಕಂಪನಿಯು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗುತ್ತದೆ. ನೀವು ಐಪಿಒ ಮೂಲಕ ಹಣ ಹೂಡಿಕೆ ಮಾಡಿರುವ ಕಂಪನಿ ಭವಿಷ್ಯದಲ್ಲಿ ಉತ್ತಮ ಪ್ರಗತಿ ತೋರಿ ಹೆಚ್ಚೆಚ್ಚು ಲಾಭ ಗಳಿಸಿದರೆ ಆ ಲಾಭದಲ್ಲಿ ನಿಮಗೂ ಪಾಲಿರುತ್ತದೆ. ಕಂಪನಿ ಉತ್ತಮ ಸಾಧನೆ ತೋರಿದರೆ ಹೆಚ್ಚು ಪರಿಶ್ರಮವಿಲ್ಲದೆ ನೀವು ಲಾಭದ ಪಾಲುದಾರರಾಗುತ್ತೀರಿ. ಆದರೆ, ನೀವು ಹೂಡಿಕೆ ಮಾಡಿರುವ ಕಂಪನಿ ನಷ್ಟ ಅನುಭವಿಸಿದರೆ ಅದರ ಹೊರೆಯನ್ನೂ ಹೊರಬೇಕಾಗುತ್ತದೆ. ಉತ್ತಮ ಕಂಪನಿಗಳ ಐಪಿಒದಲ್ಲಿ ಹೂಡಿಕೆ ಮಾಡಿದರೆ ಷೇರು ಮಾರುಕಟ್ಟೆಯಲ್ಲಿ ಆ ಕಂಪನಿ ಲಿಸ್ಟಿಂಗ್ ಆಗುವ ದಿನವೇ ಷೇರಿನ ಬೆಲೆ ಡಬಲ್ ಆಗಿರುವ ಉದಾಹರಣೆಗಳಿವೆ.

ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಸ್ಟಾಕ್ ಮಾರ್ಕೆಟ್ ಕೋರ್ಸ್

ಅಡಿಪಾಯ ಭದ್ರವಾಗಿದ್ದರಷ್ಟೇ ಕಟ್ಟಡ ಬಲಿಷ್ಠವಾಗಿ ನಿಲ್ಲುತ್ತದೆ. ಹೌದು, ಷೇರು ಅಥವಾ ಇನ್ಯಾವುದೇ ಹೂಡಿಕೆಯಲ್ಲಿ ಕಲಿಕೆಯ ಅಡಿಪಾಯವಿದ್ದರಷ್ಟೇ ಗಳಿಕೆಯ ಲಾಭ ಪಡೆಯಲು ಸಾಧ್ಯ. ಅರ್ಧ ಜ್ಞಾನ ಅಪಾಯಕಾರಿ ಎಂಬ ಮಾತು ಹಣಕಾಸು ಹೂಡಿಕೆ ವಿಚಾರದಲ್ಲಿ ಸರ್ವಕಾಲಕ್ಕೂ ಸಲ್ಲುತ್ತದೆ. ಆಲೋಚನೆ ಮಾಡದೆ ಅವಸರ ಪಟ್ಟು ಶ್ರೀಮಂತರಾಗುವ ಕನಸು ಕಂಡರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ವ್ಯಕ್ತಿಯೊಬ್ಬ ಹಣಕಾಸು ನಿರ್ವಹಣೆ ಕಲಿಯಲು ಬೇಕಿರುವ ಎಲ್ಲ ಕೋರ್ಸ್​ಗಳನ್ನೂ ರೂಪಿಸಲಾಗಿದೆ. ಫೈನಾನ್ಸಿಯಲ್ ಫ್ರೀಡಂ ಕೋರ್ಸ್, ಸ್ಟಾಕ್ ಮಾರ್ಕೆಟ್ ಕೋರ್ಸ್, ಐಪಿಒ ಕೋರ್ಸ್, ಮ್ಯೂಚುವಲ್ ಫಂಡ್ ಕೋರ್ಸ್, ಪೋಸ್ಟ್ ಆಫೀಸ್ ಇನ್ವೆಸ್ಟ್​ಮೆಂಟ್ ಕೋರ್ಸ್, ಟ್ಯಾಕ್ಸ್ ಪ್ಲಾನಿಂಗ್ ಕೋರ್ಸ್, ಹೀಗೆ ಹಣಕಾಸು ನಿರ್ವಹಣೆಗೆ ಪ್ರತಿಯೊಬ್ಬರಿಗೂ ಬೇಕಾದ ಕೋರ್ಸ್​ಗಳನ್ನು ಎಲ್ಲ ಆಯಾಮಗಳಲ್ಲಿ ರೂಪಿಸಲಾಗಿ=ದೆ. ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಕನ್ನಡದಲ್ಲೇ ಈ ಕೋರ್ಸ್ ಗಳನ್ನು ರೂಪಿಸಲಾಗಿದೆ. ಹಾಗಾದರೆ ಇನ್ನೇಕೆ ತಡ ಈಗಲೇ ಫೈನಾನ್ಸಿಯಲ್ ಫ್ರೀಡಂ ಆಡ್ ಡೌನ್​ಲೋಡ್ ಮಾಡಿ ಹಣಕಾಸು ನಿರ್ವಹಣೆ ಮತ್ತು ಸ್ಟಾಕ್ ಮಾರ್ಕೆಟ್ ಹೂಡಿಕೆ ಬಗ್ಗೆ ಅರಿತು ಮುಂದುವರಿಯಿರಿ.

ವಿಜಯವಾಣಿ ಓದುಗರಿಗೆ 2,000 ರೂ. ಸ್ಕಾಲರ್​ಶಿಪ್ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ ಲೋಡ್ ಮಾಡಿ, ್ಖಒಅಅಅಘಐ ಎಂದು ರೆಫರಲ್ ಕೋಡ್ ಬಳಸಿ, 2000 ರೂ. ಸ್ಕಾಲರ್​ಶಿಪ್ ಪಡೆಯಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net