

ಸಮಯ ಕಳೆದಂತೆ ಕೃಷಿ ಮತ್ತು ಕೃಷಿ ತಂತ್ರಗಳು ಬದಲಾಗುವುದರ ಜತೆಗೆ ನಿರಂತರವಾಗಿ ಬೆಳವಣಿಗೆಯನ್ನೂ ಹೊಂದುತ್ತಿವೆ. ಇಳುವರಿಯನ್ನು ಉತ್ಕೃಷ್ಟಗೊಳಿಸಲು, ಲಾಭ ಮತ್ತು ಆದಾಯ ದ್ವಿಗುಣಗೊಳಿಸಲು ರೈತರು ಹೊಸ ತಂತ್ರಗಳಿಗೆ ಮೊರೆ ಹೋಗುತ್ತಿದ್ದಾರೆ. ರೈತಾಪಿ ವರ್ಗ ಉತ್ತಮ ಫಲಿತಾಂಶ ಪಡೆಯಲು ವಿಜ್ಞಾನವು ಅನೇಕ ಹೊಸ ಆವಿಷ್ಕಾರಗಳನ್ನು ಹೊರತಂದಿದೆ. ಅವುಗಳಲ್ಲಿ ಬಹುಬೆಳೆ ಪದ್ಧತಿ ಕೂಡ ಒಂದು.
ಸಮಗ್ರ ಕೃಷಿ ಎಂದರೇನು? ಕೃಷಿಯಲ್ಲಿ, ಒಂದೇ ಬೆಳೆ ಬೆಳೆಯುವ ಬದಲಾಗಿ ಎರಡು ಅಥವಾ ಹೆಚ್ಚಿನ ಬೆಳೆಗಳನ್ನು ಒಂದೇ ಜಾಗದಲ್ಲಿ ಏಕಕಾಲದಲ್ಲಿ ಬೆಳೆಯುವ ಜತೆಗೆ ಕೃಷಿಯ ಉಪ ಕಸುಬುಗಳಾದ ತೋಟಗಾರಿಕೆ, ಜೇನು, ಕುರಿ, ಕೋಳಿ ಸಾಕಣೆ, ಹೈನುಗಾರಿಕೆ, ಅರಣ್ಯ ಕೃಷಿ ಮುಂತಾದ ಪದ್ಧತಿಗಳನ್ನು ಅಳವಡಿಸಿಕೊಂಡು ಸುಸ್ಥಿರ ರೀತಿಯಲ್ಲಿ ಕೃಷಿ ಮಾಡಿ ಹೆಚ್ಚು ಆದಾಯಗಳಿಸುತ್ತ ವರ್ಷ ಪೂರ್ತಿ ಆರ್ಥಿಕವಾಗಿ ಸಬಲರಾಗಿರುವ ಪದ್ಧತಿಯೇ ಸಮಗ್ರ ಕೃಷಿ. ಸರಳವಾಗಿ ಹೇಳುವುದಾದರೆ ಕೃಷಿಯನ್ನು ಮತ್ತು ಅದರ ಉಪ ಕಸುಬುಗಳನ್ನು ಅನುಕೂಲಕ್ಕೆ ತಕ್ಕಂತೆ ವಿಸ್ತರಿಸಿಕೊಂಡು ಪರಾವಲಂಬನೆ ಕಡಿಮೆ ಮಾಡಿಕೊಳ್ಳುವುದೇ ಸಮಗ್ರ ಕೃಷಿಯ ಮೂಲ ಉದ್ದೇಶ.
ಸಮಗ್ರ ಕೃಷಿಯ ಅನುಕೂಲಗಳು:
ಸಮಗ್ರ ಕೃಷಿಗೆ ಸರ್ಕಾರದಿಂದ ಸಿಗುವ ಸವಲತ್ತು
ಸಮಗ್ರ ಕೃಷಿ ಕೋರ್ಸ್ನಲ್ಲಿ ಏನೆಲ್ಲ ಇದೆ?
ಮಾರ್ಗದರ್ಶನ ಮಾಡುವ ತಜ್ಞರ ಪರಿಚಯ
ಸಮಗ್ರ ಕೃಷಿಯ ವಿಧಗಳು 1. ಅಂತರ ಬೆಳೆ: ಅಂತರ ಬೆಳೆ ಎಂದರೆ ಏಕಕಾಲದಲ್ಲಿ ಒಂದೇ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವುದು. ಸಂಪನ್ಮೂಲಗಳ ಮೂಲಕ ಒಂದೇ ನಿರ್ದಿಷ್ಟ ಭೂಮಿಯಲ್ಲಿ ಹೆಚ್ಚಿನ ಇಳುವರಿ ಉತ್ಪಾದಿಸುವುದು ಅಂತರ ಬೆಳೆಯ ಮುಖ್ಯ ಉದ್ದೇಶವಾಗಿದೆ.
2. ರೊಟೇಷನ್: ಒಂದು ನಿರ್ದಿಷ್ಟ ಭೂಮಿಯಲ್ಲಿ ಎರಡು ಅಥವಾ ಹೆಚ್ಚಿನ ಬೆಳೆಗಳನ್ನು ಅನುಕ್ರಮವಾಗಿ ಬೆಳೆಯುವುದನ್ನು ರೊಟೇಷನಲ್ ಕ್ರಾಪ್ಸ್ ಎಂದು ಕರೆಯುತ್ತಾರೆ.
3. ಅರಣ್ಯಕೃಷಿ: ದೀರ್ಘಕಾಲಿಕ ಮರಗಳು ಬೆಳೆಯುವುದನ್ನು ಅರಣ್ಯ ಕೃಷಿ ಎಂದೆನ್ನಬಹುದು. ಈ ಮರಗಳು ಇತರ ಸಸಿ/ಬೆಳೆಗಳಿಗೆ ನೆರಳು ಮತ್ತು ಹಸಿಗೊಬ್ಬರವನ್ನು ಒದಗಿಸುವುದರಿಂದ ಅರಣ್ಯ ಕೃಷಿ ಸಮಗ್ರ ಕೃಷಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
4. ಹಸಿರು ಗೊಬ್ಬರದ ಸಸಿಗಳು: ಸಾವಯವ ಪದಾರ್ಥವನ್ನು ಮಣ್ಣಿನಲ್ಲಿ ಸೇರಿಸುವ ಸಲುವಾಗಿ ಸಮಗ್ರ ಕೃಷಿಯಲ್ಲಿ ಬೆಳೆಯುವಂಥ ಸಸಿಗಳು. ಸಾಮಾನ್ಯವಾಗಿ ದ್ವಿದಳ ಧಾನ್ಯಗಳನ್ನು ಮುಖ್ಯಬೆಳೆಗಳ ನಡುವಲ್ಲಿ ಬೆಳೆಯುವುದರಿಂದ ಈ ಸಸಿಗಳು ಸಾರಜನಕವನ್ನು ಮತ್ತಿತರ ಪೋಷಕಾಂಶಗಳನ್ನು ಮಣ್ಣಿನಲ್ಲಿ ಸಂಯೋಜಿಸುತ್ತವೆ ಮತ್ತು ಇದರಿಂದ ಉತ್ತಮ ಬೆಳೆ ನಿರೀಕ್ಷಿಸಬಹುದು.
ಇಂಡಿಯನ್ ಮನಿ.ಕಾಮ್ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಸಮಗ್ರ ಕೃಷಿ
ನೀವು ನನಗೆ ಅಕ್ಕಿ ಕೊಟ್ಟರೆ ನಾನು ಇಂದು ತಿನ್ನುತ್ತೇನೆ. ನೀವು ನನಗೆ ಅಕ್ಕಿ ಬೆಳೆಯುವುದು ಹೇಗೆ ಎಂಬುದನ್ನು ಕಲಿಸಿದರೆ ನಾನು ಪ್ರತಿದಿನ ತಿನ್ನುತ್ತೇನೆ ಎಂಬ ಮಹಾತ್ಮಗಾಂಧಿ ಅವರ ಹೇಳಿಕೆಯಂತೆ ನೀವು ಪ್ರತಿದಿನ ನೆಮ್ಮದಿಯ ಜೀವನವನ್ನು ಜೀವಿಸಲು, ಒಂದು ಬೆಳೆ ಬೆಳೆಯೋದು ಮಾತ್ರವಲ್ಲ, ಸಮಗ್ರ ಬೆಳೆ ಬೆಳೆಯೋದು ಹೇಗೆ ಎಂಬುದನ್ನು ಕಲಿಸಲು ಇಂಡಿಯನ್ ಮನಿ.ಕಾಮ್ ಫೈನಾನ್ಸಿಯಲ್ ಫ್ರೀಡಂ ಆಪ್ ಪಣತೊಟ್ಟಿದೆ. ಇದೇ ನಿಟ್ಟಿನಲ್ಲಿ, ಸಮಗ್ರ ಕೃಷಿಯಲ್ಲಿ ಯಶಸ್ಸು ಗಳಿಸುವ ಜತೆಗೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿರುವ ರೈತರು ಫೈನಾನ್ಸಿಯಲ್ ಫ್ರೀಡಂ ಆಪ್ ಮೂಲಕ ನಿಮಗೆ ತರಬೇತಿ ಕೊಡಲು ಸಿದ್ಧರಿದ್ದಾರೆ. ತಡ ಮಾಡದೇ ಆದಷ್ಟು ಬೇಗ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿರುವ ಸಮಗ್ರ ಕೃಷಿ ಕೋರ್ಸ್ ನೋಡಲಾರಂಭಿಸಿ ಮತ್ತು ಕೃಷಿಯ ಖುಷಿ ಜೀವನವನ್ನು ನಿಮ್ಮದಾಗಿಸಿಕೊಳ್ಳಿ.