ಟ್ರಾವೆಲ್- ಟೂರಿಸಂ ಬಿಸಿನೆಸ್ ಕಟ್ಟಿ ಬೆಳೆಸೋದು ಹೇಗೆ?: ಮನಿಮಾತು

Money Mathu
Published on

ದೇಶ ಸುತ್ತಿ ನೋಡು ಕೋಶ ಓದಿ ನೋಡು- ನಾಣ್ನುಡಿಯಂತೆ ಯಾವುದೇ ವ್ಯಕ್ತಿ ಸಮಾಜದ ಆಗು-ಹೋಗುಗಳನ್ನು ತಿಳಿಯಲು, ಪ್ರಚಲಿತ ವಿದ್ಯಮಾನಗಳನ್ನು ಅರಿಯಲು ಕೋಶ ಓದುವ ಜತೆಗೆ ದೇಶ ಸುತ್ತಬೇಕು. ದೇಶ-ವಿದೇಶಗಳ ಪ್ರವಾಸದಿಂದ ಸಂತೋಷವಾಗುವ ಜತೆಗೆ ಜಾಗತಿಕ ವೈವಿಧ್ಯತೆಯ ನೋಟ ಸಿಗುತ್ತದೆ. ವಿವಿಧ ಭಾಗಗಳ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳಿಂದ ಸಿಗುವ ಕಲಿಕೆ, ವ್ಯಕ್ತಿಯೊಬ್ಬನ ಚಿಂತನಾ ಮಟ್ಟವನ್ನು ಹೆಚ್ಚಿಸುತ್ತದೆ. ಈ ದೃಷ್ಟಿಯಿಂದಲೇ ಪ್ರವಾಸ ಎನ್ನುವುದು ಈಗ ಒಂದು ಉದ್ಯಮವಾಗಿದೆ. ನೀವೀಗ ಊಹಿಸಬಹುದು, ಯಾಕಾಗಿ ಜನರು ಟ್ರಾವೆಲ್ ಬಿಸಿನೆಸ್​ನಲ್ಲಿ ಅತಿ ಹೆಚ್ಚು ಸಂಪಾದನೆ ಮಾಡುತ್ತಿದ್ದಾರೆ ಅಂತ. ಹೌದು, ಕೇವಲ 100-200 ರೂಪಾಯಿಂದ ಟ್ರಾವೆಲ್ ಬಿಸಿನೆಸ್ ಆರಂಭಿಸಿ ಈಗ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿರುವ ಹಲವು ಯಶಸ್ವಿ ಉದ್ಯಮಿಗಳು ಕರ್ನಾಟಕದಲ್ಲಿದ್ದಾರೆ. ಅಂತಹ ಉದ್ಯಮಿಗಳ ಯಶೋಗಾಥೆಯ ಕೆಲವು ಅಂಶಗಳು ಫೈನಾನ್ಸಿಯಲ್ ಫ್ರೀಡಂ ಆಪ್​ನ ಟ್ರಾವೆಲ್ ಆಂಡ್ ಟೂರಿಸಂ ಬಿಸಿನೆಸ್ ಕೋರ್ಸ್​ನಲ್ಲಿವೆ.

ಟ್ರಾವೆಲ್ ಬಿಸಿನೆಸ್ ಅಂದ್ರೆ ಏನು?: ಜನರಿಗೆ ಪ್ರಯಾಣ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ವ್ಯವಸ್ಥೆಯೇ ಟ್ರಾವೆಲ್ ಆಂಡ್ ಟೂರಿಸಂ ಬಿಸಿನೆಸ್. ವಿಮಾನ ಟಿಕೆಟ್ ಬುಕಿಂಗ್, ಪ್ರವಾಸದ ಬುಕಿಂಗ್, ಕ್ಯಾಬ್ ಸೇವೆ, ವೀಸಾ- ಪಾಸ್​ಪೋರ್ಟ್ ಸೇವೆ, ಹೊಟೇಲ್ ಬುಕಿಂಗ್ ಹೀಗೆ ಪ್ರಯಾಣ ಮತ್ತು ಪ್ರವಾಸೋದ್ಯಮದ ಸುತ್ತ ಇರುವ ಎಲ್ಲ ಅಗತ್ಯತೆಗಳನ್ನು ಈ ಬಿಸಿನೆಸ್ ಒಳಗೊಂಡಿದೆ.

ಟ್ರಾವೆಲ್, ಟೂರಿಸಂ ಬಿಸಿನೆಸ್ ಮಾರುಕಟ್ಟೆ ವ್ಯಾಪ್ತಿ: ಟ್ರಾವೆಲ್ ಆಂಡ್ ಟೂರಿಸಂ ಬಿಸಿನೆಸ್ ಪ್ರವಾಸೋದ್ಯಮದ ಅವಿಭಾಜ್ಯ ಅಂಗವಾಗಿದೆ. ಟ್ರಾವೆಲ್ ಮತ್ತು ಟೂರಿಸಂ ಬಿಸಿನೆಸ್​ನ ಮಾರುಕಟ್ಟೆ ಮೌಲ್ಯ ಸುಮಾರು 750 ಲಕ್ಷ ಕೋಟಿ ರೂ. ದೇಶದ ಒಟ್ಟಾರೆ ಬೆಳವಣಿಗೆಯಲ್ಲಿ ಟ್ರಾವೆಲ್ ಬಿಸಿನೆಸ್​ನ ಪಾತ್ರ ಪ್ರಮುಖವಾಗಿದೆ. ಇಂಗ್ಲೆಂಡ್​ನಲ್ಲಿ 1758ರಲ್ಲಿ ಆರಂಭಗೊಂಡ ಟ್ರಾವೆಲ್ ಬಿಸಿನೆಸ್ ಈಗ ಪ್ರಪಂಚಾದಾದ್ಯಂತ ವಿಸ್ತಾರಗೊಂಡಿದೆ.

ಟ್ರಾವೆಲ್ ಟೂರಿಸಂ ಬಿಸಿನೆಸ್​ನ ಪ್ರಾಮುಖ್ಯತೆ: ಅದೆಷ್ಟೋ ಜನ ಜ್ಞಾನ ಮತ್ತು ಅನುಭವ ಪಡೆಯಲು ಪ್ರಯಾಣ ಬೆಳೆಸಿದರೆ ಮತ್ತಷ್ಟು ಜನ ಸಂತೋಷಕ್ಕಾಗಿ, ಇನ್ನಷ್ಟು ಜನ ವ್ಯಾಪಾರ ಉದ್ದೇಶಗಳಿಗಾಗಿ ಪ್ರಯಾಣಿಸುತ್ತಾರೆ. ಹೀಗೆ ಯಾವುದೋ ಗೊತ್ತಿಲ್ಲದ ಊರಿಗೆ ಪ್ರಯಾಣ ಬೆಳೆಸಬೇಕು ಎನ್ನುವವರಿಗೆ ಟ್ರಾವೆಲ್ ಏಜೆನ್ಸಿಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನೆರವು ನೀಡುತ್ತವೆ.

ಟ್ರಾವೆಲ್ ಟೂರಿಸಂ ಬಿಸಿನೆಸ್​ಗೆ ಬೇಕಾಗುವ ಹಣ ಎಷ್ಟು?: ಈ ಮೇಲ್ಕಂಡ ಮಾಹಿತಿ ನೋಡಿದ ನಂತರ ಥಟ್ ಅಂತ ಮನಸಿಗೆ ಬರುವಂತಹ ಮುಂದಿನ ಪ್ರಶ್ನೆ; ಎಷ್ಟು ಬಂಡವಾಳ ಬೇಕೆನ್ನೋದು? ಒಂದು ಜೀವಿಗೆ ಹೃದಯ ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ಯಾವುದೇ ಬಿಸಿನೆಸ್ ಆರಂಭಿಸಬೇಕಾದರೆ ಬಂಡವಾಳ ಅಷ್ಟೇ ಮುಖ್ಯ. ಆದರೆ, ಈ ಟ್ರಾವೆಲ್ ಟೂರಿಸಂ ಬಿಸಿನೆಸ್​ಗೆ ನೀವು ಬಂಡವಾಳದ ಬಗ್ಗೆ ತಲೆ ಬಿಸಿ ಮಾಡಿಕೊಳ್ಳುವ ಅಗತ್ಯ ಇಲ್ಲ. ಮತ್ತೇನು ದುಡ್ಡಿಲ್ಲದೇ ಕೆಲಸ ಮಾಡೋಕಾಗುತ್ತಾ? ಅಂತ ನೀವು ಕೇಳಿದ್ರೆ, ಟ್ರಾವೆಲ್ ಆಂಡ್ ಟೂರಿಸಂ ಬಿಸಿನೆಸ್​ನಲ್ಲಿ ಅನುಭವ ಬಹಳ ಮುಖ್ಯ. ಈ ಬಿಸಿನೆಸ್​ನ ಆಳ ಅಗಲ ತಿಳಿದಿದ್ದರೆ ಮನೆಯಲ್ಲೇ ಒಂದು ಲ್ಯಾಪ್​ಟಾಪ್ ಇಟ್ಟುಕೊಂಡು ಸಣ್ಣ ಮಟ್ಟದಿಂದಲೂ ಉದ್ಯಮ ಆರಂಭಿಸಬಹುದು. ಇಲ್ಲ ದೊಡ್ಡ ಮಟ್ಟದಲ್ಲಿ ಆಫೀಸ್ ಆರಂಭಿಸಿ ಒಂದಿಬ್ಬರು ನೌಕರರನ್ನು ಒಳಗೊಂಡು ಉದ್ಯಮ ಆರಂಭಿಸುತ್ತೇವೆ ಎಂದರೆ, 3 ಲಕ್ಷದಿಂದ 10 ಲಕ್ಷ ರೂ.ವರಗೆ ಹಣ ಬೇಕಾಗುತ್ತದೆ. ಸರಿಯಾಗಿ ಯೋಜನೆ ರೂಪಿಸಿದರೆ ಬ್ಯಾಂಕ್​ನಲ್ಲಿ ಈ ಉದ್ಯಮ ಆರಂಭಿಸುವವರಿಗೆ ಸಾಲ ಸೌಲಭ್ಯವೂ ಸಿಗುತ್ತದೆ.

ಟ್ರಾವೆಲ್ ಟೂರಿಸಂ ಕೋರ್ಸ್​ನ ಮಾರ್ಗದರ್ಶಕರ ಪರಿಚಯ

  • ಬೆಳ್ಳಿಯಪ್ಪ, ಮಾಲೀಕರು- ಮಧುವನ ಟೂರ್ಸ್, ದಾವಣಗೆರೆ
  • ಶ್ರೀನಾಥ್ ಮತ್ತು ಸಂತೋಷ್ ಡಿಸೋಜ- ನ್ಯೂ ಫ್ಲೈವಿಂಗ್ ಟೂರ್ಸ್ ಆಂಡ್ ಟ್ರಾವೆಲ್ಸ್, ಹುಬ್ಬಳ್ಳಿ
  • ಮಹಾಲಿಂಗಯ್ಯ- ಮಾಲೀಕರು, ಸ್ಕೈ ವೇ ಇಂಟರ್​ನ್ಯಾಷನಲ್ ಟ್ರಾವೆಲ್ಸ್, ಮೈಸೂರು
  • ಬಿ.ಎ.ಅಮರನಾಥ್- ಮಾಲೀಕರು, ಮಾತಾ ವೆಕೇಷನ್ಸ್, ಬೆಂಗಳೂರು
  • ಶಾಂತಿ ಸೋನಿ- ಮಾಲೀಕರು, ಸೋನೀಸ್ ಟ್ರಾವೆಲ್ಸ್, ಬೆಂಗಳೂರು

ಫೈನಾನ್ಸಿಯಲ್ ಫ್ರೀಡಂ ಆ್ಯಪ್​ನಲ್ಲಿ ಕೋರ್ಸ್

ನೀವೂ ಟ್ರಾವೆಲ್ ಟೂರಿಸಂ ಬಿಸಿನೆಸ್ ಪ್ರಾರಂಭ ಮಾಡಬೇಕು ಅಂತ ಅಂದುಕೊಂಡಿದ್ದರೆ, ನಿಮಗೆ ಸಹಾಯ ಮಾಡೋಕೆ ಇಂಡಿಯನ್ ಮನಿ.ಕಾಮ್ ಫೈನಾನ್ಸಿಯಲ್ ಫ್ರೀಡಂ ಆ್ಯಪ್ ಮೂಲಕ ಬಹಳ ಕಡಿಮೆ ಬಂಡವಾಳದಿಂದ ಟ್ರಾವೆಲ್ ಏಜೆನ್ಸಿ ಆರಂಭ ಮಾಡಿ, ಈಗ ಅದೇ ಬಿಸಿನೆಸ್​ನಿಂದ ಲಕ್ಷಾಂತರ ರೂ. ಗಳಿಸುತ್ತಿರುವ ಮಾರ್ಗದರ್ಶಕರು, ಅವರ ಸ್ವ ಅನುಭವದಿಂದ ಕಲಿತ ಪಾಠವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲ್ಲಿದ್ದಾರೆ. ಈ ಕೋರ್ಸ್​ನ ನೀವು ನೋಡುವ ಮುಖೇನ ನಿಮ್ಮ ಮನದಲ್ಲಿರುವ ಟ್ರಾವೆಲ್ ಬಿಸಿನೆಸ್ ಬಗೆಗಿನ ಎಲ್ಲ ದ್ವಂದ್ವಗಳನ್ನು ಬಗೆಹರಿಸಿಕೊಂಡು ನಿಮ್ಮ ಸ್ವಂತ ಟ್ರಾವೆಲ್ ಬಿಸಿನೆಸ್ ಪ್ರಾರಂಭಿಸಿ ಕೈ ತುಂಬ ಹಣ ಗಳಿಸಬಹುದು. ನಿಮ್ಮ ಮಾರ್ಗದರ್ಶಕರ ಎಲ್ಲ ಕಿವಿಮಾತುಗಳು ನಿಮ್ಮ ನೆರವಿಗೆ ಬರೋದು ಖಚಿತ. ಹಾಗಾದರೆ, ಮತ್ತೇಕೆ ತಡ, ಫೈನಾನ್ಸಿಯಲ್ ಫ್ರೀಡಂ ಆಪ್ ಅನ್ನು ಪ್ಲೇಸ್ಟೋರ್ ಅಥವಾ ಆಪ್​ಸ್ಟೋರ್​ನಿಂದ ಡೌನ್​ಲೋಡ್ ಮಾಡಿ ಆದಷ್ಟು ಬೇಗ ಆಪ್​ನಲ್ಲಿರುವ ಟ್ರಾವೆಲ್ ಟೂರಿಸಂ ಬಿಸಿನೆಸ್​ನಲ್ಲಿ ಕೋಟಿ ಕೋಟಿ ಗಳಿಸೋದು ಹೇಗೆ ಎಂಬ ಕೋರ್ಸ್ ಅನ್ನು ನೋಡಲಾರಂಭಿಸಿ ಮತ್ತು ನಿಮ್ಮದೇ ಆದ ಟ್ರಾವೆಲ್- ಟೂರಿಸಂ ಬಿಸಿನೆಸ್ ಆರಂಭಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net