

ನಾಳೆಯಿಂದ ಕೆಲಸಕ್ಕೆ ಹಾಜರಾಗು!’ ನೈತಿಕ ಶಿಕ್ಷಣಕ್ಕೆ ಯಾವ ಹಂತದಲ್ಲಾದರೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಾನ ಇದೆಯಾ? ವ್ಯವಸ್ಥೆ ಬಿಡಿ, ಪಾಲಕರಾದರೂ ಇದನ್ನು ಒಪ್ಪುತ್ತಾರೆಯೇ? ತಪ್ಪು ಯಾರದು? ಹೆಜ್ಜೆ ಹೆಜ್ಜೆಗೂ ಆದರ್ಶಗಳನ್ನು ಪಾಲಿಸಿದ ಶ್ರೀರಾಮನನ್ನು ಅನಾದಿಕಾಲದಿಂದಲೂ ರೋಲ್ವಾಡೆಲ್ ಆಗಿ ಸ್ವೀಕರಿಸಲಾಗಿತ್ತು. ಹರಿಶ್ಚಂದ್ರ, ದಧೀಚಿ, ಸಾವಿತ್ರಿ, ಅರುಂಧತಿ, ಸೀತೆ, ಕ್ಷುದಿರಾಮ್ ಚಟರ್ಜಿ, ರಾಮಕೃಷ್ಣರು, ವಿವೇಕಾನಂದರು, ಬುದ್ಧ, ಅಕ್ಕಮಹಾದೇವಿ ಇವರೆಲ್ಲ ಇಂದ್ರಿಯ ಚಾಪಲ್ಯಗಳನ್ನು ಪೂರ್ತಿ ಸುಟ್ಟು ಆದರ್ಶಗಳನ್ನೇ ಉಸಿರಾಡಿದವರು. ಆದರೆ ಇಂಥವರ ಚಾರಿತ್ರ್ಯವಧೆಯಲ್ಲೇ ನಿರತರಾದ ಅವಿವೇಕಿಗಳು ಇಂದು ಸರ್ಕಾರಗಳಿಂದ ಚಿಂತಕ ಪಟ್ಟ, ಪ್ರಶಸ್ತಿ, ಮಂಡಳಿಗಳ ಅಧ್ಯಕ್ಷ ಸ್ಥಾನ ಪಡೆಯುತ್ತಾರೆ! ಮದ್ಯ ಕುಡಿಸಿ, ಮತ್ತು ಬರಿಸಿ, ಮತಿ ಕೆಡಿಸಿ ಮತವನ್ನು ಪಡೆದವನು ಮತಿವಂತನಾಗಿ ಆಳಬಲ್ಲನೇ?!