ನೀನು ಭಾರತೀಯ, ನಿನಗೇಕೆ ಭಯ!

India
Published on

ನನ್ನದೇ ಅನುಭವದಿಂದ ಪ್ರಾರಂಭಿಸುತ್ತೇನೆ. ಕಳೆದ ಮೂವತ್ತು ವರ್ಷಗಳಿಂದ ನನಗೆ ಡಯಾಬಿಟಿಸ್​ ಹಾಗೂ ಇಪತ್ತು ವರ್ಷಗಳಿಂದ ರಕ್ತದೊತ್ತಡ ಇದೆ. ದಿನಕ್ಕೆ ನಲವತ್ತು ಯೂನಿಟ್​ ಇನ್ಸುಲಿನ್​ ಹಾಗೂ ಸಾಕಷ್ಟು ಮಾತ್ರೆ ತೆಗೆದುಕೊಳ್ಳುತ್ತೇನೆ. ಕಳೆದ ಆಗಸ್ಟ್​ನಲ್ಲಿ ಸ್ವಲ್ಪ ಜ್ವರ ಬಂತು, ನಾಲಿಗೆಯ ರುಚಿ ಹೋಯಿತು, ಕರೊನಾ ಪಾಸಿಟಿವ್​ ಎಂದು ತಿಳಿಯಿತು. ಆಸ್ಪತ್ರೆಗೆ ದಾಖಲಾದೆ, ಅಷ್ಟೇ ; ಸುಸ್ತಿಲ್ಲ, ನೆಗಡಿ ಇಲ್ಲ, ನಿದ್ದೆಯ ಸಮಸ್ಯೆಯಂತೂ ಎಂದೂ ಇರಲಿಲ್ಲ! ವೆದ್ಯರು ಮತ್ತೆ ಮತ್ತೆ "ಸುಸ್ತು ಆಗುತ್ತಿಲ್ಲವೇ?' ಎಂದು ಕೇಳಿದಾಗ, "ನೀವು ಬಿಟ್ರೆ ಹತ್ತು ಕಿಲೋಮೀಟರ್​ ನಡೆಯುತ್ತೇನೆ' ಎಂದೆ, ನಾಲ್ಕೈದು ದಿನಗಳ ನಂತರ ಮತ್ತೆ ಪರೀೆಗೆ ಒಳಪಡಿಸಿದಾಗ ನೆಗೆಟಿವ್​ ಬಂತು, ತಣವೇ ಬಿಡುಗಡೆ ಮಾಡಿದರು.

ನನ್ನ ರಕ್ತದಲ್ಲಿ ಸಕ್ಕರೆಯ ಮಟ್ಟ ಯಾವಾಗಲೂ ಕಂಟ್ರೋಲ್​ನಲ್ಲಿಯೇ ಇರುತ್ತದೆ ಎಂದು ಹೇಳಲಾರೆ, ಆದರೂ ಮುಳ್ಳು ಚುಚ್ಚಿಕೊಂಡಾಗ, ಮತ್ತಾವುದಾದರೂ ಗಾಯ ಆದಾಗ ಮೂರು&ನಾಲ್ಕು ದಿನಗಳಲ್ಲಿ ವಾಸಿಯಾಗಿಯೇ ಹೋಗುತ್ತದೆ! ಎಲ್ಲಿ ಗಾಯವಾಗಿತ್ತು ಅಂತ ಗುರುತುಸಿಗದ ಹಾಗೆ! ನಾನು ಔಷಧ ಹಚ್ಚೋದೇ ಅಪರೂಪ. ಹಚ್ಚಿದರೂ ಅರಿಷಿಣ ಇಲ್ಲವೇ ನಿಂಬೆರಸ. ಇದೆಲ್ಲ ಹೇಗೆ?! ಮುಂದೆ ಹೇಳುತ್ತೇನೆ.

ಈ ಕರೊನಾ ಒಂದು ಯಕಶ್ಚಿತ್​ ವೆರಸ್​, ಅದಕ್ಕೆ ಇಷ್ಟು ಹೆದರಬೇಕೆ? ಅದೊಂದು ಆಮ್ಲ, ರೆಬೋ ನ್ಯೂಕ್ಲಿಯಿಕ್​ ಆ್ಯಸಿಡ್​ (RNA) ಎಂದು ಅದರ ಹೆಸರು. ಪ್ರಪಂಚದಲ್ಲಿರುವ ಎಷ್ಟೋ ಆ್ಯಸಿಡ್​ಗಳಲ್ಲಿ ಇದೂ ಒಂದು. ನಮ್ಮ ಹೊಟ್ಟೆಯಲ್ಲಿಯೇ ಹೆಡ್ರೋಕ್ಲೋರಿಕ್​ ಆ್ಯಸಿಡ್​ (Hydrochloric acid) ಇದೆ. ಅಂತೆಯೇ ಇನ್ನೆಷ್ಟೋ ಆ್ಯಸಿಡ್​ಗಳಿವೆ. ಅದಕ್ಕೆಲ್ಲ ಯಾರು ಹೆದರುತ್ತಾರೆ! ರ್ನಿಜೀವ ವಸ್ತುವಿಗೆ ಹೆದರೋದು ಅಂದರೆ ಏನು? ಲಾಂತರ ಜನರಿಗೆ ಅದು ಬಂದು ಹೋಗಿದೆ, ಬಂದದ್ದೂ ತಿಳಿಯಲಿಲ್ಲ, ಹೋಗಿದ್ದೂ ತಿಳಿಯಲಿಲ್ಲ. ಸೋಂಕು ತಗುಲಿದೆ ಎಂದು ಗೊತ್ತಾಗಿದ್ದೇ ಇನ್ನಿಲ್ಲದ ರೀತಿಯಲ್ಲಿ ಹೆದರಿ, ಮುದುರಿಕೊಂಡಿದ್ದೇವೆ! ಭಿಕ್ಷುಕಿಯೊಬ್ಬಳು, "ನಾವು ಎಲ್ಲೆಲ್ಲೋ ಊಟ ಮಾಡುತ್ತೇವೆ. ಎಲ್ಲೆಲ್ಲೋ ಮಲಗುತ್ತೇವೆ. ಯಾರು ಚಿಲ್ಲರೆ, ನೋಟು ಕೊಟ್ಟರೂ ತೆಗೆದುಕೊಳ್ಳುತ್ತೇವೆ. ನಮಗೇಕೆ ಸರ್​ ಏನೂ ಆಗುವುದಿಲ್ಲ', ಎಂದು ಮಾಧ್ಯಮದವರನ್ನು ಕೇಳುತ್ತಿದ್ದಳು. ಈ ಪ್ರಶ್ನೆ ಅಪ್ರಸ್ತುತವೂ ಅಲ್ಲ, ಅತಾರ್ಕಿಕವೂ ಅಲ್ಲ! ಹಾಗಾದರೆ ಇಂದಿನ ವಿಷಮಸ್ಥಿತಿಗೆ ವೆರಸ್​ಗಿಂತ ಬಹಳ ಪಟ್ಟು ಸೋಂಕಿತರ ಅನವಶ್ಯಕ ಆತಂಕ, ಭಯ ಇವೇ ಕಾರಣ ಇರಬಹುದೇ?!

ಕರೊನಾ ವೆರಸ್​ಗೆ ನಮ್ಮ ಮೂಗು, ಕಣ್ಣು, ಬಾಯಿಗಳ ಮೂಲಕ ಮಾತ್ರ ಶರೀರದ ಒಳಕ್ಕೆ ಹೋಗುವ ಸಾಮರ್ಥ್ಯವಿದೆ, ಇನ್ನಾವ ರೀತಿಯಲ್ಲೂ ಅದು ಹೋಗಲಾರದು, ಮಾಸ್ಕ್​ ಧರಿಸಿ ಸುರತ ಅಂತರ ಕಾಯ್ದುಕೊಂಡರೆ ಅದರ ಸುಳಿವೇ ಇರುವುದಿಲ್ಲ. ಎಲ್ಲೋ ಸ್ಪರ್ಶಿಸಿದ ಕಾರಣಕ್ಕಾಗಿ ಕೆಗೆ ಅಂಟಿಕೊಂಡಿದ್ದರೆ ಆಗಾಗ್ಗೆ ಸೋಪಿನಲ್ಲಿ ಕೆ ತೊಳೆಯುತ್ತಿದ್ದರೆ ವೆರಾಣುವಿನ ಮೇಲ್ಪದರ ಸೋಪ್​ ದ್ರಾವಣದಲ್ಲಿ ಕರಗಿ ಅದು ಹಲ್ಲುಕಿತ್ತ ಹಾವಿನಂತಾಗುತ್ತದೆ. ಒಂದು ವೇಳೆ ಒಳಹೊಕ್ಕಿದ್ದರೆ, ಉಪು$್ಪ, ಅರಿಷಿಣಯುಕ್ತ ಬಿಸಿನೀರಿನಲ್ಲಿ ಮುಕ್ಕಳಿಸುವುದು ಅಂದರೆ gargling ಮಾಡುವುದರಿಂದ ವೆರಸ್​ ಸಾಯುತ್ತದೆ ಇಲ್ಲವೇ ದುರ್ಬಲವಾಗುತ್ತದೆ. ಈ ರೀತಿ ದಿನಕ್ಕೆ ನಾಲ್ಕೆ$ದು ಸಲ ಮುಕ್ಕಳಿಸಬೇಕು.
ಇಷ್ಟಾಗಿಯೂ ಶರೀರದ ಒಳಕ್ಕೆ ಹೋಗಿಯೇ ಬಿಟ್ಟರೆ ಗಂಟಲಲ್ಲೇ ಮೂರು&ನಾಲ್ಕು ದಿನ ಉಳಿದುಬಿಡುತ್ತದೆ. ತನ್ನ ಮೆಮೇಲಿನ ಮುಳ್ಳಿನಂತಹ Spikes ಮೂಲಕ ಗಂಟಲಿನ ಜೀವಕೋಶಗಳನ್ನು ಪ್ರವೇಶಿಸಿ ಅಲ್ಲಿ ಒಂದಕ್ಕೆ ನೂರು, ನೂರಕ್ಕೆ ಸಾವಿರ, ಸಾವಿರಕ್ಕೆ ಲ, ಹೀಗೆ ಸಂಖ್ಯಾಬಲ ಹೆಚ್ಚಿಸಿಕೊಳ್ಳುವತ್ತ ವೆರಸ್​ ಕಾರ್ಯತತ್ಪರವಾಗುತ್ತದೆ. ಇದು ನೇರ ಶರೀರಕ್ಕೆ ಸಂಬಂಧಪಡದ ಬಾಹ್ಯವಸ್ತು ಆಂಟಿಜೆನ್​ ಆಗಿರುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಎಂಬ ರಣಾ ವ್ಯವಸ್ಥೆ ( ಇಮ್ಯೂನಿಟಿ ಸಿಸ್ಟಮ್​) ಈ ಬಾಹ್ಯ ವಸ್ತುವಿನೊಡನೆ ಹೋರಾಡಲು Antibody ಎಂಬ ಸೆನಿಕರನ್ನು ನಿರ್ಮಿಸುತ್ತದೆ, ಇವರೀರ್ವರ ತೀವ್ರ ಹೋರಾಟದಲ್ಲಿ "ಸೆಟೋಕೆನ್ಸ್​' ಎಂಬ ರಾಸಾಯನಿಕಗಳು ನಿರ್ಮಾಣವಾಗುತ್ತವೆ, ಇವುಗಳ ನಿರ್ಮಾಣ ಶಾರೀರಿಕ ಉಷ್ಣಾಂಶದ ಹೆಚ್ಚಳ, ಜ್ವರ, ಕೆಮ್ಮು, ನೆಗಡಿ, ಗಂಟಲು ಊತ ಇತ್ಯಾದಿಗಳ ರೂಪದಲ್ಲಿ ಇಡೀ ಶರೀರಕ್ಕೆ ಎಚ್ಚರಿಕೆ ಗಂಟೆಯನ್ನು ಬಾರಿಸುತ್ತದೆ. ಈ ಹಂತದಲ್ಲಿಯೇ ಎಚ್ಚೆತ್ತು ಕ್ರಮ ಕೆಗೊಂಡರೆ ಇದರ ಉಪಟಳವೇ ಇರುವುದಿಲ್ಲ.

ಆ ಸಮಯದಲ್ಲಿ ಆಯುರ್ವೇದ ಹೇಳುವ ಬಿಸಿ ಕಷಾಯಗಳು, ಬಿಸಿನೀರು, ಅರಿಷಿಣಯುಕ್ತ ಬಿಸಿಹಾಲು& ಇವುಗಳ ಸೇವನೆ ಉತ್ತಮ ಪರಿಹಾರ. ಆಹಾರಗಳನ್ನು ಬಿಸಿಬಿಸಿಯಾಗಿಯೇ ಸೇವಿಸಬೇಕು. ಹೊರಗಿನಿಂದ ತಂದ ಪದಾರ್ಥಗಳನ್ನು ಬಿಸಿಲಿಗಿಟ್ಟು ಮತ್ತೆ ಬಿಸಿನೀರಿನಲ್ಲಿ ತೊಳದೇ ಉಪಯೋಗಿಸಬೇಕು. ಜೊತೆಗೆ ಸ್ವಲ್ಪಮಟ್ಟಿಗೆ ವ್ಯಾಯಾಮ, ಪ್ರಾಣಾಯಾಮ ಅಳವಡಿಸಿಕೊಳ್ಳುವುದು ಸೂಕ್ತ (ವ್ಯಾಯಾಮ ಹಾಗೂ ಪ್ರಾಣಾಯಾಮಗಳು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ ಎಂದು ಅನೇಕ ಸಂಶೋಧನೆಗಳು ಒಕ್ಕೊರಲಿನಿಂದ ಹೇಳಿವೆ). ಇಡೀ ದೇಶಕ್ಕೆ ತಲೆನೋವಾಗಿರುವ ಈ ಬೇನೆಗೆ ಕಾರಣ ಪ್ರಾರಂಭದ ಹಂತದಲ್ಲಿ ಅದನ್ನು ರ್ನಿಲಸಿದ್ದು. ದುರಂತವೆಂದರೆ ಈ ಹಿಂದೆ ನಮಗೆ ಸಾಮಾನ್ಯವಾಗಿ ಆಗುತ್ತಿದ್ದ ನೆಗಡಿ, ಕೆಮ್ಮೇ ಇದು ಎಂದು ಭಾವಿಸಿಯೋ, "ಎರಡು ದಿನ ಇದ್ದು ಹೋಗುತ್ತದೆ' ಎಂದು ಉದಾಸೀನ ಮಾಡಿಯೋ, ಇಲ್ಲವೇ ನಾವೇ ಸೆಲ್ಫ್​ ಮೆಡಿಕೇಷನ್​ ಮಾಡಿಕೊಂಡು ರ್ನಿಲಸುವುದರ ಪರಿಣಾಮ ದೇಶ ತತ್ತರಿಸುವಂತೆ ಆಗಿದೆ ಎಂದು ನಾನು ಚರ್ಚಿಸಿದ ಮೂರು&ನಾಲ್ಕು ಜನ ಸುಪ್ರಸಿದ್ಧ ವೆದ್ಯರು ಅಭಿಪ್ರಾಯಪಟ್ಟಿದ್ದಾರೆ.

ಕರೊನಾವನ್ನು ನಿಯಂತ್ರಿಸಲಿಲ್ಲ ಎಂದರೆ ಅದರ ಮುಂದಿನ ಪ್ರಯಾಣ ಶ್ವಾಸಕೋಶದೆಡೆಗೆ! ಸಾಕಷ್ಟು ಸಂಖ್ಯಾಬಾಹುಳ್ಯ ಪಡೆದ ವೆರಸ್​ ಶ್ವಾಸಕೋಶಗಳಲ್ಲಿಯೂ ಇಮ್ಯುನಿಟಿ ಸಿಸ್ಟಮ್​ನ ಸೆನಿಕರಾದ ಆ್ಯಂಟಿಬಾಡಿಗಳಿಂದ ತೀವ್ರ ವಿರೋಧ ಎದುರಿಸುತ್ತದೆ. ಆದರೆ ದುರಂತವೆಂದರೆ ಆ್ಯಂಟಿಬಾಡಿಗಳು ಕರೊನಾ ವೆರಸ್​ನೊಡನೆ ಮಾತ್ರ ಉಗ್ರ ಹೋರಾಟ ನಡೆಸುವುದಿಲ್ಲ, ಆ ವೆರಸ್ಸುಗಳನ್ನೇ ಹೋಲುವ ನಮ್ಮದೇ ಶರೀರದ ಸ್ನೇಹಜೀವಿಗಳಾದ ಉಪಯುಕ್ತ ಜೀವಕೋಶ (ಅವು ಪುಪ್ಪಸ, ಕಿಡ್ನಿ, ಸ್ಮಾಲ್​ ಇಂಟೆಸ್ಟಿನ್​ನಲ್ಲಿ ಇರುವವು) ಗಳೊಡನೆಯೂ ತೀವ್ರ ಹೋರಾಟ ನಡೆಸಿ ಸೆಟೋಕೆನ್​ಗಳ ಮಹಾಪೂರವೇ ನಿರ್ಮಾಣವಾಗುವಂಥ ಸಂದರ್ಭ ಒದಗಿಬಿಡುತ್ತದೆ. ಇದಕ್ಕೆ "ಸೆಟೋಕೆನ್​ ಸ್ಟಾಮ್​ರ್' ಎನ್ನುವರು. ಈ ಸಂದರ್ಭದಲ್ಲಿ ಈ ಸೆಟೋಕೆನ್​ಗಳು ಪುಪ್ಪಸಗಳ Air sacs ಅನ್ನು ಸುತ್ತುವರಿದಿರುವ ಸೂ$್ಮ ರಕ್ತನಾಳಗಳ ಲೆನಿಂಗ್​ ಮಟೀರಿಯಲ್​ಗಳಾದ ಆ ಸ್ನೇಹಿಜೀವಿ ಜೀವಕೋಶಗಳನ್ನು ನಾಶ ಮಾಡುತ್ತವೆ, ಇದರಿಂದಾಗಿ ಗಾಯಗೊಂಡ ರಕ್ತನಾಳಗಳು ತೆಳುವಾಗುತ್ತವೆ. ನಮ್ಮ ದೇಹದಲ್ಲಿ ಚಲಿಸುವ ರಕ್ತದಲ್ಲಿ ದ್ರವಾಂಶ ಹಾಗೂ ನಾಂಶ ಎರಡೂ ಇದ್ದು, ಪುಪ್ಪಸದ ರಕ್ತನಾಳಗಳ ತೆಳುವಾಗುವಿಕೆಯಿಂದ ರಕ್ತದ ದ್ರವಾಂಶ ಹೊರಚೆಲ್ಲಿ ನಾಂಶ ಉಳಿದು ರಕ್ತನಾಳಗಳಲ್ಲಿ ಹೆಪು$್ಪಗಟ್ಟಿ ರಕ್ತ ಸಂಚಾರಕ್ಕೆ ಅಡ್ಡಿ ಮಾಡುತ್ತದೆ. ಇಲ್ಲವೇ ಈ ನಾಂಶ (cellular component) ಇಲ್ಲಿಂದ ಮತ್ತೆಲ್ಲಿಗೋ ಕೊಚ್ಚಿಕೊಂಡು ಹೋಗಿ (ಮಿದುಳಿಗೋ, ಹದಯಕ್ಕೋ) ಕಾರ್ಡಿಯಾಕ್​ ಅರೆಸ್ಟ್​, ಪಾರ್ಶ್ವವಾಯು ಇತ್ಯಾದಿಗಳಿಗೆ ಕಾರಣವಾಗುತ್ತದೆ.

ಹಿಡಿಯಷ್ಟು ಇದ್ದ ಸಮಸ್ಯೆಯನ್ನು ಹಿಮಾಲಯದಷ್ಟು ಮಾಡಿಕೊಳ್ಳುವುದು ಎಂದರೆ ಇದೇ ಅಲ್ಲವೇ? ಈ ಹಂತದಲ್ಲಿಯೂ ರೋಗಿ ಮತ್ಯುಮುಖನಲ್ಲ. Steroid ಹಾಗೂ Anti- coagulantWಗಳ ಮೂಲಕ ಸಮಸ್ಯೆಯಿಂದ ಪಾರಾಗಬಹುದು. ಇದೊಂದು ಯುದ್ಧವೇ ಹೌದು! ಆದರೆ ಸಾಯಬೇಕಾದ ಯುದ್ಧವಲ್ಲ! ಸುಲಭದಲ್ಲಿ ಗೆಲ್ಲಬಹುದಾದ ಯುದ್ಧವೇ! ಒಂದು ಬಹುಮುಖ್ಯ ವ್ಯಾಕ್ಸಿನ್​, ಬಹುಮುಖ್ಯ ಔಷಧವನ್ನು ಸೇವಿಸಿದಾಗ ಮಾತ್ರ, ಅದೇ ಧೆರ್ಯ! ಇಷ್ಟೆಲ್ಲ ವಿಶ್ಲೇಷಣೆಯಿಂದ ಸ್ಪಷ್ಟವಾಗುವುದೇನೆಂದರೆ ಹೆದರಿ ಹಿಪ್ಪೆಯಾಗುವುದಕ್ಕೆ ಯಾವ ಕಾರಣವೂ ಇಲ್ಲ, ಹಾಗೆಂದ ಮಾತ್ರಕ್ಕೆ ಸಂಪೂರ್ಣವಾಗಿ ರ್ನಿಲಸಿ ಎಂದೇನು ಹೇಳಲಿಲ್ಲ.

ಮನುಷ್ಯ ಶರೀರಕ್ಕೆ ಅದ್ಭುತವಾದ ರೆಜುವಿನೇಟಿಂಗ್​ ಪವರ್​ ಇದೆ, ಎಂತಹ ಭರವಸೆಯೇ ಇಲ್ಲದ ದು@ಸ್ಥಿತಿಯಿಂದಲೂ ಸುಸ್ಥಿತಿಗೆ ಮರಳುವ ಸಾಮರ್ಥ್ಯವಿದೆ. "ಮನುಷ್ಯನ ಮನಸ್ಸು ಶಕ್ತಿಯ ಗಣಿ, ಸಾಮರ್ಥ್ಯಗಳ ಅಯಪಾತ್ರೆ. ಮನುಷ್ಯನ ಸಾಮರ್ಥ್ಯಗಳನ್ನು ವರ್ಣಿಸುವುದಿರಲಿ ಊಹಿಸುವುದಕ್ಕೂ ಯಾವ ವಿಜ್ಞಾನಕ್ಕೂ, ಯಾವ ಧರ್ಮಕ್ಕೂ, ಯಾವ ಶಾಸ್ತ್ರಕ್ಕೂ ಸಾಧ್ಯವಿಲ್ಲ' ಎಂದಿದ್ದಾರೆ ಸ್ವಾಮಿ ವಿವೇಕಾನಂದರು. "ಭಯವೇ ದೊಡ್ಡ ವೆರಸ್​. ನನಗೆ ಏನೂ ಆಗುವುದಿಲ್ಲ ಎಂದು ದಢವಾಗಿ ನಾಲ್ಕು ಸಲ ಹೇಳು. ಹಾವಿನ ವಿಷವೂ ನಿಷ್ಚೇಷ್ಚಿತವಾಗುತ್ತದೆ' ಎಂದಿದೆ ವಿವೇಕವಾಣಿ.

ಈ ಉಪಾಯವನ್ನು ಅನುಸರಿಸಿಯೇ ನಾನು ಗಾಯವಾದಾಗಾಗಲಿ, ಕರೊನಾ ಬಂದಾಗಲಾಗಲಿ ಸುಲಭವಾಗಿ ಪಾರಾಗಿದ್ದೇನೆ. ಇಂದು ಅವಶ್ಯಕವಾಗಿ ಬೇಕಾಗಿದ್ದು ಧೆರ್ಯ. ಆಧ್ಯಾತ್ಮಿಕತೆಯ ಸಾರವೇ ಧೆರ್ಯ ಮತ್ತು ಪಾವಿತ್ರ$್ಯ. ವ್ಯಾಕ್ಸೀನ್​ಗಳು, ಇತ್ಯಾದಿ ಎಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ, ಜೊತೆಗೆ ಧೆರ್ಯ ಎನ್ನುವ ವ್ಯಾಕ್ಸಿನ್​ ಕೂಡ ಪ್ರತಿಣವೂ, ಅನುದಿನವೂ ತೆಗೆದುಕೊಳ್ಳುತ್ತಿರೋಣ. ಈ ವ್ಯಾಕ್ಸಿನ್ನಿಗೆ ಹೊರಗೆ ಹೋಗಬೇಕಾಗಿಲ್ಲ, ಕ್ಯೂ ನಿಲ್ಲಬೇಕಾಗಿಲ್ಲ, ಹೇರಳವಾಗಿ ಮುಗಿಯದಷ್ಟು ನಮ್ಮಲ್ಲಿಯೇ ಇದೆ. ಇದೊಂದೇ ವ್ಯಾಕ್ಸಿನ್​ ಇದ್ದರೆ ಬೇರೆಲ್ಲವೂ ಹತ್ತುಪಟ್ಟು ಹೆಚ್ಚು ಪರಿಣಾಮಕಾರಿಯಾಗುತ್ತವೆ.

ಭಾರತೀಯ ಸಂಸತಿ ನಮ್ಮ ಮುಂದೆ ಇಟ್ಟಿರುವ ಗುರಿ ಅಮತತ್ವ; ಮತತ್ವದಿಂದ ಪಾರಾಗುವುದು ಅರ್ಥಾತ್​ ಸಾವಿನಿಂದ ಪಾರಾಗುವುದು. ಇದು ಕೇವಲ ಭ್ರಮೆಯೋ? ಇದನ್ನಾರಾದರೂ ಸಾಧಿಸಿದ್ದಾರೋ, ಶ್ರೀರಾಮಕಷ್ಣ, ಸ್ವಾಮಿ ವಿವೇಕಾನಂದರು, ಶಂಕರ ಇವರೆಲ್ಲ ತಮಗೆ ಬೇಕೆಂದಾಗ ಶರೀರದ ಆಚೆಗೆ ಹೋಗಿ ಮತ್ತೆ ಪ್ರವೇಶಿಸುತ್ತಿದ್ದರು. ಬುದ್ಧನ ತಪಸ್ಸಿನ ಉದ್ದೇಶವಾದರೂ ಏನಿತ್ತು? ಅದೇ ಅಮತತ್ವ, ನಾವು ಆ ಸಂಸತಿಯಲ್ಲಿ ಹುಟ್ಟಿದವರು. ಮತ್ಯುವಿನೊಡನೆ ಆಟವಾಡ ಬಲ್ಲವರು!

1900 ಸುಮಾರಿಗೆ ಪ್ಯಾರಿಸ್​ನಲ್ಲಿ ನೆಪೋಲಿಯನ್ನನ ಮೊಮ್ಮಗನನ್ನು ಭೇಟಿಮಾಡಿದ ಸ್ವಾಮಿ ವಿವೇಕಾನಂದರು, "ಭಾರತಕ್ಕೆ ನನ್ನ ಜೊತೆ ಬಾ' ಎಂದು ಕರೆದರು. ಆತ, "ಅದರಿಂದ ಏನು ಪ್ರಯೋಜನ?' ಎಂದು ಕೇಳಿದ. "ನಾಳೆ ಮತ್ಯು ನಿನ್ನ ಹತ್ತಿರ ಬಂದಾಗ ಅದರ ಮೀಸೆ ಹಿಡಿದು ಆಟ ಆಡುವುದು ಹೇಗೆ ಅಂತ ಹೇಳಿಕೊಡುತ್ತೇನೆ ಬಾ' ಎಂದು ಹೇಳಿದರು. ಈ ಸಂಸತಿಯ ಒಳನೋಟಗಳೇ ಇಲ್ಲದ ಬದುಕು ಇಂದು ನಮ್ಮದಾಗಿದೆ. "ಗೋ ಬ್ಯಾಕ್​ ಟು ಉಪನಿಷತ್ಸ್​' ಎಂದು ಅದೆಷ್ಟು ಸಲ ಗರ್ಜಿಸಿದರೋ ವಿವೇಕಾನಂದರು! ಏನು ಕಾರಣ? ಅದು ಶಕ್ತಿಯ ಗಣಿ, ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಶಕ್ತಿಯೇ ಪರಿಹಾರ. "ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ' ಎಂದು ಸ್ಪಷ್ಟವಾಗಿ ನಂಬಿದ್ದವರು ಅವರು, ಆದರೆ ಈ ಶಕ್ತಿಯ ಸಂದೇಶ ಎಲ್ಲಿದೆ? ಉಪನಿಷತ್ತುಗಳಲ್ಲಿ, what we want is strength, strength, strength, every time strength & Upanishads are the great mine of strength, there in lies strength enough to invigorate the whole world. ಅಂತ ಹೇಳಿದ್ದಲ್ಲದೆ The one word that bursts out like a bomb shell from every page of Upanishads is fearlessness ನಿರ್ಭಯತೆ, ಮತ್ಯುವಿನ ಮೀಸೆ ಹಿಡಿದು ಆಟದ ಗೊಂಬೆಯಂತೆ ಆಟವಾಡ ಬಲ್ಲ ಧೆರ್ಯ, ಇದೇ ಇಂದಿನ ಅವಶ್ಯಕತೆ.


ಲೇಖಕರ ಕುರಿತು
ಗದಗ ಮತ್ತು ವಿಜಯಪುರ ರಾಮಕೃಷ್ಣ&ವಿವೇಕಾನಂದ ಆಶ್ರಮದ ಅಧ್ಯಕ್ಷರಾಗಿರುವ ಸ್ವಾಮಿ ನಿರ್ಭಯಾನಂದ ಸರಸ್ವತಿ ಪ್ರಖರ, ಉದ್ಭೋದಕ ಉಪನ್ಯಾಸಗಳಿಂದ ಹೆಸರುವಾಸಿಯಾಗಿದ್ದಾರೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹಲವು ಸಮ್ಮೇಳನಗಳಲ್ಲಿ ಮಾತನಾಡಿ, ಪ್ರೇರಣೆ ತುಂಬಿರುವ ಸ್ವಾಮೀಜಿ ರಾಜ್ಯಾದ್ಯಂತ ನಡೆದ ಭಕ್ತಿ ಸಮ್ಮೇಳನಗಳಲ್ಲೂ ಮಾರ್ಗದರ್ಶನ ಮಾಡಿದ್ದಾರೆ. 2004ರಲ್ಲಿ ಸ್ಪೇನ್​ನಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು, "ಭಾರತ ಮತ್ತು ಹಿಂದುತ್ವ' ವಿಷಯದ ಬಗ್ಗೆ ಮಾತನಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net