ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಹಾಕಿಯ ದಂತಕತೆ ಧ್ಯಾನ್​ಚಂದ್ ಹೆಸರಿಟ್ಟಿದ್ದು ಉತ್ತಮ ನಿರ್ಧಾರ

Modi 1
Published on

ದೇಶದ ಕ್ರೀಡಾಪಟುಗಳಿಗೆ ಕೊಡಮಾಡುವ ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ‘ಖೇಲ್ ರತ್ನ’ ಅನ್ನು ಹಾಕಿಯ ದಂತಕತೆ ಧ್ಯಾನ್​ಚಂದ್ ಹೆಸರಲ್ಲಿ ನೀಡಲು ನಿರ್ಧರಿಸುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ದೇಶದ ಕ್ರೀಡಾಭಿಮಾನಿಗಳ ಬಹುವರ್ಷಗಳ ಆಶಯವನ್ನು ಈಡೇರಿಸಿದ್ದಾರೆ. ರಾಷ್ಟ್ರೀಯ ಕ್ರೀಡೆ ಹಾಕಿಗೂ ಹಾಗೂ ಹಾಕಿ ಮಾಂತ್ರಿಕ ಧ್ಯಾನ್​ಚಂದ್ ಅವರಿಗೂ ನೀಡಿದ ಗೌರವ ಇದಾಗಿದೆ. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಹಾಕಿಯಲ್ಲಿ ಭಾರತ ತೋರಿರುವ ಅದ್ಭುತ ಸಾಧನೆ ಜೊತೆಯಲ್ಲಿ ಈ ಮರುನಾಮಕರಣ ಇನ್ನಷ್ಟು ಸ್ಪೂರ್ತಿ ನೀಡಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಕ್ರೀಡೆ ಹಾಕಿ ಇನ್ನಷ್ಟು ಉತ್ಕರ್ಷ ಕಾಣಲು ಸಹಕಾರಿಯಾಗಲಿದೆ.

| ಕೆ.ಶಶಿಧರ್ ಆಲೂರ್ ಕುಂದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net