ಬಿಸಿನೆಸ್ ಮಾಡಲು ಇಲ್ಲಿವೆ ನೂರಾರು ದಾರಿ...; ಮನಿಮಾತು

Money mathu
Published on
‘ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ... ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದೆಂದು...’ ಬಂಗಾರದ ಮನುಷ್ಯ ಚಿತ್ರದಲ್ಲಿ ರಾಜ್​ಕುಮಾರ್ ಅವರು ಕೊಡುವ ಈ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಕರೊನಾದಿಂದ ಕೆಲಸ ಹೋಗಿದೆ, ಬದುಕು ದುಸ್ತರವಾಗಿದೆ ಎಂದು ಕೈಚೆಲ್ಲಿ ಕುಳಿತರೆ ಆಗುವುದಿಲ್ಲ. ಉದ್ಯೋಗ ನಂಬಿ ಕೂರುವ ಬದಲು ನಾವೇ ಉದ್ಯಮ ಕಟ್ಟಿ ನಾಲ್ಕಾರು ಮಂದಿಗೆ ಕೆಲಸ ಕೊಡುವಂತಾಗಬೇಕು. ಹೌದು ನಮ್ಮ ಹಣಕಾಸಿನ ಇತಿಮಿತಿ ಅರಿತು ನಮಗೊಪ್ಪುವ ಬಿಸಿನೆಸ್ ಕಟ್ಟಿಕೊಂಡರೆ ಬದುಕು ಹಸನಾಗುತ್ತದೆ. ಅರೆ! ಬಿಸಿನೆಸ್ ಕಟ್ಟಬೇಕು ಅಂತ ನಾವು ಅಂದುಕೊಂಡಿದ್ದೀವಿ, ಆದ್ರೆ ಬಿಸಿನೆಸ್ ಕಟ್ಟೋಕೆ ಯಾರು ಸಹಾಯ ಮಾಡ್ತಾರೆ, ಬಂಡವಾಳ ಹೊಂದಿಸೋದು ಹೇಗೆ, ಯಾವ ಬಿಸಿನೆಸ್ ಯಾರಿಗೆ ಸರಿ ಹೊಂದುತ್ತದೆ ಎಂದು ತಿಳಿಯುವುದು ಹೇಗೆ ಎನ್ನುವುದು ನಿಮ್ಮ ಪ್ರಶ್ನೆ ಅಲ್ಲವೇ? ನಿಮ್ಮ ಈ ಪ್ರಶ್ನೆಗಳಿಗೆ ಉತ್ತರ ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿದೆ. ನೂರಾರು ಬಿಸಿನೆಸ್​ಗಳ ಬಗ್ಗೆ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಮಾಹಿತಿ ಇದೆ. ಯಾವುದೇ ಬಿಸಿನೆಸ್ ಮಾಡುವಾಗಲೂ ಅಧ್ಯಯನ ಮಾಡಿ ಸರಿಯಾದ ನಿರ್ಧಾರಕ್ಕೆ ಬಂದರಷ್ಟೇ ಗೆಲ್ಲಲು ಸಾಧ್ಯವಾಗುತ್ತದೆ. ನೀವು ನಿಮ್ಮಿಷ್ಟದ ಬಿಸಿನೆಸ್​ನಲ್ಲಿ ಗೆಲ್ಲಲು ಫೈನಾನ್ಸಿಯಲ್ ಫ್ರೀಡಂ ಆಪ್ ನೆರವಾಗುತ್ತದೆ.

ಸೂಪರ್ ಮಾರ್ಕೆಟ್ ಬಿಸಿನೆಸ್ ಮಾಡೋದು ಹೇಗೆ?: ಕರೊನಾ ಬಂದಾಗ ಅನೇಕ ಬಿಸಿನೆಸ್​ಗಳಿಗೆ ತೊಂದರೆ ಆಯಿತು. ಆದರೆ ಸೂಪರ್ ಮಾರ್ಕೆಟ್ ಅಥವಾ ಪ್ರಾವಿಜನ್ ಸ್ಟೋರ್ ಬಿಸಿನೆಸ್​ಗೆ ಯಾವುದೇ ತೊಂದರೆ ಆಗಲಿಲ್ಲ. ಒಂದು ರೀತಿಯಲ್ಲಿ ಲಾಕ್​ಡೌನ್ ಆದಾಗ ಹೆಚ್ಚು ಬಿಸಿನೆಸ್ ಮಾಡಿದವರೇ ಸೂಪರ್ ಮಾರ್ಕೆಟ್ ಮಾಲೀಕರು. ನಾವು ಸೂಪರ್ ಮಾರ್ಕೆಟ್ ಬಿಸಿನೆಸ್ ಆರಂಭ ಮಾಡೋದು ಹೇಗೆ ಅಂತ ಯೋಚನೆ ಮಾಡ್ತೀದ್ದೀರಾ.... ಚಿಂತೆ ಬಿಡಿ, ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿರುವ ಸೂಪರ್ ಮಾರ್ಕೆಟ್ ಕೋರ್ಸ್​ನಲ್ಲಿ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಪಡೆಯಿರಿ.

ನಂದಿನಿ ಮಿಲ್ಕ್ ಪಾರ್ಲರ್ ಫ್ರಾಂಚೈಸಿ ಪಡೆಯೋದು ಹೇಗೆ?: ನಂದಿನಿ ಮಿಲ್ಕ್ ಬೂತ್ ಆರಂಭಿಸಬೇಕು ಅಂತ ಅನೇಕರು ಅಂದುಕೊಂಡಿರುತ್ತಾರೆ. ಯಾಕಂದ್ರೆ ಇದು ಕೂಡ ಒಂದಷ್ಟು ಒಳ್ಳೆಯ ಲಾಭ ಇರುವ ಬಿಸಿನೆಸ್. ಅದರೆ ಈ ಬಿಸಿನೆಸ್ ಹೇಗೆ ಆರಂಭಿಸಬೇಕು, ಎಷ್ಟು ಬಂಡವಾಳ ಬೇಕು, ಎಲ್ಲಿ ಫ್ರಾಂಚೈಸಿ ಪಡೆಯಬೇಕು, ಯಾರನ್ನ ಸಂರ್ಪಸಬೇಕು ಎಂಬ ಮಾಹಿತಿ ಇರೋಲ್ಲಾ. ಈ ಎಲ್ಲಾ ಮಾಹಿತಿ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿದೆ.

ಹಣ್ಣು ಮತ್ತು ತರಕಾರಿ ಅಂಗಡಿ ಬಿಸಿನೆಸ್: ಈ ಬಿಸಿನೆಸ್​ನಲ್ಲಿ ಇರೋ ಲಾಭಾಂಶ ಸುಮಾರು ಶೇ 30ರಿಂದ ಶೇ 40ರಷ್ಟು. ಇಷ್ಟು ಲಾಭವಿರೋ ಬಿಸಿನೆಸ್ ಆರಂಭಿಸಿ ನೀವು ಒಳ್ಳೆಯ ಜೀವನ ಕಟ್ಟಿಕೊಳ್ಳಬಹುದು. ಯಾವುದೇ ಬಿಸಿನೆಸ್ ಆರಂಭಿಸುವ ಮುನ್ನ ಅದರ ಪೂರ್ವಾಪರ ತಿಳಿದು ಮುನ್ನಡೆಯಬೇಕು. ಹಣ್ಣು ಮತ್ತು ತರಕಾರಿ ಅಂಗಡಿ ಬಿಸಿನೆಸ್ ಅನ್ನು ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದು. ಗ್ರಾಹಕರು ನಿಮ್ಮ ಸೇವೆಯನ್ನು ಒಪ್ಪಿಕೊಂಡರೆ ಒಳ್ಳೆಯ ಲಾಭ ಇರುವ ಬಿಸಿನೆಸ್ ಇದು. ಈ ಬಗ್ಗೆ ಕೂಡ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಮಾಹಿತಿ ಅಡಕವಾಗಿದೆ.

ನ್ಯೂಸ್ ಪೇಪರ್ ಏಜೆನ್ಸಿ ಬಿಸಿನೆಸ್: ಎಲ್ಲರೂ ಬೆಳಗ್ಗೆ ಎದ್ದು ಕೆಲಸ ಆರಂಭಿಸುವ ಮುನ್ನ ನೀವು ಬಿಸಿನೆಸ್ ಮುಗಿಸಿ ಹಣ ಎಣಿಸಬೇಕು ಅಂದ್ರೆ ನ್ಯೂಸ್ ಪೇಪರ್ ಏಜೆನ್ಸಿ ಒಳ್ಳೆಯ ಆಯ್ಕೆ. ನ್ಯೂಸ್ ಪೇಪರ್ ಏಜೆನ್ಸಿ ಮಾಡಿ ಸಾವಿರಾರು ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಪತ್ರಿಕೆಗಳನ್ನು ಬೆಳೆಸುವ ಜತೆಗೆ ತಾವೂ ಆದಾಯ ಗಳಿಸಿಕೊಂಡಿದಿದ್ದಾರೆ. ಈ ಬಿಸಿನೆಸ್ ಅನ್ನು ಯಶಸ್ವಿಯಾಗಿ ಕಟ್ಟಿಕೊಳ್ಳೋದು ಹೇಗೆ ಎನ್ನುವ ಬಗ್ಗೆಯೂ ಆಪ್​ನಲ್ಲಿ ಮಾಹಿತಿ ಇದೆ.

ಸ್ವೀಟ್ಸ್ ಅಂಡ್ ಬೇಕರಿ ಬಿಸಿನೆಸ್: ಗುಣಮಟ್ಟ ಕಾಪಾಡಿಕೊಳ್ಳುವ ಜತೆಗೆ ಸೂಕ್ತ ಬೆಲೆ ನಿಗದಿ ಮತ್ತು ಗ್ರಾಹಕ ಸೇವೆ ಒದಗಿಸಿದರೆ ಸ್ವೀಟ್ಸ್ ಅಂಡ್ ಬೇಕರಿ ಬಿಸಿನೆಸ್​ನಲ್ಲಿ ಸಕ್ಸಸ್ ಕಾಣಬಹುದು. ಸಣ್ಣ ಮಟ್ಟದಲ್ಲಿ, ದೊಡ್ಡ ಮಟ್ಟದಲ್ಲಿ ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಕಟ್ಟಬಹುದು. ಜನಪ್ರಿಯತೆ ಗಳಿಸುವಲ್ಲಿ ಯಶಸ್ವಿಯಾದರೆ ಫ್ರಾಂಚೈಸಿಗಳನ್ನು ಆರಂಭಿಸ ಬಹುದು. ನೀವು ಸ್ವೀಟ್ಸ್ ಅಂಡ್ ಬೇಕರಿ ಬಿಸಿನೆಸ್ ಆರಂಭಿಸಬೇಕು ಅಂತಿದ್ರೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿದೆ.

ಸಲೂನ್ ಮತ್ತು ಸ್ಪಾ ಬಿಸಿನೆಸ್: ಈ ಬಿಸಿನೆಸ್​ನಲ್ಲಿ ಒಳ್ಳೆಯ ಲಾಭ ಗಳಿಸಲು ಸಾಧ್ಯವಿದೆ. ವೃತ್ತಿಯ ಅರಿವಿದ್ದರೆ ನೀವೇ ಇದನ್ನು ಆರಂಭಿಸಿ ನಿರ್ವಹಿಸಬಹುದು. ಇಲ್ಲ ವೃತ್ತಿಯ ಬಗ್ಗೆ ಗೊತ್ತಿಲ್ಲ ಅಂತಾದ್ರೆ ಕೆಲಸಗಾರರನ್ನು ನೇಮಿಸಿಕೊಂಡು ಒಳ್ಳೆಯ ಸಂಪಾದನೆ ಮಾಡಬಹುದು. ಸಲೂನ್ ಮತ್ತು ಸ್ಪಾ ಬಿಸಿನೆಸ್​ನಲ್ಲಿ ಸಖತ್ ಸಕ್ಸಸ್ ಕಂಡಿರುವವರೇ ನಿಮಗೆ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಮಾರ್ಗದರ್ಶನ ಮಾಡ್ತಾರೆ.

ಯಶಸ್ವಿ ಬಿಸಿನೆಸ್ ಕಟ್ಟಲು ಕೋರ್ಸ್: ಬಿಸಿನೆಸ್ ಯಾವುದೇ ಇರಲಿ ಅದರಲ್ಲಿ ಕೆಲವರು ಸಖತ್ ಸಕ್ಸಸ್ ಆಗಿರುತ್ತಾರೆ. ಮತ್ತೆ ಕೆಲವರು ಸಕ್ಸಸ್ ಆಗಿರೋಲ್ಲಾ. ಇದಕ್ಕೆ ಪ್ರಮುಖ ಕಾರಣ ಬಿಸಿನೆಸ್​ನ ಟ್ರಿಕ್ಸ್ ಗೊತ್ತಿಲ್ಲದೆ ಇರೋದು. ಹೌದು ಬಿಸಿನೆಸ್​ನ ಗುಟ್ಟುಗಳು, ಉದ್ಯಮಿಗಳ ಪಾಲಿನ ಯಶಸ್ಸಿನ ಸೂತ್ರಗಳು. ಅವನ್ನು ಕಲಿಯಲು ನೀವು ಫೈನಾನ್ಸಿ ಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ.

ಫೈನಾನ್ಸಿಯಲ್ ಫ್ರೀಡಂ ಆ್ಯಪ್​​ನಲ್ಲಿ ಹತ್ತು ಹಲವು ಕೋರ್ಸ್

  • ಟ್ರಾವೆಲ್ ಅಂಡ್ ಟೂರಿಸಂ ಬಿಸಿನೆಸ್ ಕೋರ್ಸ್ ? ಸ್ಟೇಷನರಿ ಬಿಸಿನೆಸ್ ಕೋರ್ಸ್
  • ಹಳ್ಳಿಯಿಂದ ಜಾಗತಿಕ ಬಿಸಿನೆಸ್ ಕಟ್ಟುವ ಬಗ್ಗೆ ಕೋರ್ಸ್ ? ಫುಡ್ ಟ್ರಕ್ ಬಿಸಿನೆಸ್ ಕೋರ್ಸ್
  • ಟೆರಾಕೋಟ ಜುವೆಲರಿ ಬಿಸಿನೆಸ್ ಕೋರ್ಸ್
  • ಮೀನು ಮತ್ತು ಚಿಕನ್ ರಿಟೇಲ್ ಬಿಸಿನೆಸ್ ಕೋರ್ಸ್ ? ಸಿಲ್ಕ್ ಥ್ರೆಡ್ ಜುವೆಲರಿ ಬಿಸಿನೆಸ್ ಕೋರ್ಸ್ ? ವೆಜ್ ರೆಸ್ಟೋರೆಂಟ್ ಬಿಸಿನೆಸ್ ಕೋರ್ಸ್ ? ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಕೋರ್ಸ್
  • ಮಹಿಳಾ ಉದ್ಯಮಿಯಾಗಲು ಕೋರ್ಸ್
  • ನಾನ್ ವೆಜ್ ರೆಸ್ಟೋರೆಂಟ್ ಕೋರ್ಸ್
  • ಗಾಣದ ಎಣ್ಣೆ ಬಿಸಿನೆಸ್ ಕೋರ್ಸ್ ? ಉಪ್ಪಿನಕಾಯಿ ಬಿಸಿನೆಸ್ ಕೋರ್ಸ್ ? ಮ್ಯಾನು ಫ್ಯಾಕ್ಚರಿಂಗ್ ಬಿಸಿನೆಸ್ ಕೋರ್ಸ್ ? ಪೆಟ್ರೋಲ್ ಬಂಕ್ ಬಿಸಿನೆಸ್ ಕೋರ್ಸ್ ? ಆಟೋ ಎಲ್​ಪಿಜಿ ಬಿಸಿನೆಸ್ ಕೋರ್ಸ್ ? ಹೋಮ್ ಸ್ಟೇ ಬಿಸಿನೆಸ್ ಕೋರ್ಸ್ ? ಕ್ಯಾಂಡಲ್ ಬಿಸಿನೆಸ್ ಕೋರ್ಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net