ಶೇಂಗಾ ಎಣ್ಣೆಯಿಂದ ಆರೋಗ್ಯ ರಕ್ಷಣೆ ಸಫಲ

Kavitah
Published on

ಕಡಲೆಕಾಯಿ ಬಡವರ ಬಾದಾಮಿ, ಒಟ್ಟಾರೆ ಆರೋಗ್ಯದ ಖನಿಜ. ಇದರಲ್ಲಿ ಉತ್ತಮ ಪ್ರಮಾಣದ ಪೊ›ಟೀನ್ ಮತ್ತು ಇತರ ಖನಿಜಗಳಿವೆ. ಒಳ್ಳೆಣ್ಣೆ ಅರ್ಥಾತ್ ಒಳ್ಳೆಯ ಎಣ್ಣೆ ಎಂದು ಜನಪ್ರಿಯವಾಗಿರುವ ಶೇಂಗಾ ಎಣ್ಣೆ, ಕೆಓಎಫ್ ಸಂಸ್ಥೆಯ ಸಫಲ್ ಫಿಲ್ಟರ್ಡ್ ಶೇಂಗಾ ಎಣ್ಣೆ ಎಂಬ ಬ್ರಾಂಡ್​ನಲ್ಲಿ ಕರ್ನಾಟಕ ರಾಜ್ಯಾದ್ಯಂತ ಮಾರಾಟವಾಗುತ್ತಿದೆ. ಇದು ರುಚಿಯಾದ ಮತ್ತು ಅಡುಗೆಗೆ ಸೂಕ್ತವಾಗಿರುವ ಎಣ್ಣೆ. ನಸು ಹಳದಿ ಬಣ್ಣ ಮತ್ತು ರುಚಿಯಲ್ಲಿ ತಟಸ್ಥ ರುಚಿ ಹೊಂದಿದೆ. ಸಫಲ್ ಶೇಂಗಾ ಎಣ್ಣೆಯು ಕುರುಕು ಗುಣವನ್ನು ಹೊಂದಿರುವುದರಿಂದ ಇದು ರುಚಿಕರ ಖಾದ್ಯ ತೈಲವಾಗಿರುತ್ತದೆ.

ಇದರಲ್ಲಿ ಅಸಂತುಲಿತ ಕೊಬ್ಬು, ವಿಟಮಿನ್ ಎ, ಡಿ, ಇ ಉತ್ತಮ ಪ್ರಮಾಣದಲ್ಲಿದ್ದು ವಿಶ್ವದಾದ್ಯಂತ ಶೇಂಗಾ ಎಣ್ಣೆಯನ್ನು ಅಡುಗೆಗೆ ಬಳಸುತ್ತಾ ಬರಲಾಗಿದೆ. ಅಲ್ಲದೆ ಇದರಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು, ಒಮೆಗಾ 3 ಕೊಬ್ಬಿನ ತೈಲಗಳು, ಫೈಟೋ ಸ್ಟೆರಾಲ್ ಮತ್ತು ಇತರ ಪೋಷಕಾಂಶಗಳಿದ್ದು ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತವೆ. ಅಲ್ಲದೇ ಹೃದಯದ ತೊಂದರೆಗಳು, ಕ್ಯಾನ್ಸರ್ ಮೊದಲಾದ ಕಾಯಿಲೆಗಳು ಮತ್ತು ಬೇಗನೇ ವೃದ್ಧಾಪ್ಯ ಆವರಿಸುವ ತೊಂದರೆಯಿಂದ ರಕ್ಷಿಸುತ್ತದೆ.

ಇದರಲ್ಲಿ ರೆಸ್ವರಟ್ರಾಲ್ ಎಂಬ ಪೋಷಕಾಂಶವೂ ಇದ್ದು ಇದೊಂದು ಉತ್ತಮ ಶಿಲೀಂಧ್ರ ನಿವಾರಕವಾಗಿರುವ ಕಾರಣ ದೇಹವನ್ನು ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ. ಇದರ ವಿಶೇಷತೆ ಎಂದರೆ ಅತಿ ಹೆಚ್ಚು ಬಿಸಿಯಾದ ಬಳಿಕವೇ ಇದರಿಂದ ಹೊಗೆ ಬರಲು ಆರಂಭವಾಗುತ್ತದೆ. ಪರಿಣಾಮವಾಗಿ ಹೆಚ್ಚು ಫ್ರೖೆ ಮಾಡಬೇಕಾದ ಪದಾರ್ಥಗಳು ಹೊಗೆ ಹಿಡಿಯದೆ ರುಚಿಕರವಾಗಿರುತ್ತವೆ.

ಸಫಲ್ ಶೇಂಗಾ ಎಣ್ಣೆಯಲ್ಲಿರುವ ಉತ್ತಮ ಕೊಬ್ಬುಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ಇದರಿಂದ ಹೃದಯದ ಸ್ತಂಭನ ಮತ್ತು ಹೃದಯಾಘಾತ ಸಂಭವಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಸಫಲ್ ಶೇಂಗಾ ಎಣ್ಣೆಯಲ್ಲಿರುವ ಪೋಷಕಾಂಶಗಳು ರಕ್ತನಾಳಗಳನ್ನು ಸಡಿಲಗೊಳಿಸುವುದಕ್ಕೂ ನೆರವಾಗುತ್ತವೆ. ರಕ್ತನಾಳದ ಗೋಡೆಗಳು ಸೆಳೆತದಿಂದ ಸಡಿಲಗೊಳ್ಳುವ ಮೂಲಕ ರಕ್ತಸಂಚಾರ ಸುಲಭವಾಗುತ್ತದೆ. ಉತ್ತಮ ರಕ್ತಸಂಚಾರದ ಮೂಲಕ ಮನದ ಉದ್ವೇಗ, ಖಿನ್ನತೆ ಮೊದಲಾದ ಮಾನಸಿಕ ತೊಂದರೆಗಳು ಸಹ ಕಡಿಮೆಯಾಗುತ್ತವೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಬರದಂತೆ ತಡೆಯುತ್ತವೆ. ಆಂಟಿ ಆಕ್ಸಿಡೆಂಟುಗಳು ಹೆಚ್ಚಾಗಿರುವ ಹಣ್ಣುಗಳು, ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ಕ್ಯಾನ್ಸರ್ ತಡೆಗಟ್ಟುವ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಬಹುದು. ಉರಿಯೂತವು ದೇಹವನ್ನು ಒಳಗಿನಿಂದ ಬಹಳಷ್ಟು ಬಾಧಿಸುತ್ತದೆ. ಅದರಲ್ಲೂ ತೀವ್ರ ಗತಿಯ ಉರಿಯೂತ ದೇಹದ ಒಳಗಿನ ಅಂಗಾಂಶ ಮತ್ತು ಪ್ರಮುಖ ಅಂಗಗಳನ್ನು ಘಾಸಿಗೊಳಿಸಬಹುದು. ಇದರ ಪರಿಣಾಮದಿಂದ ಹೃದಯದ ತೊಂದರೆ, ಮಧುಮೇಹ ಮತ್ತು ಸ್ಥೂಲಕಾಯಗಳಂತಹ ತೊಂದರೆಗಳು ಎದುರಾಗಬಹುದು. ಆಹಾರದಲ್ಲಿ ನಿಯಮಿತವಾಗಿ ಸಫಲ್ ಶೇಂಗಾ ಎಣ್ಣೆಯನ್ನು ಸೇರಿಸಿಕೊಳ್ಳುವ ಮೂಲಕ ಈ ತೊಂದರೆ ಬರದಂತೆ ತಡೆಗಟ್ಟಬಹುದು. ಸಫಲ್ ಶೇಂಗಾ ಎಣ್ಣೆಯಲ್ಲಿರುವ ಕೊಬ್ಬುಗಳು ದೇಹದ ವಿಧದ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಯನ್ನು ನೀಡುತ್ತವೆ. ಅಲ್ಲದೇ ಇದು ಜೀರ್ಣಗೊಳ್ಳಲು ಸಂಗ್ರಹಗೊಂಡಿದ್ದ ಕೊಬ್ಬು ಬಳಕೆಯಾಗುವ ಕಾರಣ ತೂಕ ಇಳಿಸಲು ನೆರವಾಗುತ್ತದೆ.

ಲೆಕ್ಕಪರಿಶೋಧನೆ

ಮಹಾಮಂಡಳಿಯ 2018-19ನೇ ಸಾಲಿನ ಲೆಕ್ಕಪರಿಶೋಧನೆ ಮುಕ್ತಾಯವಾಗಿದ್ದು, ಸಹಕಾರ ಸಂಫಗಳ ಲೆಕ್ಕಪರಿಶೋಧನಾ ಇಲಾಖೆಯು ಮಹಾಮಂಡಳಿಗೆ ‘ಎ’ ವರ್ಗ ನೀಡಿದೆ.

ಪ್ರಶಸ್ತಿ- ಪುರಸ್ಕಾರಗಳು

ಇಲ್ಲಿಯವರೆಗೆ ಮಹಾಮಂಡಳಿಯು ಅತ್ಯುತ್ತಮ ಗುಣಮಟ್ಟಕ್ಕೆ ಏಳು ಬಾರಿ ಪ್ರಶಸ್ತಿ ಪಡೆದಿರುವುದು ಗಮನಾರ್ಹ. ಇದರಲ್ಲಿ ಭಾರತದ ರಾಷ್ಟ್ರಮಟ್ಟದ ಪುರಸ್ಕಾರ, ಮೆಕ್ಸಿಕೋದಂತಹ ರಾಷ್ಟ್ರಗಳ ಪ್ರಶಸ್ತಿ ಕೂಡ ಸೇರಿವೆ. ಅದಲ್ಲದೆ ಮಹಾಮಂಡಳಿಯು ಆಗ್​ವಾರ್ಕ್ ಪ್ರಮಾಣೀಕರಣವನ್ನು ಹೊಂದಿದೆ. ಐಎಸ್​ಓ 22000-2005 ಪ್ರಮಾಣೀಕರಣವನ್ನೂ ಪಡೆದಿದೆ.

ಲಕ್ಷಾಂತರ ಕ್ವಿಂಟಾಲ್ ಬೀಜ ವಿತರಣೆ

ಕೆ.ಓ.ಎಫ್ ಮತ್ತು ಪ್ರಾದೇಶಿಕ ಒಕ್ಕೂಟಗಳು ಪ್ರತಿ ವರ್ಷ ಕೃಷಿ ಇಲಾಖೆಯ ಸಹಾಯಧನ ಕಾರ್ಯಕ್ರಮಗಳಡಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಣೆ ಮಾಡುತ್ತಿವೆ. ಕೆ.ಓ.ಎಫ್ ಮತ್ತು ಪ್ರಾದೇಶಿಕ ಒಕ್ಕೂಟಗಳು ವಿತರಿಸುವ ಬೀಜಗಳ ಗುಣಮಟ್ಟಕ್ಕೆ ರೈತರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಸುಮಾರು 10 ಲಕ್ಷ ಕ್ವಿಂಟಾಲ್ ಶೇಂಗಾ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದೆ. ಕಳೆದ ಆರು ವರ್ಷಗಳಲ್ಲಿ ಸುಮಾರು 3 ಲಕ್ಷ ಮೆಟ್ರಿಕ್ ಟನ್ ಖಾದ್ಯತೈಲಗಳ ಮಾರಾಟ ಮಾಡಲಾಗಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ವಿವಿಧ ಶ್ರೇಣಿಯ ಉತ್ಪನ್ನಗಳನ್ನು ಒಟ್ಟುಗೂಡಿಸಿ ಮಾರಾಟದ ಪ್ರಮಾಣ ದ್ವಿಗುಣಗೊಳಿಸಿ ಮಾರುಕಟ್ಟೆಯ ಪಾಲನ್ನು ಹೆಚ್ಚು ಮಾಡಲು ಯೋಜಿಸಿದೆ.

ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾಮಂಡಳಿ ನಿಯಮಿತ

(ಐಎಸ್​ಒ 22000 - 2005 ಪ್ರಮಾಣಿತ ಸಂಸ್ಥೆ) ನಂ.11, ಬ್ಲ್ಯೂಕ್ರಾಸ್ ಛೇಂಬರ್ಸ್, ಇನ್​ಫೆಂಟ್ರಿ ಅಡ್ಡರಸ್ತೆ, ಬೆಂಗಳೂರು- 560 001. 080 25550268 ಫ್ಯಾಕ್ಸ್ : 080 25583614, E-mail: admin@kof.co.in

ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿಯ ಪ್ರಮುಖ ಚಟುವಟಿಕೆಗಳು

ಸೇವಾ ನಿರತ ಚಟುವಟಿಕೆಗಳು

# ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾಮಂಡಳಿಯಿಂದ ರೈತರಿಗೆ ಬಿತ್ತನೆ ಬೀಜ ಸರಬರಾಜು, ಎಣ್ಣೆಕಾಳುಗಳ ಉತ್ಪಾದನೆ ಹೆಚ್ಚು ಮಾಡುವ ಚಟುವಟಿಕೆಗಳು, ಬೀಜೋತ್ಪಾದನೆ, ಪ್ರಾತ್ಯಕ್ಷಿಕೆ, ತರಬೇತಿ ಕಾರ್ಯಕ್ರಮಗಳು ಇತ್ಯಾದಿ.

# ಬೆಂಬಲ ಬೆಲೆ ಯೋಜನೆಯಡಿ ಎಣ್ಣೆಬೀಜಗಳ ಸಂಗ್ರಹಣೆ.

ವಾಣಿಜ್ಯ ಚಟುವಟಿಕೆಗಳು

ಖಾದ್ಯತೈಲ ಮಾರಾಟ: ಆಡಳಿತಾತ್ಮಕ ವೆಚ್ಚಗಳನ್ನು ನಿರ್ವಹಿಸಲು, ದುಡಿಯುವ ಬಂಡವಾಳ ಹಾಗೂ ಭವಿಷ್ಯತ್ತಿನ ಉದ್ದೇಶಗಳನ್ನು ಈಡೇರಿಸುವ ಸಲುವಾಗಿ, ಖಾದ್ಯತೈಲಗಳ ಗ್ರಾಹಕ ಮಾರಾಟ ಚಟುವಟಿಕೆಯಡಿ ಖಾದ್ಯತೈಲಗಳನ್ನು ಗ್ರಾಹಕರಿಗೆ ಮಾರಾಟ ಮಾಡಿ ಆದಾಯ ಗಳಿಸುತ್ತಿದೆ. ವಿವಿಧ ಪ್ಯಾಕ್​ಗಳಲ್ಲಿ ಸಫಲ್ ಬ್ರಾಂಡಿನ ಉತ್ತಮ ಗುಣಮಟ್ಟದ ಖಾದ್ಯತೈಲಗಳನ್ನು ಪ್ಯಾಕ್ ಮಾಡಿ ಮಾರಾಟ ಮಾಡುವುದು.

# ಮಾರಾಟ ವಿಭಾಗದ ಕಾರ್ಯನಿರ್ವಹಣೆ

ಸಫಲ್ ಬ್ರಾಂಡಿನ ಹೆಸರಿನಲ್ಲಿ ಕೆ.ಓ.ಎಫ್ ಮತ್ತು ಪ್ರಾದೇಶಿಕ ಎಣ್ಣೆಬೀಜ ಒಕ್ಕೂಟಗಳು ಖಾದ್ಯತೈಲಗಳನ್ನು ಮಾರಾಟ ಮಾಡುತ್ತಿವೆ. ಖಾದ್ಯತೈಲಗಳು ಉತ್ಕ ೃ್ಟ ಗುಣಮಟ್ಟ ಹೊಂದಿದ್ದು, ಗ್ರಾಹಕ ಮಾರಾಟ ಚಟುವಟಿಕೆಗಳಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸ್ಥಳೀಯ ವರ್ತಕರಿಂದ ಪೈಪೋಟಿ ಇದ್ದರೂ ಸಹ, ಅಗ್​ವಾರ್ಕ್ ಗುಣಮಟ್ಟ ಹೊಂದಿರುವ ಖಾದ್ಯತೈಲಗಳ ಮಾರಾಟದಲ್ಲಿ ಕೆ.ಓ.ಎಫ್ ಮತ್ತು ಒಕ್ಕೂಟಗಳು ಬ್ರ್ಯಾಂಡ್ ಲೀಡರ್ ಅಗಿ ಮುಂದುವರಿದಿವೆ. ಸಫಲ್ ಬ್ರ್ಯಾಂಡ್ ಕರ್ನಾಟಕದ ಮನೆ ಮಾತಾಗಿದೆ. ವೃತ್ತಿಪರ ನಿರ್ವಹಣೆ, ಮಾರಾಟ ಕೌಶಲ ಮತ್ತು ಶಕ್ತಿಯುತ ಮಾರಾಟ ವಿತರಣಾ ಜಾಲವಿರುವುದರಿಂದ ಇದು ಸಾಧ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net