ಮೀನು ಮರಿ ಉತ್ಪಾದಿಸಿ, ಲಕ್ಷ ಲಕ್ಷ ಸಂಪಾದಿಸಿ!

Fish
Published on
ಕೇವಲ 1 ಸೆಟ್ ಮೀನುಗಳಿಂದ 3 ತಿಂಗಳಿಗೆ 1ರಿಂದ 2 ಲಕ್ಷ ರೂ. ಲಾಭ ಪಡೆದುಕೊಳ್ಳಬಹುದು. ಹೌದು. ಇದು ಫಿಶ್ ಹ್ಯಾಚರಿ ಬಿಸಿನೆಸ್ ಸಾಮರ್ಥ್ಯ. ಮೀನು ಸಾಕಾಣಿಕೆ ಕೃಷಿಯಂತೆ ಫಿಶ್ ಹ್ಯಾಚರಿ ಬಿಸಿನೆಸ್ ಕೂಡ ಪ್ರಗತಿಯಾಗುತ್ತಿದೆ. ಈಗಾಗಲೆ ರೈತರು ಮೀನು ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ. ಮೀನು ಸಾಕಣೆ ಬಗ್ಗೆ ಕೋರ್ಸ್​ಗಳನ್ನು ಫ್ರೀಡಂ ಆಪ್​ನಲ್ಲಿ ನೋಡಬಹುದು.

ಫಿಶ್ ಹ್ಯಾಚರಿ ಎಂದರೇನು?: ಯಾವುದೇ ಬೆಳೆ ಕೃಷಿ ಮಾಡಬೇಕು ಅಂದರೆ ಮೊದಲು ಬೀಜದ ಬಗ್ಗೆ ತಿಳಿಯಬೇಕು. ಅದೇ ರೀತಿ ಮೀನು ಸಾಕಣೆ ಮಾಡಬೇಕು ಎಂದರೆ ಉತ್ತಮ ಮರಿಗಳನ್ನು ತಂದು ಸಾಕಬೇಕಾಗುತ್ತದೆ. ವಿಪರ್ಯಾಸವೆಂದರೆ ಮೀನು ಮರಿ ಉತ್ಪಾದನೆ ಮಾಡುವರ ಸಂಖ್ಯೆ ಕಡಿಮೆ. ಇದನ್ನು ಉತ್ಪಾದಿಸಿ ಕೊಟ್ಟರೆ ಹೆಚ್ಚು ಆದಾಯ ಗ್ಯಾರಂಟಿ. ಹಾಗಾದರೆ ಮೀನಿನ ಮರಿ ಉತ್ಪಾದಿಸುವುದು ಹೇಗೆ? ಇದಕ್ಕೆ ಹ್ಯಾಚರಿ ಅಗತ್ಯ. ಬಹುತೇಕ ಮೀನು ಕೃಷಿಕರು ಮೀನಿನ ಮರಿಗಳಿಗಾಗಿ ಅವಲಂಬಿಸಿರುವುದು ಹ್ಯಾಚರಿಗಳನ್ನೇ. ಬೇಕಾದ ತಳಿಯನ್ನು ಆರಿಸಿ ಅದರ ಗಂಡು ಮತ್ತು ಹೆಣ್ಣು ತಂದು, ಪೋ›ಸಿಜರ್ ಫಾಲೋ ಮಾಡಿ ಹ್ಯಾಚರಿ ಪಾಂಡ್​ನಲ್ಲಿ ಬಿಡಬೇಕು.

ಬೇಡಿಕೆ ಮತ್ತು ಮಾರುಕಟ್ಟೆ: ಪ್ರಸ್ತುತ ಆಹಾರ ಮತ್ತು ಆರೋಗ್ಯ ದೃಷ್ಟಿಯಿಂದ ಮೀನಿಗೆ ಬೇಡಿಕೆ ಹೆಚ್ಚುತ್ತಿದೆ. ಮೀನು ಕೃಷಿಕರಿಗೆ ಹಣಕಾಸಿನ ಮಾರ್ಗವೂ ಹೌದು. ಮಾರುಕಟ್ಟೆ ವಿಚಾರಕ್ಕೆ ಬಂದರೆ ಜಾಗತಿಕ ಜನಸಂಖ್ಯೆಯಲ್ಲಿ ಒಬ್ಬರಿಗೆ 15 ರಿಂದ 20 ಕೆಜಿ ವಾರ್ಷಿಕ ತಲಾ ಲೆಕ್ಕಾಚಾರ ತೆಗೆದುಕೊಂಡರೂ 2050ರ ಹೊತ್ತಿಗೆ 125 ರಿಂದ 210 ಮಿಲಿಯನ್ ಟನ್​ಗಳಷ್ಟು ಮೀನುಗಳು ಅವಶ್ಯಕ. ಇನ್ನು ಭಾರತ ಮೀನು ಉತ್ಪಾದನೆಯಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಇದರ ಜತೆಗೆ ಮೀನುಗಾರಿಕೆ ವಲಯದಲ್ಲಿ 2 ಕೋಟಿ 80 ಲಕ್ಷ ಜನರಿಗೆ ಪ್ರತ್ಯಕ್ಷ ಮತ್ತು 5 ಕೋಟಿಗೂ ಅಧಿಕ ಜನರಿಗೆ ಪರೋಕ್ಷವಾಗಿ ಜೀವನಾಧಾರವಾಗಿದೆ. ವರ್ಷಕ್ಕೆ 34.5 ಲಕ್ಷ ಟನ್ ಒಳನಾಡು ಮೀನು ಬೆಳೆದು ಆಂಧ್ರ ಮೀನು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕರ್ನಾಟಕ, ಪಶ್ಚಿಮಬಂಗಾಳ, ತಮಿಳುನಾಡು, ಗುಜರಾತ್, ಮಹಾರಾಷ್ಟ್ರ ಕೇರಳ ರಾಜ್ಯಗಳಿವೆ. ಇದರಿಂದಲೇ ಫಿಶ್ ಹ್ಯಾಚರಿಗೆ ಎಷ್ಟು ಅವಕಾಶ ಇದೆ ಅನ್ನೋದು ಗೊತ್ತಾಗುತ್ತದೆ.

ಫಿಶ್ ಹ್ಯಾಚರಿಗೆ ಇದು ಮುಖ್ಯ: ಫಿಶ್ ಹ್ಯಾಚರಿ ಪ್ರತಿಯೊಬ್ಬರು ಮಾಡಬಹುದು. ಆದರೆ ಇದಕ್ಕೆ ಸ್ಥಳ ಆಯ್ಕೆ ಮುಖ್ಯ. ಇಳಿಜಾರು ಪ್ರದೇಶ ಸೂಕ್ತ. ಕನಿಷ್ಠ 4 ಎಕರೆ ಜಾಗದಲ್ಲಿ ಮಾಡಬೇಕಾಗುತ್ತದೆ. ಇಲ್ಲಿ ಹಂತ ಹಂತವಾಗಿ ಮೀನು ಮತ್ತು ಮರಿ ಸಾಕಣೆಗೆ 8 ಪಾಂಡ್, 3 ಅಡಿ ಆಳದ 2 ಸಿಮೆಂಟ್ ತೊಟ್ಟಿ, 30 ಮೀಟರ್ ಸುತ್ತಳತೆಯ ಹ್ಯಾಚರಿ ರಿಂಗ್ ಮತ್ತು ನೀರು ಅಗತ್ಯ. ಮೀನುಗಳ ನಿರ್ವಹಣೆ ಆಧಾರದ ಮೇಲೆ ಆದಾಯ ಕೈ ಸೇರುತ್ತೆ. ಬಂಡವಾಳ ಅಂದ್ರೆ 1 ಹ್ಯಾಚರಿ ಯುನಿಟ್ ಸೆಟಪ್ ಮಾಡುವುದಕ್ಕೆ 5 ಲಕ್ಷ ರೂ. ಬೇಕು. ಹ್ಯಾಚರಿಗೆ ಸಾಲ ಸೌಲಭ್ಯ ದೊರೆಯುತ್ತೆ. ಇನ್ನೊಂದು ಅಚ್ಚರಿ ಅಂದರೆ ಇಡೀ ರಾಜ್ಯಕ್ಕೆ ವರ್ಷಕ್ಕೆ ಒಬ್ಬರಿಗೆ 12 ಲಕ್ಷ ರೂ. ಸಬ್ಸಿಡಿ ದೊರೆಯುತ್ತೆ. ಆದರೆ ಅದಕ್ಕೆ ಸೂಕ್ತ ದಾಖಲೆ ನೀಡಬೇಕು.

ಫಿಶ್ ಹ್ಯಾಚರಿ ಆದಾಯ ಮತ್ತು ಲಾಭ: ಮೀನು ಸಾಕಣೆಯಷ್ಟೇ ಇಂದು ಹೆಚ್ಚು ಅಗತ್ಯವಾಗಿರುವ ಫಿಶ್ ಹ್ಯಾಚರಿ ಬಿಸಿನೆಸ್ ದಿನದಿಂದ ದಿನಕ್ಕೆ ಪ್ರಗತಿ ಯಾಗುತ್ತಿದೆ. ಕಾಟ್ಲಾ, ರೋಹು, ಮೃಗಲ್ ಮತ್ತು ಗೌರಿ ತಳಿಯ ಮೀನುಗಳನ್ನು ಹ್ಯಾಚರಿಯಲ್ಲಿ ಬಳಸಿಕೊಳ್ಳಬಹುದು. 1 ಸೆಟ್ ಅಂದ್ರೆ (1 ಗಂಡು ಮತ್ತು 1 ಹೆಣ್ಣು, ಗೌರಿ ತಳಿ -2 ಗಂಡು 1 ಹೆಣ್ಣು) ಮೀನಿಗೆ 90 ಲೀಟರ್ ಮೊಟ್ಟೆ ದೊರೆಯುತ್ತದೆ. ಇದರಿಂದ 18 ಲಕ್ಷ ಮರಿ ಸಿಗುತ್ತವೆ. ಇದರಲ್ಲಿ 10 ಲಕ್ಷವನ್ನು ಲೆಕ್ಕ ಹಿಡಿದ್ರು, ಹಂತ ಹಂತವಾಗಿ ಮಾರಾಟ ಮಾಡಿದ್ರೆ ಲಕ್ಷಾಂತರ ರೂ. ಸಂಪಾದಿಸಬಹುದು.

ಉದಾಹರಣೆ: ಕಾಟ್ಲಾ ತಳಿಯ 1 ಸೆಟ್ ಮೀನುಗಳನ್ನು ಸಂತಾನೋತ್ಪತ್ತಿಗೆ ಬಳಸಿಕೊಂಡರೆ 10 ಲಕ್ಷ ಮರಿಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿ ಕೇವಲ 5 ದಿನದಲ್ಲಿ 1 ಲಕ್ಷ ಮರಿಗೆ 1.5ಸಾವಿರದಂತೆ ಮಾರಾಟ ಮಾಡಿದ್ರೆ 10 ಲಕ್ಷ ಮರಿಗೆ 15 ಸಾವಿರ ರೂ. ಆದಾಯ. ಅದರಲ್ಲಿ 2 ಸಾವಿರ ರೂ. ಖರ್ಚು ತೆಗೆದರೆ 13 ಸಾವಿರ ರೂ. ಲಾಭ. ಅದೇ 1 ತಿಂಗಳಿಗೆ ಮಾರಾಟ ಮಾಡುತ್ತೇವೆ. ಅಂದರೆ ಕೇವಲ 4 ಲಕ್ಷ ಮರಿಗಳು ಉಳಿದರೂ ಪ್ರತಿ ಮರಿಗೆ 40 ಪೈಸೆ ಲೆಕ್ಕ ಹಾಕಿದರೆ 1.6 ಲಕ್ಷ ರೂ. ಆದಾಯ. ಇದರಲ್ಲಿ ಆಹಾರ ಮತ್ತು ನಿರ್ವಹಣೆ ಖರ್ಚು 60 ಸಾವಿರ ರೂ. ತೆಗೆದರೆ 1 ಲಕ್ಷ ರೂ. ಲಾಭ. ಅಲ್ಲದೆ, 2 ರಿಂದ 3 ತಿಂಗಳು ಮರಿ ಸಾಕಣೆ ಮಾಡಿ ಮಾರಾಟ ಮಾಡುತ್ತೇವೆ ಅಂದರೂ, ಅದರಲ್ಲಿ ಕೇವಲ 1 ಲಕ್ಷ ಮರಿಗಳು ಇದ್ದರೂ ಪ್ರತಿ ಮರಿಗೆ 2 ರೂ. ತೆಗೆದುಕೊಂಡರೆ 2 ಲಕ್ಷ ಆದಾಯ. ಇದರಲ್ಲಿ 1 ಲಕ್ಷ ರೂ. ಆಹಾರ ಮತ್ತು ನಿರ್ವಹಣೆ ಖರ್ಚು ತೆಗೆದರೆ 1 ಲಕ್ಷ ರೂ. ಲಾಭ. ಇದು ಕೇವಲ 1 ಸೆಟ್ ಕಾಟ್ಲಾ ತಳಿಯ ಮೀನುಗಳಿಂದ ಬರುವಂತಹ ಆದಾಯ. ಇದನ್ನೇ ದೊಡ್ಡ ಮಟ್ಟದಲ್ಲಿ ಮಾಡಿದರೆ ಎಷ್ಟು ಆದಾಯ ಗಳಿಸಬಹುದು ನೀವೇ ಲೆಕ್ಕ ಹಾಕಿ.

ffreedom appನಲ್ಲಿ ಫಿಶ್ ಹ್ಯಾಚರಿ ಬಿಸಿನೆಸ್ ಕೋರ್ಸ್: ಪ್ರತಿಯೊಬ್ಬರು ಆರ್ಥಿಕ ಸ್ವಾತಂತ್ರ್ಯ ಕಂಡುಕೊಳ್ಳಬೇಕು ಎಂಬ ಉದ್ದೇಶ ಹೊಂದಿರುವ ffreedom app ಫಿಶ್ ಹ್ಯಾಚರಿ ಬಿಸಿನೆಸ್ ಕೋರ್ಸ್ ಸಿದ್ಧಪಡಿಸಿದೆ. ಇಲ್ಲಿ ಸುಮಾರು 7 ವರ್ಷಗಳಿಂದ ಫಿಶ್ ಹ್ಯಾಚರಿ ಮತ್ತು 11 ವರ್ಷಗಳಿಂದ ಬಿತ್ತನೆ ಮೀನುಗಳ ಬಿಸಿನೆಸ್ ಮಾಡುತ್ತಿರುವ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹತ್ತಿಕಟ್ಟೆ ಗ್ರಾಮದ ರಾಮು ಮಾರ್ಗದರ್ಶನ ನೀಡಿದ್ದಾರೆ. ಈ ಕೋರ್ಸ್ ವೀಕ್ಷಿ ಸಲು ಈಗಲೇ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ. ಜತೆಗೆ ಬಿಸಿನೆಸ್, ಕೃಷಿ ಮತ್ತು ಹಣಕಾಸಿಗೆ ಸಂಬಂ ಧಿಸಿದ 900ಕ್ಕೂ ಹೆಚ್ಚು ಕೋರ್ಸ್​ಗಳನ್ನು ವೀಕ್ಷಿಸಿ.

ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಬಯಸುವವರಿಗೆ f್ಟಛಿಛಟಞ ಚಟಟನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ ಕಾಲ್ ಮಾಡಿ - 02262116777.

ಕೋರ್ಸ್​ನಲ್ಲಿ ಏನೇನಿದೆ?

  • ಕೋರ್ಸ್ ಮತ್ತು ಮಾರ್ಗದರ್ಶಕರ ಪರಿಚಯ
  • ಫಿಶ್ ಹ್ಯಾಚರಿ ನಡೆದು ಬಂದ ಹಾದಿ
  • ಫಿಶ್ ಹ್ಯಾಚರಿ ಅಂದರೇನು?
  • ಫಿಶ್ ಹ್ಯಾಚರಿಗೆ ಸ್ಥಳ ಆಯ್ಕೆ
  • ಹ್ಯಾಚರಿ ಬಿಸಿನೆಸ್ ಸೆಟಪ್
  • ಬಂಡವಾಳ, ಪರವಾನಗಿ ಮತ್ತು ನೋಂದಣಿ
  • ಮರಿ ಉತ್ಪಾದನೆಗೆ ತಳಿ ಆಯ್ಕೆ
  • ಹ್ಯಾಚರಿ ಟು ಹಾರ್ವೆಸ್ಟ್
  • ಆಹಾರ ಮತ್ತು ಕಾರ್ವಿುಕರ ನಿರ್ವಹಣೆ
  • ಮಾರ್ಕೆಟಿಂಗ್ ಮತ್ತು ಮಾರಾಟ ಪ್ರಕ್ರಿಯೆ
  • ಮರಿಗಳ ಪ್ಯಾಕಿಂಗ್ ಮತ್ತು ಸಾಗಣೆ
  • ಯುನಿಟ್ ಎಕನಾಮಿಕ್ಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net