

ಜಾಗತಿಕ ಮಟ್ಟದಲ್ಲಿ ಬಾಳೆ ಬೆಳೆ: ಬಾಳೆ ಹುಟ್ಟಿದ್ದು ಸೌತ್ ಈಸ್ಟ್ ಏಷ್ಯಾ ಖಂಡದಲ್ಲಿ. ಏಷ್ಯಾ ಮತ್ತು ಪೆಸಿಫಿಕ್ ಖಂಡ ವಿಶ್ವದಲ್ಲೇ ಅತಿ ಹೆಚ್ಚು ಬಾಳೆ ಬೆಳೆಯುವ ಪ್ರದೇಶಗಳು. ಅದೇ ರೀತಿ ಬಾಳೆ ಬೆಳೆಯುವ 153 ರಾಷ್ಟ್ರಗಳಲ್ಲಿ ಭಾರತ ಸದ್ಯ ಅತಿ ಹೆಚ್ಚು ಬಾಳೆ ಬೆಳೆಯವ ರಾಷ್ಟ್ರವೆಂದು ಗುರುತಿಸಿಕೊಂಡಿದೆ. ಅಷ್ಟೇ ಅಲ್ಲ, ಭಾರತದ ಎಲ್ಲ ರಾಜ್ಯದಲ್ಲೂ ಬಾಳೆ ಬೆಳೆ ಇದೆ ಅನ್ನೋದು ವಿಶೇಷ. ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ ಹೆಚ್ಚು ಬಾಳೆ ಬೆಳೆಯುವ ರಾಜ್ಯಗಳಾಗಿವೆ. ವಿಶ್ವದಲ್ಲಿ 1 ವರ್ಷಕ್ಕೆ 11,67,81,658 ಟನ್ ಬಾಳೆ ಬೆಳೆದರೆ ಅದರಲ್ಲಿ 3,04,60,000 ಟನ್ ನಮ್ಮ ಭಾರತದ್ದೇ ಇದೆ. ಒಟ್ಟು ವಿಶ್ವದಲ್ಲಿ 400 ಮಿಲಿಯನ್ ಜನ ಪ್ರತಿನಿತ್ಯ ಬಾಳೆ ಬಳಕೆ ಮಾಡುವವರಿದ್ದಾರೆ. ಹೀಗಾಗಿ ಅತೀ ಅಗತ್ಯವಾದ ಬಾಳೆಗೆ ದಕ್ಷಿಣ ಕೊರಿಯಾ, ಜಪಾನ್, ಆಸ್ಟ್ರೇಲಿಯಾಗಳಲ್ಲಿ ಬೆಲೆ ಸಿಕ್ಕಾಪಟ್ಟೆ ತುಟ್ಟಿ ಇದೆ. ಇನ್ನು ಹೆಚ್ಚು ಬಾಳೆ ಬೆಳೆಯುವ ಸಮಶೀತೋಷ್ಟ ವಲಯದ ರಾಷ್ಟ್ರಗಳಲ್ಲಿ ಹಣ್ಣಿನ ದರ ತೀರಾ ಅಗ್ಗವಿದೆ.
1000ಕ್ಕೂ ಹೆಚ್ಚು ಬಾಳೆ ತಳಿ: ಬಾಳೆಯಲ್ಲಿ 1000ಕ್ಕಿಂತ ಹೆಚ್ಚು ತಳಿಗಳಿವೆ. ಆಯಾ ಪ್ರದೇಶದ ಬೇಡಿಕೆಗೆ ಅನುಗುಣವಾಗಿ ರೈತರು ಬಾಳೆ ಬೆಳೆದುಕೊಳ್ಳುತ್ತಾರೆ. ಕೇರಳದಲ್ಲಿ ನೇಂದ್ರ ಮತ್ತು ಕೆಂಪು ಬಾಳೆಗೆ ಹೆಚ್ಚು ಬೇಡಿಕೆ ಇದ್ರೆ ಕರ್ನಾಟಕದಲ್ಲಿ ಏಲಕ್ಕಿ, ಮೈಸೂರು ಬಾಳೆ, ರಸಬಾಳೆ, ಕರ್ಬಾಳೆ, ಜಿ9 ಬಾಳೆ ಹೆಚ್ಚು ಪ್ರಚಲಿತದಲ್ಲಿದೆ. ಬರೀ ಹಣ್ಣಿನ ದೃಷ್ಟಿಯಲ್ಲಷ್ಟೇ ಅಲ್ಲದೆ ಚಿಪ್ಸ್ಗಾಗಿ, ಅಡುಗೆಗಾಗಿಯೂ ಕೆಲವು ಬಾಳೆ ಬೆಳೆಯುವ ಪದ್ಧತಿಯಿದೆ. ಅದರಂತೆ ಪುಟ್ಟ ಬಾಳೆಯಿಂದ ಹಿಡಿದು ನ್ಯೂಗಿನಿಯಾದ 15 ಮೀಟರ್ ಎತ್ತರಕ್ಕೆ ಬೆಳೆಯುವ ಜಿಯಾಂಟ್ ಹೈಲೆಂಡ್ ಬಾಳೆ ಕೂಡ ಈ ಜಗತ್ತಿನಲ್ಲಿದೆ. ಜತೆಗೆ ಇದೀಗ ಅಂಗಾಶ ಕೃಷಿ ಪರಿಣಾಮ ಹೆಚ್ಚು ಇಳುವರಿ ನೀಡುವ ಹೈಬ್ರಿಡ್ ತಳಿಗಳು ಹೊರಹೊಮ್ಮಿವೆ. ಹೀಗಾಗಿ ರೈತರು ಒಬ್ಬರಿಂದ ಹೊರಲಾರದಷ್ಟು ದೊಡ್ಡ ಗೊನೆಗಳ ಇಳುವರಿ ಕಾಣುವಂತಾಗಿದೆ.
ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಏಲಕ್ಕಿ ಬಾಳೆ ಕೃಷಿ ಕೋರ್ಸ್: ಬಾಳೆ ಕೃಷಿ ಆಸಕ್ತರಿಗಾಗಿ ಇಂಡಿಯನ್ ಮನಿ ಡಾಟ್ ಕಾಂನ ಫ್ರೀಡಂ ಆಪ್ ಏಲಕ್ಕಿ ಬಾಳೆ ಕೃಷಿ ಕೋರ್ಸ್ ಅನಾವರಣ ಮಾಡಿದೆ. 20 ವರ್ಷದಿಂದ 10 ಎಕರೆಯಲ್ಲಿ ನಿರಂತರ ಬಾಳೆ ಕೃಷಿ ಮಾಡಿ ಸೋಲು, ಲಾಸ್ ಕಾಣದೆ, ಎಕರೆಗೆ 1 ಲಕ್ಷ ರೂ. ಖರ್ಚಿನಲ್ಲಿ 6 ಲಕ್ಷ ರೂ. ಆದಾಯ ಕಂಡಿರುವ ದೊಡ್ಡ ಬಳ್ಳಾಪುರ ತಾಲೂಕಿನ ಹಿರಿಯ ರೈತ ಶಿವಪ್ಪ ಅವರು ಈ ಕೋರ್ಸ್ ಮಾರ್ಗದರ್ಶಕರು.
ಆನ್ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್ಗೆ ಈಗಲೇ ಸೇರಿ!: ಕನ್ನಡ ನಟಿ ಮತ್ತು ಸೆಲೆಬ್ರೆಟಿ ಮೇಕಪ್ ಆರ್ಟಿಸ್ಟ್ ವೈಭವಿ ಜಗದೀಶ್ ಅವರು ಇಂಡಿಯನ್ ಮನಿ ಫೈನಾನ್ಸಿಯಲ್ ಫ್ರೀಡಂ ಆಪ್ ಸಹಯೋಗದಲ್ಲಿ ನಡೆಸುತ್ತಿರುವ ಆನ್ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್ಗೆ ಈಗಲೇ ಸೇರಿಕೊಳ್ಳಿ. ನೀವು ಮೇಕಪ್ ಕಲೆ ಕಲಿತು ದುಡಿಮೆಯ ದಾರಿ ಕಂಡುಕೊಳ್ಳಿ. ಹೆಚ್ಚಿನ ಮಾಹಿತಿಗೆ ಸಂರ್ಪಸಿ -9632742525.