ತೈವಾನ್ ಸೀಬೆ ಕೃಷಿ, 26 ಲಕ್ಷ ರೂಪಾಯಿ ಆದಾಯ

Money Mathu
Published on
ಹಿಂದೆಲ್ಲ ಸೀಬೆಯನ್ನು ಬಡವರ ಪಾಲಿನ ಆಪಲ್ ಅಂತ ಕರೆಯುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಇದೀಗ ಅದೇ ಸೀಬೆ ಬಡವನನ್ನು ಬಲ್ಲಿದನನ್ನಾಗಿಸುವ ಶಕ್ತಿ ಪಡೆದುಕೊಂಡಿದೆ. ಸಾವಿರ ರೂ. ಲೆಕ್ಕದಲ್ಲಿ ಆದಾಯ ತರುತ್ತಿದ್ದ ಸೀಬೆ ಬೆಳೆ, ಇಂದು ಲಕ್ಷಾಂತರ ರೂ. ಎಣಿಸುವಂತೆ ಮಾಡಿದೆ. ಅದು ಕೂಡ ಕೇವಲ ಗುಂಟೆ ಲೆಕ್ಕಾಚಾರದಲ್ಲಿ! ಉದಾಹರಣೆಗೆ ನಮ್ಮ ಕರ್ನಾಟಕದಲ್ಲಿಯೇ 24 ಗುಂಟೆಯಲ್ಲಿ 26 ಲಕ್ಷ ರೂ. ಆದಾಯ ಕಂಡುಕೊಂಡ ರೈತರೊಬ್ಬರಿದ್ದಾರೆ. ಅಂದಹಾಗೆ ಅರ್ಧ ಎಕರೆಯಲ್ಲಿ ಇಷ್ಟೊಂದು ಆದಾಯ ಗಳಿಸಲು ಸಾಧ್ಯವೇ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡಬಹುದು. ಅದು ಸಹಜವೇ ಆದರೂ ಅರ್ಧ ಎಕರೆಯಲ್ಲಿ 25 ಲಕ್ಷ ರೂ. ಆದಾಯವನ್ನು ಖಂಡಿತಾ ಪಡೆದುಕೊಳ್ಳಬಹುದು. 20 ಗುಂಟೆ ಅಂದರೆ ಅರ್ಧ ಎಕರೆಯಲ್ಲಿ 400 ಗಿಡ ಇರುತ್ತದೆ. ಒಂದು ಬಾರಿಗೆ 30 ಕೆ.ಜಿ.ಯಂತೆ ಎರಡು ಬಾರಿ ಇಳುವರಿ ಪಡೆಯಬಹುದು. ಒಟ್ಟು 60 ಕೆ.ಜಿ.ಯಷ್ಟು ಇಳುವರಿಯನ್ನು ಅರ್ಧ ಎಕರೆಯಲ್ಲಿ ತೆಗೆಯಬಹುದು. ಹೀಗೆ ಒಟ್ಟು 24,000 ಕೆ.ಜಿ. ಇಳುವರಿ ಪಡೆದುಕೊಳ್ಳಬಹುದು. 1 ಕೆ.ಜಿ.ಗೆ ಅಂದಾಜು 100 ರೂ. ನಿಗದಿ ಮಾಡಿ ಮಾರಾಟ ಮಾಡಿದರೆ ನಿಮಗೆ 24,000 ಕೆ.ಜಿಗೆ 24 ಲಕ್ಷ ರೂ. ಆದಾಯ ಬಂದೇ ಬರುತ್ತದೆ. ಸಹಜವಾಗಿ ಒಂದು ಸೀಬೆ ಗಿಡದಲ್ಲಿ 70 ರಿಂದ 80 ಕಾಯಿ ಬಿಟ್ಟಿರುತ್ತವೆ. ಹೆಚ್ಚಿನ ಕಾಯಿಗಳನ್ನು ಕಿತ್ತು ಗಿಡದ ಸಾಂಧ್ರತೆಗೆ ತಕ್ಕಂತೆ ಕಾಯಿ ಉಳಿಸುವ ಪದ್ಧತಿ ತೈವಾನ್ ಸೀಬೆ ಕೃಷಿಯಲ್ಲಿದೆ. 300ಗ್ರಾಂ ನಿಂದ 600ಗ್ರಾಂ ತೂಗುವಂತಹ ಕಾಯಿಯನ್ನು ಮಾತ್ರವೇ ಮಾರಾಟ ಮಾಡುತ್ತಾರೆ. ಒಂದು ಕೆ.ಜಿ. ತೂಗುವ ಸಾಮರ್ಥ್ಯ ಈ ಹಣ್ಣಿಗೆ ಇದ್ದರೂ ಮಾರುಕಟ್ಟೆ ದೃಷ್ಟಿಯಿಂದ ಅರ್ಧ ಕೆ.ಜಿ. ಅಂದಾಜಿನಲ್ಲೇ ಮಾರಾಟ ಮಾಡಲಾಗುತ್ತದೆ.

ತೈವಾನ್ ಸೀಬೆಗೆ ಅಷ್ಟು ಬೇಡಿಕೆ ಏಕೆ?: ತೈವಾನ್ ಸೀಬೆ ಹೆಚ್ಚು ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ. ಒಂದು ಹಣ್ಣು 1 ಕೆ.ಜಿ. ತೂಕ ತೂಗುವ ಸಾಮರ್ಥ್ಯ ಹೊಂದಿದ್ದರೂ ಎಂದಿಗೂ ಹುಳುವಿನ ಬಾಧೆ ಎದುರಿಸುವುದಿಲ್ಲ. ಬದಲಿಗೆ ರುಚಿಯಲ್ಲಿಯೂ ಒಂದು ಹೆಜ್ಜೆ ಮುಂದಿದೆ. ಇದರ ಪಲ್ಪಾ್ಬಯಲ್ಲಿ ಕರಗುವಂತಿರುವುದಿಲ್ಲ ಮತ್ತು ಹಲ್ಲು ನೋವು ಬರುವವರೆಗೆ ಅಗಿದು ತಿನ್ನುವಂತೆ ಗಟ್ಟಿಯೂ ಇರುವುದಿಲ್ಲ. ಆರೋಗ್ಯ ದೃಷ್ಟಿಯಿಂದ ನೋಡಿದರೆ ತೈವಾನ್ ಸೀಬೆಯಲ್ಲಿ ವಿಟಮಿನ್ ಎ.ಬಿ.ಸಿ ಹೇರಳವಾಗಿದೆ. ಹೀಗಾಗಿ ಸಕ್ಕರೆ ಕಾಯಿಲೆ, ಬಿ.ಪಿ., ಹೃದಯ ಸಮಸ್ಯೆ, ಅಜೀರ್ಣ, ತೂಕ ನಷ್ಟ, ರೋಗನಿರೋಧಕ ಶಕ್ತಿ ಕುಂದುವಿಕೆಯಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಕವರ್​ಗಳನ್ನು ಬಳಕೆ ಮಾಡುವ ಮೂಲಕ ಹಣ್ಣುಗಳ ತೇವಾಂಶ ಕಾಯ್ದಿರಿಸಲಾಗುತ್ತದೆ. ಈ ವಿಧಾನದಲ್ಲಿ ಬೆಳೆಯುವುದರಿಂದ ಕೀಟಬಾಧೆ ಬಾಧಿಸುವುದಿಲ್ಲ. ಈ ಕಾರಣಕ್ಕೆ ಮಾರುಕಟ್ಟೆಯಲ್ಲಿ ಈ ಹಣ್ಣು ಹೆಚ್ಚಿನ ಆಕರ್ಷಣೆ ಪಡೆದುಕೊಂಡಿದೆ.

ಅತಿ ಹೆಚ್ಚು ತೈವಾನ್ ಸೀಬೆ ಬೆಳೆವ 10 ರಾಜ್ಯಗಳು: ಕರ್ನಾಟಕ ಸೇರಿ ನಮ್ಮ ದೇಶದ ಹತ್ತು ರಾಜ್ಯಗಳಲ್ಲಿ ಹೆಚ್ಚು ಸೀಬೆಯನ್ನು ಬೆಳೆಯಲಾಗುತ್ತಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ್, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸ್​ಗಢ, ಪಂಜಾಬ್, ಗುಜರಾತ್, ತಮಿಳುನಾಡು, ಕರ್ನಾಟಕದಲ್ಲಿ ಹೇರಳವಾಗಿ ಸೀಬೆ ಬೆಳೆ ಬೆಳೆಯಲಾಗುತ್ತಿದೆ. ಈ ಹತ್ತು ರಾಜ್ಯಗಳೇ 3,345,37 ಟನ್ ಸೀಬೆಯನ್ನು ದೇಶಕ್ಕೆ ನೀಡುತ್ತಿವೆ. ಹೆಚ್ಚು ಮಳೆ ಬೀಳುವ ಪ್ರದೇಶಗಳು ತೈವಾನ್​ನಂತೆ ಅಷ್ಟು ಸೂಕ್ತವಾಗಿಲ್ಲದಿದ್ದರೂ, ಒಳನಾಡಿಗೆ ಇದು ಹೇಳಿ ಮಾಡಿಸಿದ ಬೆಳೆಯೇ ಸರಿ. ಜತೆಗೆ ಈ ಪ್ರದೇಶದಲ್ಲೇ ದೊಡ್ಡ ಮಾರುಕಟ್ಟೆ ಕೂಡ ತೈವಾನ್ ಸೀಬೆ ಪಡೆದುಕೊಂಡಿದೆ. 130 ಕೋಟಿ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಲೋಚಿಸಿದರೆ ಭಾರತದಲ್ಲಿ ಉತ್ಪಾದನೆ ಆಗುತ್ತಿರುವ ತೈವಾನ್ ಸೀಬೆ ಏನೇನು ಅಲ್ಲ. ಹೀಗಾಗಿ ಕೃಷಿಕರಿಗೆ ಅಗಾಧ ಅವಕಾಶ ಇಲ್ಲಿದೆ. ತೈವಾನ್ ಸೀಬೆ ಕೃಷಿಯ ಆರಂಭದಲ್ಲಿ ಖರ್ಚು ಬಂದರೂ 12 ವರ್ಷ ನಿರಂತರ ಆದಾಯ ಪಡೆದುಕೊಳ್ಳಬಹುದಾಗಿದೆ.

ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ತೈವಾನ್ ಸೀಬೆ ಕೃಷಿ ಕೋರ್ಸ್: ಉತ್ತರ ಭಾರತದಲ್ಲಿ ಹೇರಳವಾಗಿ ಬೆಳೆಯುವ ತೈವಾನ್ ಸೀಬೆ ದಕ್ಷಿಣ ಭಾರತಕ್ಕೆ ಕಾಲಿಟ್ಟು ಬಹಳ ವರ್ಷಗಳಾಗಿಲ್ಲ. ಆದರೆ ಬೆರಳೆಣಿಕೆ ವರ್ಷಗಳಲ್ಲೇ ಹರ್ಷದ ಆದಾಯ ಹೊತ್ತು ತಂದು ಎಷ್ಟೋ ರೈತರು ಐಷಾರಾಮಿ ಜೀವನ ನಡೆಸುವಂತೆ ಮಾಡಿದೆ. ಹೀಗಾಗಿ ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರಿಡಂ ಆಪ್ ತೈವಾನ್ ಸೀಬೆ ಕೃಷಿ ಕೋರ್ಸ್​ನಲ್ಲಿ ಸಾಧಕರನ್ನು ಪರಿಚಯಿಸಿದೆ. ಕೋರ್ಸ್​ನ ಮಾರ್ಗದರ್ಶಕ ಸಂತೋಷ್ ಕೂಡ 24 ಗುಂಟೆಯಲ್ಲಿ 26 ಲಕ್ಷ ರೂ. ಆದಾಯ ಪಡೆದಿದ್ದಾರೆ. ಹೀಗಾಗಿ ಇವರ ಯಶೋಗಾಥೆ ನಾಡಿನ ಸಮಸ್ತ ರೈತರಿಗೆ ತಲುಪಬೇಕು ಎನ್ನುವ ದೃಷ್ಟಿಯಿಂದ ಈ ಕೋರ್ಸ್್ ಬಿಡುಗಡೆಯಾಗಿದೆ. ಇನ್ನೇಕೆ ತಡ ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ, ತೈವಾನ್ ಸೀಬೆ ಕೃಷಿ ಬಗ್ಗೆ ಕಲಿತು ಹೆಚ್ಚೆಚ್ಚು ಆದಾಯ ಗಳಿಸಿ.

ಆನ್​ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್​ಗೆ ಈಗಲೇ ಸೇರಿ!: ನಟಿ ಮತ್ತು ಸೆಲೆಬ್ರೆಟಿ ಮೇಕಪ್ ಆರ್ಟಿಸ್ಟ್ ವೈಭವಿ ಜಗದೀಶ್ ಅವರು ಇಂಡಿಯನ್ ಮನಿ ಫೈನಾನ್ಸಿಯಲ್ ಫ್ರೀಡಂ ಆಪ್ ಸಹಯೋಗದಲ್ಲಿ ನಡೆಸುತ್ತಿರುವ ಆನ್​ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್​ಗೆ ಈಗಲೇ ಸೇರಿಕೊಳ್ಳಿ. ನೀವು ಮೇಕಪ್ ಕಲೆ ಕಲಿತು ದುಡಿಮೆಯ ದಾರಿ ಕಂಡುಕೊಳ್ಳಿ. ಹೆಚ್ಚಿನ ಮಾಹಿತಿಗೆ ಸಂರ್ಪಸಿ: 7975465873

ಗಾಣದ ಎಣ್ಣೆ ಉದ್ಯಮದ ಪ್ರಾಯೋಗಿಕ ತರಬೇತಿ!: ಯಶಸ್ವಿ ಗಾಣದ ಎಣ್ಣೆ ಉದ್ಯಮಿ ರಾಜಶೇಖರ್ ಅವರು ಇಂಡಿಯನ್ ಮನಿ ಫೈನಾನ್ಸಿಯಲ್ ಫ್ರೀಡಂ ಆಪ್ ಸಹಯೋಗದಲ್ಲಿ ನಡೆಸುತ್ತಿರುವ ಆಯಿಲ್ ಮಿಲ್ ತರಬೇತಿಗೆ ಈಗಲೇ ಸೇರಿಕೊಳ್ಳಿ. ನೀವು ಗಾಣದ ಎಣ್ಣೆ ಉದ್ಯಮ ಕಲಿತು ಯಶಸ್ವಿ ಉದ್ಯಮಿಗಳಾಗಿ. ಹೆಚ್ಚಿನ ಮಾಹಿತಿಗೆ ಸಂರ್ಪಸಿ: 7975465873

ಕೋರ್ಸ್​ನಲ್ಲಿ ಏನೆಲ್ಲ ಕಲಿಯಬಹುದು?

  • ಕೋರ್ಸ್ ಪರಿಚಯ
  • ಮಾರ್ಗದರ್ಶಕರ ಪರಿಚಯ
  • ಏನಿದು ತೈವಾನ್ ಸೀಬೆ ಕೃಷಿ?
  • ತೈವಾನ್ ಸೀಬೆಯ ವಿಧಗಳು, ಇಳುವರಿ
  • ಅಗತ್ಯ ಬಂಡವಾಳ ಮತ್ತು ಭೂಮಿ
  • ಭೂಮಿ ಸಿದ್ಧತೆ, ಮಣ್ಣು ಮತ್ತು ಹವಮಾನ
  • ಕಾರ್ವಿುಕರು, ಸಲಕರಣೆ, ನಾಟಿ
  • ಗೊಬ್ಬರ, ನೀರು, ಕಳೆ ನಿಯಂತ್ರಣ
  • ಸಸ್ಯ ಸಂರಕ್ಷಣೆ, ಕೀಟಬಾಧೆ, ಕಟಾವು ಮತ್ತು ಕಟಾವಿನ ನಂತರ
  • ಮಾರುಕಟ್ಟೆ, ರಫ್ತು, ಖರ್ಚು ಮತ್ತು ಆದಾಯ
  • ವಿಮೆ, ಸಬ್ಸಿಡಿ ಮತ್ತು ಮಾರ್ಗದರ್ಶಕರ ಕಿವಿಮಾತು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net