10 ಗ್ರಾಂಗೆ 1.07 ಲಕ್ಷ ರೂ, ದಾಟಿದ ಚಿನ್ನದ ದರ

photo-4-68b88c1b1c2bb
Published on

ನವದೆಹಲಿ: ಬುಧವಾರ ಚಿನ್ನದ ಬೆಲೆ ರೂ. 1,000 ಏರಿಕೆಯಾಗಿ 10 ಗ್ರಾಂಗೆ 1,07,070 ರೂ.ಗೆ ತಲುಪಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿತ ನಿರೀಕ್ಷೆ, ಆರ್ಥಿಕ ಉದ್ವಿಗ್ನತೆ ಮತ್ತು ಜಾಗತಿಕ ರಾಜಕೀಯ ಒತ್ತಡಗಳು ಈ ಬೆಲೆ ಏರಿಕೆಗೆ ಕಾರಣವಾಗಿವೆ.

ದೆಹಲಿ ಮಾರುಕಟ್ಟೆಯಲ್ಲಿ ಮಂಗಳವಾರ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 1,06,070 ರೂ. ಇತ್ತು. ಬುಧವಾರ ಅದು 1,07,070 ರೂ. ಆಗಿದೆ. ಶೇ. 99.5 ಶುದ್ಧತೆಯ ಚಿನ್ನವು ನಿರಂತರ 8ನೇ ದಿನವೂ 1,000 ರೂ. ಏರಿಕೆಯಾಗಿ 1,06,200 ರೂ.ಗೆ ತಲುಪಿದೆ. ಮಂಗಳವಾರ ಇದರ ದರ 1,05,200 ರೂ. ಇತ್ತು. ಬೆಳ್ಳಿಯ ಬೆಲೆ 1 ಕೆ.ಜಿ.ಗೆ 1,26,100 ರೂ. ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಸ್ಥಿರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net