ಬಂಗಾರ- ಬೆಳ್ಳಿ ಬೆಲೆ ಮತ್ತೊಂದು ದಾಖಲೆ

5-68d18db06d2ae
Published on

ನವದೆಹಲಿ: ಚಿನ್ನದ ಬೆಲೆ ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ 2,200 ರೂ. ಏರಿಕೆಯಾಗಿದೆ. ಶುಕ್ರವಾರ 10 ಗ್ರಾಂಗೆ 1,14,000 ರೂ. ಇದ್ದ ಶೇ. 99.9 ಶುದ್ಧತೆಯ ಚಿನ್ನದ ಬೆಲೆ ಸೋಮವಾರ 1,16,200 ರೂ.ಗೆ ತಲುಪಿದೆ.

ಶೇ. 99.5 ಶುದ್ಧತೆಯ ಚಿನ್ನ ಶುಕ್ರವಾರ 1,13,500 ರೂ. ಇದ್ದದ್ದು ಸೋಮವಾರ 2,150 ರೂ. ಏರಿಕೆಯಾಗಿ 1,15,650 ರೂ.ಗೆ ತಲುಪಿದೆ. ಬೆಳ್ಳಿ ಬೆಲೆ ಶುಕ್ರವಾರ ಕೆಜಿಗೆ 1,32,000 ರೂ. ಇದ್ದದ್ದು ಸೋಮವಾರ 4,380 ರೂ. ಏರಿಕೆಯಾಗಿ 1,36,380 ರೂ.ಗೆ ತಲುಪಿದೆ. ಈ ವರ್ಷ ಇದುವರೆಗೆ, ಬೆಳ್ಳಿ ಬೆಲೆ ಪ್ರತಿ ಕೆಜಿಗೆ 46,680 ರೂ. ಅಥವಾ ಶೇ. 52.04ರಷ್ಟು ಏರಿಕೆಯಾಗಿದೆ. ಇದು 2024ರ ಡಿ. 31ರಂದು 89,700 ರೂ. ಇತ್ತು ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net