ಗರ್ಭಾವಸ್ಥೆಯ ಮಧುಮೇಹ

Lalitha 2nd Lead
Published on
ಗರ್ಭಾವಸ್ಥೆಯಲ್ಲಿ ಮಧುಮೇಹ ಕಾಣಿಸಿಕೊಳ್ಳುವುದನ್ನು ಜೆಸ್ಟೇಷನಲ್ ಡಯಬಿಟೀಸ್ ಮೆಲಿಟಸ್ (ಎಈM) ಎಂದು ಕರೆಯಲಾಗುತ್ತದೆ. ಗರ್ಭಿಣಿಯ ದೇಹದಲ್ಲಿ ಇನ್ಸುಲಿನ್ ಹಾರ್ವೇನ್ ಸರಿ ಪ್ರಮಾಣದಲ್ಲಿದ್ದರೂ, ದೇಹ ಅದನ್ನು ಪರಿಣಾಮಕಾರಿಯಾಗಿ ಬಳಸುವುದಿಲ್ಲ, ಇದನ್ನು ಇನ್ಸುಲಿನ್ ರೆಸಿಸ್ಟನ್ಸ್ (ಪ್ರತಿರೋಧ) ಎನ್ನಲಾಗುತ್ತದೆ, ಜೀವಕೋಶಗಳಿಂದ ಹೀರಿಕೊಳ್ಳುವ ಬದಲು, ಗ್ಲೂಕೋಸ್ ರಕ್ತದಲ್ಲಿ ಸಂಗ್ರಹವಾಗುತ್ತದೆ. ಟೈಪ್ 1 ಮಧುಮೇಹಕ್ಕಿಂತ ಎಈM ವಿಭಿನ್ನ, ಗರ್ಭಾವಸ್ಥೆಯ ನಂತರ ಮಧುಮೇಹದ ಲಕ್ಷಣಗಳು ಕಣ್ಮರೆಯಾಗುತ್ತದೆ, ಭಾರತದಲ್ಲಿ ವಾರ್ಷಿಕ ಸುಮಾರು 50 ಲಕ್ಷ ಗರ್ಭಿಣಿಯರಲ್ಲಿ ಈ ಸ್ವರೂಪ ವ್ಯಕ್ತವಾಗುತ್ತದೆ.

| ಡಾ. ರಕ್ಷಾ ಯು. ರಾವ್

ನಿರ್ಣಯ ಹೇಗೆ?: ಈ ಪರೀಕ್ಷೆಯನ್ನು ಅಮೇರಿಕನ್ ಡಯಬಿಟೀಸ್ ಅಸೋಸಿಯೇಷನ್ ಶಿಫಾರಸು ಮಾಡಿದೆ. ಮಧುಮೇಹ ಅಪಾಯಕಾರಿ ಅಂಶಗಳನ್ನು ಹೊಂದಿದ ಮಹಿಳೆಯರಲ್ಲಿ ಮೊದಲ ತಪಾಸಣೆಯಲ್ಲಿ, ಹಾಗೂ ಅಪಾಯವಿಲ್ಲದ ಮಹಿಳೆಯರಲ್ಲಿ ಗರ್ಭಾವಸ್ಥೆಯ 5-6 (24-28 ವಾರಗಳ) ತಿಂಗಳ ಹತ್ತಿರ ಮಾಡಿಸಬೇಕು, ಪ್ರಸವದ ನಂತರ ಕೂಡ ಎಈM ಖಚಿತವಾದವರು, 6 ವಾರ, 3 ತಿಂಗಳವರೆಗೂ ರಕ್ತದಲ್ಲಿ ಗ್ಲೂಕೋಸ್ ತಪಾಸಣೆ ಮಾಡಿಸುತ್ತಿರಬೇಕು. ಎಈM ಗಾಗಿ ಸ್ಕ್ರೀನಿಂಗ್ ಪರೀಕ್ಷೆಯು ಗಏಣನಿಂದ ಶಿಫಾರಸು ಮಾಡಲಾದ ಮೌಖಿಕ ಗ್ಲೂಕೋಸ್ ಚ್ಯಾಲೆಂಜ್ ಪರೀಕ್ಷೆ (ಎಇಖ) 75 ಗ್ರಾಂ ಗ್ಲೂಕೋಸ್ ಕುಡಿದ 2 ಗಂಟೆ ನಂತರ, ರಕ್ಷದಲ್ಲಿನ ಗ್ಲೂಕೋಸ್ ಪರೀಕ್ಷಿಸಲಾಗುತ್ತದೆ,140 ಞಜ/ಛ್ಝ ಗಿಂತ ಹೆಚ್ಚಿನ ಮೌಲ್ಯ ಕಂಡುಬಂದಲ್ಲಿ, ಕೆಲವು ಆಹಾರ, ವ್ಯಾಯಾಮ ಸಲಹೆ ನೀಡಿ, ಗ್ಲೂಕೋಸ್ ಪರೀಕ್ಷಿಸಿ, ಮೆಟ್ ಫಾರ್ವಿುನ್ ಔಷಧ ಇಲ್ಲವೇ ಇನ್ಸುಲಿನ್ ಚಿಕಿತ್ಸೆ ಪ್ರಾರಂಭಮಾಡಲಾಗುತ್ತದೆ.

ತಾಯಿಗೆ ಆಗುವ ತೊಡಕುಗಳು: ಭ್ರೂಣದ ಮ್ಯಾಕ್ರೋಸೋಮಿಯಾದ ಪ್ರಭಾವದಿಂದ ದೀರ್ಘಕಾಲದ ಹೆರಿಗೆ, ಕಷ್ಟಕರವಾದ ಹೆರಿಗೆ, ಶೋಲ್ಡರ್ ಡಿಸ್ಟೋಶಿಯಾ, ಅಧಿಕವಾದ ಸ್ಯೂಚರ್ಗಳು, ಸಿಸೇರಿಯನ್ ಹೆರಿಗೆ, ಪ್ರಸವಾನಂತರದ ರಕ್ತಸ್ರಾವ, ಸೆಪ್ಸಿಸ್-ನಂಜಾಗುವಿಕೆ.

ಪ್ರಮುಖ ಹಂತಗಳು: ಗರ್ಭಾವಸ್ಥೆಯಲ್ಲಿ ಟೈಪ್ ಒಂದು ಮಧುಮೇಹ ಮಾಡುವ ಭ್ರೂಣದ ನ್ಯೂನತೆಗಳನ್ನು ಎಈM ಮಾಡುವುದಿಲ್ಲ. ಕಾರಣ ಇಲ್ಲಿ ಹೆಚ್ಚಿನ ಗ್ಲೂಕೋಸ್ ಪರಿಣಾಮ 5 ತಿಂಗಳ ನಂತರದಿಂದ ಪ್ರಾರಂಭವಾಗುತ್ತದೆ. ಹುಟ್ಟುವ ಶಿಶುವು ಮೊದಲ 3-4 ದಿನ ಹಲವಾರು ರಾಸಾಯನಿಕಗಳ ಅಸಮತೋಲನ, ಕಡಿಮೆ ಕ್ಯಾಲ್ಸಿಯಂ, ಮೆಗ್ನೀಷಿಯಮ್ ಮಟ್ಟಗಳಿಗೆ ಗುರಿಯಾಗುತ್ತದೆ.

ಫೀಟಲ್ ಮ್ಯಾಕ್ರೋಸೋಮಿಯಾ: ಭ್ರೂಣವು ಎಲ್ಲ ಪೋಷಕಾಂಶಗಳನ್ನು ತಾಯಿ ರಕ್ತದಿಂದ ಪಡೆಯುತ್ತದೆ. ರಕ್ತದಲ್ಲಿ ಹೆಚ್ಚಿನ ಗ್ಲೂಕೋಸ್ ಇದ್ದರೆ, ಭ್ರೂಣದ ಮೇದೋಜ್ಜೀರಕ ಗ್ರಂಥಿ, ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಗ್ರಹಿಸುತ್ತದೆ ಮತ್ತು ಇನ್ಸುಲಿನ್ ಉತ್ಪಾದಿಸುತ್ತದೆ. ಇದರ ಪ್ರಭಾವದಿಂದ ಭ್ರೂಣದಲ್ಲಿ ಕೊಬ್ಬಿನ ಸಂಯೋಜನೆ ಹೆಚ್ಚಾಗಿ ಬೆಳೆಯಲು ಕಾರಣವಾಗಿ ಅದರ ತೂಕ ಅಧಿಕವಾಗಿರುತ್ತದೆ. ಅಂದರೆ 4kಜ ಹಾಗೂ ಅದಕ್ಕಿಂತ ಮಿಗಿಲು.

ಹೈಪೋಗ್ಲೈಸಿಮಿಯಾ: ಹುಟ್ಟಿದ ಕೆಲ ಕ್ಷಣಗಳಲ್ಲಿ ಮಗುವಿನ ರಕ್ತದಲ್ಲಿ ಕಡಿಮೆ ಗ್ಲೂಕೋಸ್ ಮಟ್ಟ ಸೂಚಿಸುತ್ತದೆ. ತಾಯಿಯ ಅಧಿಕ ರಕ್ತದ ಅನುಗುಣವಾಗಿ ಹೆಚ್ಚು ಇನ್ಸುಲಿನ್ ತಯಾರು ಮಾಡುತ್ತಿದ್ದ ಶಿಶುವು, ಹೆರಿಗೆ ನಂತರ ಅಷ್ಟು ಗ್ಲೂಕೋಸ್ ಸಿಗದೆ, ಹೆಚ್ಚಿನ ಇನ್ಸುಲಿನ್ ಪ್ರಭಾವದಿಂದ ಹೈಪೋಗ್ಲೈಸಿಮಿಯಾದಿಂದ ಬಳಲುತ್ತದೆ. ಆದ್ದರಿಂದ ಜನನದಿಂದ 2-3 ದಿನಗಳವರೆಗೆ, ಮಗುವಿನ ರಕ್ತದಲ್ಲಿನ ಗ್ಲೂಕೋಸ್ ಪರೀಕ್ಷೆಯನ್ನು ನಿರಂತರವಾಗಿ 6 ಗಂಟೆಗಳಿಗೊಮ್ಮೆ ಮಾಡಿಸಬೇಕು.

ಜಿಡಿಎಂ ತಡೆಗಟ್ಟುವಿಕೆ

  • ಆರೋಗ್ಯಕರ ಆಹಾರದ ಸೇವನೆ
  • ಪ್ರತಿನತ್ಯ ನಿಯಮಿತ ವ್ಯಾಯಾಮ
  • ಅಪಾಯದ ಅಂಶಗಳಿದ್ದರೆ, ಮೊದಲೇ ತಪಾಸಣೆಗೆ ಒಳಗಾಗಿ

GDM ಆಗಲು ಕಾರಣಗಳು

  • ಅಧಿಕ ತೂಕ ಅಥವಾ ಬೊಜ್ಜು
  • ಮಧುಮೇಹದ ಕುಟುಂಬ ಇತಿಹಾಸ
  • ಮೊದಲ ಗರ್ಭಾವಸ್ಥೆ ಯಲ್ಲಿ 4 ಕೆಜಿಗಿಂತ ಹೆಚ್ಚಿನ ತೂಕದ ಶಿಶುವಿಗೆ ಜನ್ಮ ನೀಡಿರುವುದು.
  • ವಯಸ್ಸು 25 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಜಿಡಿಎಂ ಅಭಿವೃದ್ಧಿ ಹೊಂದುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net