ಹೋಗುವುದು ನಿರ್ಧಾರವಾದ ಮೇಲೆ ಒಬ್ಬರೇ ಹೋಗುವುದಕ್ಕಿಂತ ಪರಿಚಿತರು ಯಾರಾದರೂ ಬಂದರೆ ಎಲ್ಲರೂ ಸೇರಿ ಹೋಗಿ ಬರಬಹುದೆಂದು ರ್ಚಚಿಸಿದೆವು. ಆಗ ಕೊಟ್ಟೂರು, ಶಿವಗಂಗೆ, ಕೆರೂರು, ವಿಭೂತಿಪುರ, ಗುಳೇದಗುಡ್ಡ, ಶಿರಶ್ಯಾಡ, ಸಿಂಧಗಿ, ಕನಕಗಿರಿ, ಘಟಪ್ರಭಾ ಹೀಗೆ ಒಟ್ಟು 10 ಜನ ಮಠಾಧಿಪತಿಗಳು ಯಾತ್ರೆಗೆ ಜತೆಯಾದರು. ಗುಂತಕಲ್ ಮೂಲದ ಪ್ರವಾಸಿ ಕಂಪನಿಯ ಮೂಲಕ ಒಟ್ಟು 80ಕ್ಕಿಂತಲೂ ಹೆಚ್ಚು ಜನ ವಿಭಿನ್ನ ಪ್ರಾಂತದ ಭಕ್ತರು ಕೈಲಾಸ ಮಾನಸ ಸರೋವರ ಯಾತ್ರೆಗೆ ಹೊರಟು ಜೂ. 13ರಂದು ನೇಪಾಳದ ರಾಜಧಾನಿ ಕಾಠ್ಮಂಡು ನಗರಕ್ಕೆ ಹೋದೆವು.