

ಚಪಾತಿ ಪೂರಿ ಹಾಗೂ ದೋಸೆ ರೊಟ್ಟಿ ಇತ್ಯಾದಿ ತಿನಿಸು ಮಾಡಿದಾಗ ಅವುಗಳನ್ನು ಸವಿಯುವುದಕ್ಕಾಗಿ ಕೆಲವೊಂದು ಸೈಡ್ಡಿಷ್ಗಳನ್ನು ಹೇಗೆ ತಯಾರಿಸಬೇಕು ಎಂಬ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು: ಬಟಾಣಿ 1/2 ಕಪ್, ಈರುಳ್ಳಿ 2 ಬೆಳ್ಳುಳ್ಳಿ 8-10 ಎಸಳು ಹಸಿಮೆಣಸು 2-3 ಅರಿಶಿಣ ಪುಡಿ 1/2 ಚಮಚ ಮೇಣಸಿನಪುಡಿ 1/2 ಚಮಚ ಉಪ್ಪು ರುಚಿಗೆ ತಕ್ಕಷ್ಟು, ಸಕ್ಕರೆ 2 ಚಮಚ ಒಗ್ಗರಣೆಗೆ: ಚಮಚ ಎಣ್ಣೆಸಾಸಿವೆ, ಜೀರಿಗೆ ಕರಿಬೇವು ಎಸಳು ಕೊತ್ತಂಬರಿ ಸೊಪ್ಪು ಸ್ವಲ್ಪ.
ಮಾಡುವ ವಿಧಾನ: ಮೊದಲಿಗೆ ಮಿಕ್ಸಿಯಲ್ಲಿ ಪುಟಾಣಿಯನ್ನು ಪುಡಿ ಮಾಡಿಕೊಳ್ಳಿ. ಇದಕ್ಕೆ 1 ಕಪ್ ನೀರು ಹಾಕಿ ಗಂಟಿಲ್ಲದಂತೆ ಕಲಿಸಿಕೊಳ್ಳಿ. ಈಗ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವಿನ ಒಗ್ಗರಣೆ ಹಾಕಿ. ನಂತರ ಬೆಳ್ಳುಳ್ಳಿ ಯನ್ನು ಜಜ್ಜಿ ಹಾಕಿ. ಈರುಳ್ಳಿ, ಹಸಿಮೆಣಸು, ಅರಿಶಿಣ ಪುಡಿ, ಮೆಣಸಿನಪುಡಿ ಹಾಕಿ ಫ್ರೖೆ ಮಾಡಿ ನಂತರ ಕಲಿಸಿಟ್ಟ ಪುಟಾಣಿ ಮಿಶ್ರಣ ಹಾಕಿ. ಉಪ್ಪು, ಸಕ್ಕರೆ, ನಿಂಬೆರಸ ಹಾಕಿ ಕುದಿಸಿ. ನಂತರ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ.
| ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ