ರೆಸಲೂಷನ್​ 2019 ಹೀಗೆಲ್ಲಾ ಆಯ್ತಪ್ಪ: ಸಾವಿರಾರು ಕಿ.ಮೀ ಸೈಕ್ಲಿಂಗ್

Mas 4
Published on

ಜನವರಿ ಎಂದರೆ ಹಲವರಿಗೆ ಅದು ‘ಸಾಧನೆ’ಯ ಮಾಸ. ಹೋದ ವರ್ಷ ಮಾಡದ ಏನಾದರೊಂದು ಸಾಧನೆ ಈ ವರ್ಷ ಮಾಡಬೇಕು ಎನ್ನುವ ಹಂಬಲ. ಕಳೆದ ವರ್ಷ ಇಂಥದ್ದೇ ರೆಸಲೂಷನ್ ಮಾಡಿ ಎಷ್ಟರಮಟ್ಟಿಗೆ ಸಕ್ಸಸ್ ಆಗಿದ್ದೀರಿ ಎಂದು ವಿಜಯವಾಣಿ ಕೇಳಿದ ಪ್ರಶ್ನೆಗೆ ಬಂದ ಸಾವಿರಾರು ಪತ್ರಗಳಲ್ಲಿ ಆಯ್ದ ಕೆಲವು ಪತ್ರಗಳ ಎರಡನೆಯ ಭಾಗ.

ಸಾವಿರಾರು ಕಿ.ಮೀ ಸೈಕ್ಲಿಂಗ್

2019ರಲ್ಲಿ 2000 ಕಿಲೋ ಮೀಟರ್ ಸೈಕ್ಲಿಂಗ್ ಮಾಡುವ ಪ್ರಮಾಣ ಮಾಡಿದ್ದೆ. ಇದಕ್ಕಾಗಿ ಜನವರಿಯಿಂದ ಪ್ರತಿದಿನ 10 ರಿಂದ 20 ಕಿಲೋಮೀಟರ್ ಸೈಕ್ಲಿಂಗ್ ಮಾಡುತ್ತಾ ಡಿಸೆಂಬರ್ ವರೆಗೂ ಒಟ್ಟಾರೆ 1884 ಕಿಲೋಮೀಟರ್ ನಷ್ಟು ಸೈಕ್ಲಿಂಗ್ ಮಾಡಿದೆ. ಹಾವೇರಿ ಸುತ್ತಮುತ್ತಲಿನ ಎಲ್ಲಾ ದಿಕ್ಕುಗಳಲ್ಲಿ ಸೈಕ್ಲಿಂಗ್ ಮಾಡುವಾಗ ನವಿಲು ಜಿಂಕೆ ನರಿ ಮುಂತಾದ ಪ್ರಾಣಿ ಪಕ್ಷಿಗಳನ್ನು ನೋಡಲು ಸಿಕ್ಕಿತು. ಮುಂಜಾನೆಯ ನಸುಕಿನಲ್ಲಿ ಚಳಿಯಲ್ಲಿ, ಮಳೆಯಲ್ಲಿ ಬಿಸಿಲಲ್ಲಿ ಸೈಕ್ಲಿಂಗ್ ಮಾಡುತ್ತಿದ್ದೆ. ನನ್ನ ಕನಸು ನನಸಾಗಿಸಿಕೊಂಡ ಖುಷಿ ಇದೆ. ಈ ವರ್ಷವೂ 2500 ಕಿಲೋಮೀಟರ್ ನಷ್ಟು ಸೈಕ್ಲಿಂಗ್ ಮಾಡುವುದು ನನ್ನ ರೆಸಲ್ಯೂಷನ್.

|ಕಿರಣ್ ಕುಮಾರ್ ಹನಮನಹಳ್ಳಿ ಹಾವೇರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net