

| ಶರಣ್ಯರಾಜ್ ಕಿತ್ತೂರು ಚೆನ್ನಮ್ಮ ವಸತಿ ಶಾಲೆ, ಕೊಳ್ಳೇಗಾಲ
ನಾನು 9 ವರ್ಷದವಳಿದ್ದಾಗ ನಡೆದ ಘಟನೆ ಇದು. ನನ್ನ ಸ್ನೇಹಿತೆಯರ ಜತೆ ನದಿಯ ತೀರದಲ್ಲಿ ಆಟವಾಡುತ್ತಿದ್ದೆ. ಆ ಸಮಯದಲ್ಲಿ ಉದ್ದನೆಯ ಹಾವು ನಮ್ಮ ಕಡೆ ಬರುವುದನ್ನು ನೋಡಿ ನನ್ನ ಸ್ನೇಹಿತೆಯರು ಕಿರುಚಿಕೊಂಡು ಓಡ ತೊಡಗಿದರು. ಓಡುವ ಗಾಬರಿಯಲ್ಲಿ ನಾನು ಎಡವಿ ಅಲ್ಲೇ ಬಿದ್ದೆ. ಹಾವು ಅಷ್ಟರಲ್ಲೆ ನನ್ನ ಹತ್ತಿರ ಬಂದಿತ್ತು. ಎಲ್ಲರೂ ಕಿರುಚಿಕೊಳ್ಳುತಿದ್ದರು. ಆದರೆ ಯಾರೂ ನನ್ನನ್ನು ಎತ್ತಲು ಬರಲಿಲ್ಲ. ಆಗ ಹರ್ಷಿತ ಭಯಗೊಳ್ಳದೆ ಓಡಿ ಬಂದು ನನ್ನನ್ನು ಮೇಲೆತ್ತಿ ಎಳೆದುಕೊಂಡು ಓಡಿದಳು, ನನ್ನ ಪ್ರಾಣ ಉಳಿಸಿದಳು. ಅಂದಿನಿಂದ ನನ್ನ ಆತ್ಮೀಯ ಸ್ನೇಹಿತೆ ನನ್ನ ಪ್ರಾಣಸ್ನೇಹಿತೆಯಾದಳು .