

ಚಾಟ್ಸ್ ಸೆಂಟರ್ ಬಿಸಿನೆಸ್ ಆರಂಭಿಸಿ, ಕೈತುಂಬಾ ಗಳಿಸಿ: ಆಹಾರೋದ್ಯಮದಲ್ಲಿ ಒಳ್ಳೆಯ ಆದಾಯ ಗಳಿಸುವ ಅವಕಾಶವಿರುವ ಬಿಸಿನೆಸ್ಗಳಲ್ಲಿ ಚಾಟ್ಸ್ ಬಿಸಿನೆಸ್ ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಹೊರಗೆ ಹೋಗಿ ತಮಗಿಷ್ಟದ ತಿಂಡಿ-ತಿನಿಸು ತಿನ್ನುವ ರೂಢಿ ಹೆಚ್ಚಾಗುತ್ತಿದೆ. ಹಾಗಾಗಿ ದೊಡ್ಡ ನಗರಗಳು, ಪಟ್ಟಣಗಳಿಗಷ್ಟೇ ಸೀಮಿತವಾಗಿದ್ದ ಚಾಟ್ಸ್ ಸೆಂಟರ್ಗಳು ಈಗ ಹೋಬಳಿ, ಹಳ್ಳಿಗಳಿಗೂ ಕಾಲಿಟ್ಟಿವೆ. ಭಾರತದಲ್ಲಿ ಆಹಾರೋದ್ಯಮದ ಒಟ್ಟು ಮೌಲ್ಯ ಸುಮಾರು 2 ಲಕ್ಷ ಕೋಟಿ ರೂ. ಗುಣಮಟ್ಟ, ರುಚಿ, ಶುಚಿತ್ವ ಮತ್ತು ಗ್ರಾಹಕ ಸೇವೆ- ಇಷ್ಟು ವಿಚಾರಗಳಿಗೆ ನೀವು ಗಮನಕೊಟ್ಟರೆ ಚಾಟ್ಸ್ ಸೆಂಟರ್ ಬಿಸಿನೆಸ್ನಲ್ಲಿ ಗೆಲವು ನಿಶ್ಚಿತ. ನಿರ್ದಿಷ್ಟ ಪ್ರದೇಶಕ್ಕೆ ಅನುಗುಣವಾಗಿ 40-50 ಸಾವಿರದಿಂದ ಕೆಲ ಲಕ್ಷಗಳ ವರೆಗೆ ಹೂಡಿಕೆ ಮಾಡಿ ನೀವು ಚಾಟ್ಸ್ ಸೆಂಟರ್ ಬಿಸಿನೆಸ್ ಶುರು ಮಾಡಬಹುದು. ಬಂಡವಾಳ ಲಭ್ಯತೆಗೆ ಅನುಗುಣವಾಗಿ ತಳ್ಳುವ ಗಾಡಿ, ಫುಡ್ಟ್ರಕ್ ಮತ್ತು ಸ್ವಂತ ಅಥವಾ ಬಾಡಿಗೆ ಅಂಗಡಿಗಳಲ್ಲಿ ಚಾಟ್ಸ್ ಬಿಸಿನೆಸ್ ಆರಂಭಿಸಬಹುದು.
ಅಡಕೆ ತಟ್ಟೆ ತಯಾರಿಸಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ: ಈಗ ಅಡಕೆ ಅಷ್ಟೇ ಅಲ್ಲ, ಅಡಕೆ ಹಾಳೆಯೂ ತನ್ನ ಆರ್ಥಿಕ ಮೌಲ್ಯ ಹೆಚ್ಚಿಸಿಕೊಂಡಿದೆ. ಅಡಕೆ ಹಾಳೆಯ ಪರಿಸರ ಸ್ನೇಹಿ ಊಟದ ತಟ್ಟೆಗಳು ಭಾರತ ಸೇರಿ ಜಗತ್ತಿನಾದ್ಯಂತ ಒಲವು ಪಡೆಯುತ್ತಿವೆ. ಕರ್ನಾಟಕ, ಕೇರಳ, ತಮಿಳುನಾಡು ಸೇರಿ ದೇಶದ ನಾನಾ ಭಾಗಗಳಲ್ಲಿ ಅಡಕೆ ಹಾಳೆ ತಟ್ಟೆ ತಯಾರಿಸುವ ನೂರಾರು ಘಟಕಗಳು ನಡೆಯುತ್ತಿವೆ. ಗೊಬ್ಬರಕ್ಕಾಗಿಯೋ ಅಥವಾ ಉರುವಲಿಗಾಗಿ ಬಳಕೆಯಾಗುತ್ತಿದ್ದ ಅಡಕೆ ಹಾಳೆ, ಈಗ ತಟ್ಟೆಯ ರೂಪ ಪಡೆದು ಸಾವಿರಾರು ಮಂದಿಯ ಜೀವನಕ್ಕೆ ಆದಾಯದ ದಾರಿ ತೋರುತ್ತಿದೆ. 1 ರೂ. ಬಂಡವಾಳ ಹಾಕಿದರೆ 3-4 ರೂ. ಲಾಭ ಕೊಡುವ ಉದ್ಯಮ ಅಡಕೆ ತಟ್ಟೆ ತಯಾರಿಕೆ. ಸಣ್ಣ ಮಟ್ಟದಲ್ಲಿ ಬಿಸಿನೆಸ್ ಮಾಡಿ ಬದುಕು ಕಟ್ಟಿಕೊಳ್ಳುತ್ತೇವೆ ಎನ್ನುವವರಿಗೆ ಮತ್ತು ದೊಡ್ಡ ಮಟ್ಟದಲ್ಲಿ ತಟ್ಟೆ ಘಟಕ ಆರಂಭಿಸಿ ಹೆಚ್ಚೆಚ್ಚು ಲಾಭ ಗಳಿಸುತ್ತೇವೆ ಎನ್ನುವವರಿಗೂ ಈ ಉದ್ಯಮದಲ್ಲಿ ಅವಕಾಶಗಳಿವೆ. ಕರ್ನಾಟಕದಲ್ಲಿ ಹೆಚ್ಚು ಅಡಕೆ ಬೆಳೆಯುವುದರಿಂದ ಅಡಕೆ ಹಾಳೆ ಕೊರತೆ ಉಂಟಾಗುವುದಿಲ್ಲ. ಹೀಗಾಗಿ ಅಡಕೆ ತಟ್ಟೆ ಉದ್ಯಮ ಕಟ್ಟಿ ಆದಾಯ ಗಳಿಸಬೇಕು ಎನ್ನುವವರಿಗೆ ಒಳ್ಳೆಯ ಅವಕಾಶವಿದೆ.
ಫುಡ್ಟ್ರಕ್ ಬಿಸಿನೆಸ್ ಶುರು ಮಾಡೋದು ಹೇಗೆ?: ಫುಡ್ಟ್ರಕ್ ಬಿಸಿನೆಸ್ ಅಥವಾ ಗಾಲಿಯ ಮೇಲೆ ರೆಸ್ಟೋರೆಂಟ್ ಪರಿಕಲ್ಪನೆ ಭಾರತದಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಕಡಿಮೆ ಖರ್ಚಿನಲ್ಲಿ ಹೋಟೆಲ್ ಉದ್ಯಮ ಆರಂಭಿಸಬೇಕು ಎನ್ನುವವರಿಗೆ ಫುಡ್ಟ್ರಕ್ ಬಿಸಿನೆಸ್ ಅತ್ಯಂತ ಸೂಕ್ತವಾದದ್ದು. ನೋಡೋಕೆ ಇದೊಂದು ಸಿಂಪಲ್ ಬಿಸಿನೆಸ್ ಅಂತ ಅನಿಸಿದ್ರೂ ಇದರಲ್ಲಿ ಸಕ್ಸಸ್ ಕಾಣಬೇಕು ಅಂದ್ರೆ ಸಾಕಷ್ಟು ತಯಾರಿ ಬೇಕು. ಭಾರತದಲ್ಲಿ ಫುಡ್ ಮತ್ತು ರೆಸ್ಟೋರೆಂಟ್ ಬಿಸಿನೆಸ್ನ ಮೌಲ್ಯ ಸುಮಾರು 4 ಲಕ್ಷದ 10 ಸಾವಿರ ಕೋಟಿ ರೂ. ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಷನ್ ವರದಿ ಪ್ರಕಾರ, 2017-18ರಲ್ಲಿ ದೇಶದ ಫುಡ್ಟ್ರಕ್ ವ್ಯವಹಾರದಿಂದ ಬಂದಿರುವ ಆದಾಯ ಸುಮಾರು 21 ಸಾವಿರ ಕೋಟಿ ರೂ. ಗಲ್ಲಿಗಲ್ಲಿಗಳಲ್ಲಿ ರುಚಿ-ಶುಚಿಯಾದ ಆಹಾರವನ್ನು ಕೈಗೆಟುವ ದರಗಳಲ್ಲಿ ನೀಡುತ್ತಿರುವ ಹೆಗ್ಗಳಿಗೆ ಈ ಫುಡ್ಟ್ರಕ್ಗಳದ್ದು. ಒಂದು ಆಟೋ, ಕಾರ್, ಟೆಂಪೋ, ವ್ಯಾನ್ ಇದ್ದರೆ ಸಾಕು ಅದನ್ನು ಆಲ್ಟ್ರೇಷನ್ ಮಾಡಿಸಿ ಅಡುಗೆ ತಯಾರಿಸಲು ಬೇಕಾದ ಸಲಕರಣೆ ಅಳವಡಿಸಿಕೊಂಡು ಫುಡ್ಟ್ರಕ್ ಬಿಸಿನೆಸ್ ಅರಂಭಿಸಬಹುದು. ಆರಂಭಿಕ 50 ಸಾವಿರ ರೂ. ಬಂಡವಾಳದಿಂದ ಹಿಡಿದು 1 ರಿಂದ 10 ಲಕ್ಷ ರೂ. ವರೆಗೆ ಖರ್ಚು ಮಾಡಿ ಫುಡ್ಟ್ರಕ್ ವಿನ್ಯಾಸ ಮಾಡಿಸಿಕೊಳ್ಳಬಹುದು. ಫುಡ್ಟ್ರಕ್ಗೆ ಎಷ್ಟು ವೆಚ್ಚ ಮಾಡಬೇಕು ಎನ್ನುವುದನ್ನು ನೀವು ಎಷ್ಟು ಬಂಡವಾಳ ಹಾಕಲು ಶಕ್ತರಾಗಿದ್ದೀರಿ ಎನ್ನುವ ಆಧಾರದಲ್ಲಿ ನಿರ್ಧರಿಸಬೇಕಾಗುತ್ತದೆ. ಹಳೆಯ ವಾಹನ ಖರೀದಿಸಿ ಬಾಡಿ ಬಿಲ್ಡಿಂಗ್ ಮಾಡಿಸಿಕೊಂಡರೆ ಖರ್ಚು ಕಡಿಮೆ. ಹೋಟೆಲ್ ಆರಂಭಿಸಲು ಬೇಕಿರುವ ಬಂಡವಾಳದ ಲೆಕ್ಕಾಚಾರ ಮಾಡಿದರೆ ಫುಡ್ಟ್ರಕ್ ಚೀಪ್ ಆಂಡ್ ಬೆಸ್ಟ್.
ಮೇಕಪ್ ಆರ್ಟಿಸ್ಟ್, ಆಯಿಲ್ ಮಿಲ್ ಬಿಸಿನೆಸ್ ಕಾರ್ಯಾಗಾರ: ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್ ವತಿಯಿಂದ ಮೇಕಪ್ ಆರ್ಟಿಸ್ಟ್ ಮತ್ತು ಗಾಣದ ಎಣ್ಣೆ (ಆಯಿಲ್ ಮಿಲ್) ಬಿಸಿನೆಸ್ ತರಬೇತಿ ಜತೆ ಉದ್ಯಮ ಮಾರ್ಗದರ್ಶನ ಕಾರ್ಯಾಗಾರ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂರ್ಪಸಿ - 7975465873
ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಹಲವು ಕೋರ್ಸ್: ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಹಣಕಾಸು ನಿರ್ವಹಣೆ , ಕೃಷಿ ಮತ್ತು ಬಿಸಿನೆಸ್ಗೆ ಸಂಬಂಧಿಸಿದ 500 ಕ್ಕೂ ಹೆಚ್ಚು ಕೋರ್ಸ್ಗಳಿವೆ. ನಿರ್ದಿಷ್ಟ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿರುವವರೇ ಕೋರ್ಸ್ನಲ್ಲಿ ಮಾರ್ಗದರ್ಶಕರಾಗಿದ್ದಾರೆ. ಕಡಿಮೆ ಬಂಡವಾಳದಲ್ಲಿ ಮಾಡಬಹುದಾದ ಲಾಭದಾಯಕ ಬಿಸಿನೆಸ್ಗಳು, ಕಡಿಮೆ ಕೃಷಿ ಭೂಮಿಯಲ್ಲಿ ಹೆಚ್ಚು ಲಾಭ ಗಳಿಸೋದು ಹೇಗೆ, ನಮ್ಮ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳೋದು ಹೇಗೆ ಎನ್ನುವ ಬಗ್ಗೆ ಕೋರ್ಸ್ನಲ್ಲಿ ವಿಸõತವಾದ ಮಾಹಿತಿ ಇದೆ. ಹಾಗಾದ್ರೆ ಇನ್ನೇಕೆ ತಡ ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ಲೋಡ್ ಮಾಡಿ, ನಿಮ್ಮ ಬದುಕಿನ ಆದಾಯದ ದಾರಿ ಕಂಡುಕೊಂಡು ಜೀವನದಲ್ಲಿ ಯಶಸ್ವಿಯಾಗಿ.