

ಎಲ್ಲವೂ ಯಾವುದೋ ಒಂದು ವಿಚಿತ್ರವಾದ ಕರ್ಮದಿಂದಾಗಿ ನಡೆಯುತ್ತದೆ. ನಿಮ್ಮ ಕಣ್ಣುಗಳ ದೃಷ್ಟಿಯನ್ನು ಮೇಲಕ್ಕೆತ್ತಿ ಈ ವಲಯವನ್ನೂ ನೋಡಿ. ಒಂದು ಸುಂದರವಾದ ಗಾದೆಯು, ‘ಜಗತ್ತಿನಲ್ಲಿ ಬೇಕಾದ ಎಲ್ಲ ಸಂಪತ್ತೂ ಇದೆ. ಆದರೆ ಯಾರಿಗೆ ಕರ್ಮವಿಲ್ಲವೊ ಅವರಿಗೆ ಅದು ಸಿಗುವುದಿಲ್ಲ’ ಎನ್ನುತ್ತದೆ.
ಭಗವಾನ್ ಕೃಷ್ಣನನ್ನು ನೋಡಿ ಯಾರೋ, ಹೇಗಿದ್ದರೂ ಯುದ್ಧ ಆಗಿಯೇ ತೀರುತ್ತದೆ ಎಂದು ನಿನಗೆ ಗೊತ್ತಿದ್ದರೆ, ಶಾಂತಿ ಸಂಧಾನಕ್ಕಾಗಿ ಮೂರು ಸಲ ಏಕೆ ಹೋದೆ? ನಿನ್ನ ಎಲ್ಲಾ ಶಾಂತಿ ಸಂಧಾನಗಳೂ ವಿಫಲವಾದವು. ಹಾಗಿದ್ದರೂ ಏಕೆ ಹೋದೆ? ಎಂದು ಕೇಳಿದರು. ಇದು ಬಹಳ ಸಮರ್ಪಕವಾದ ಪ್ರಶ್ನೆ.
ಭಗವಾನ್ ಕೃಷ್ಣನು ಶಾಂತಿ ಸಂಧಾನಕ್ಕಾಗಿ ಹೋಗದೆ ಇದ್ದಿದ್ದರೆ, ಮತ್ತೊಂದು ಪ್ರಶ್ನೆ ಏಳುತ್ತಿತ್ತು. ನೀನು ಶಾಂತಿಸ ಸಂಧಾನವನ್ನು ಮಾಡಬಹುದಿತ್ತಲ್ಲವೆ? ಹಾಗೇಕೆ ಮಾಡಲಿಲ್ಲ? ಎಂದು ಆತನನ್ನು ಕೇಳುತ್ತಿದ್ದರು. ನಿಮ್ಮ ಕರ್ಮದ ಪ್ರತಿಯು ನಿಮ್ಮ ಕರ್ತವ್ಯವಿದೆ. ನೀವೇನು ಮಾಡಬೇಕೊ ಅದನ್ನು ಮಾಡಿ! ಒಂದು ವೇಳೆ ಶಾಂತಿ ಸಂಧಾನ ಸಫಲವಾಗಿದ್ದರೆ ಇಡೀ ಮಹಾಭಾರತದ ಯುದ್ಧವೇ ಆಗುತ್ತಿರಲಿಲ್ಲ. ಭಗವದ್ಗೀತೆಯು ಅಸ್ತಿತ್ವಕ್ಕೇ ಬರುತ್ತಿರಲಿಲ್ಲ!
ಆದ್ದರಿಂದ ಭಗವದ್ಗೀತೆ ಬರಲೇ ಬೇಕಿತ್ತು ಮತ್ತು ಯುದ್ಧ ನಡೆಯಲೇಬೇಕಿತ್ತು. ಇದನ್ನು ತಿಳಿದೂ ಕೃಷ್ಣನೂ ಶಾಂತಿಸಂಧಾನಕ್ಕೆ ಹೊರಟನು. ಇದೇಕೆಂದರೆ ಅದು ನಮ್ಮ ಧರ್ಮ, ಸ್ವಭಾವ. ನಮ್ಮ ಪ್ರಯತ್ನವನ್ನು ಮಾಡುತ್ತಿರಲೇಬೇಕು ಮತ್ತು ಅದರ ಪರಿಣಾಮದ ಬಗ್ಗೆ ಅಥವಾ ಫಲಿತಾಂಶದ ಬಗ್ಗೆ ಮೋಹವಿರಬಾರದು.
ಇದೆಲ್ಲವೂ ಬಹಳ ಸೂಕ್ಷ್ಮವಾದ ವಿಷಯ, ಏಕೆಂದರೆ ಮನಸ್ಸು ಒಂದಲ್ಲ ಒಂದು ರೀತಿಯಲ್ಲಿ ಮಾಯೆಯೊಳಗೆ ಸಿಲುಕಿಕೊಳ್ಳುತ್ತದೆ. ನಿಮ್ಮ ತೋಟದಲ್ಲಿ ಏನಾದರೂ ಬೆಳೆದರೆ ಅದರೊಡನೆ ಕಳೆಗಿಡಗಳೂ ಬೆಳೆಯುತ್ತವೆ. ಕಳೆಗಿಡಗಳನ್ನು ಕಿತ್ತೆಸೆಯುತ್ತೀರಿ. ಮತ್ತೆ ಕಳೆಗಿಡಗಳು ಬೆಳೆದರೆ, ಓ, ಈಗ ತಾನೆ ತೋಟವನ್ನು ಶುದ್ಧ ಮಾಡಿದೆ. ಮತ್ತೆ ಕಳೆಗಿಡಗಳು ಬೆಳೇದಿವೆಯಲ್ಲ! ಎನ್ನಲು ಸಾಧ್ಯವಿಲ್ಲ. ಇದು ಪ್ರಕೃತಿ. ಅಶುದ್ಧವಾಗುವುದು ದೇಹದ ಸ್ವಭಾವ. ಸ್ನಾನ ಮಾಡಿದ ನಂತರ, ಒಂದು ವರ್ಷಕ್ಕಾಗಿ ಸ್ನಾನ ಮಾಡಿದೆ! ಎನ್ನಲು ಸಾಧ್ಯವಿಲ್ಲ. ಮತ್ತೆ ಮತ್ತೆ ಸ್ನಾನ ಮಾಡಬೇಕಾಗುತ್ತದೆ.
ಅದೇ ರೀತಿಯಾಗಿ ಮನಸ್ಸಿಗೆ ಮತ್ತೆ ಮತ್ತೆ ಜ್ಞಾನವನ್ನು ತರುತ್ತಿರಬೇಕು. ಜ್ಞಾನದ ನಾಲ್ಕು ಸ್ತಂಭಗಳಿಂದ ಮನಸ್ಸು ಸುಲಭವಾಗಿ ಜಾರಿ ಹೋಗಿಬಿಡುತ್ತದೆ. ವಿವೇಚನೆ, ವೈರಾಗ್ಯ, ಸ್ವ-ಹತೋಟಿ, ನಿಮ್ಮ ಬಳಿ ಇರುವುದನ್ನು ಸನ್ಮಾನಿಸುವುದು, ಇಲ್ಲದೆ ಇರುವುದಕ್ಕಾಗಿ ದುಃಖಿಸದಿರುವುದು, ನಂತರ ಮೋಕ್ಷಕ್ಕಾಗಿ ಬಯಕೆ! - ಇವು ಜ್ಞಾನದ ನಾಲ್ಕು ಸ್ತಂಭಗಳು.
ಜ್ಞಾನದಿಂದ ಜಾರಿ ಹೋದರೆ, ಅದುವೂ ಒಂದು ಹಂತವೇ. ಇದೆಲ್ಲವನ್ನು ತಿಳಿದೂ ಮಾಯೆಯಲ್ಲಿ ಮತ್ತೆ ಸಿಲುಕಿಕೊಂಡರೂ, ಮಾಯೆಯಲ್ಲಿ ಸಿಲುಕಿಕೊಂಡಿದ್ದಕ್ಕಾಗಿ ದುಃಖಿಸಬೇಡಿ. ಅದುವೂ ಪ್ರಕೃತಿಯ ಒಂದು ಭಾಗವೆ. ‘ಓ ನಾನು ಜ್ಞಾನವನ್ನು ಪಾಲಿಸಲಿಲ್ಲ ಅಥವಾ ಅವರೇ ತಪ್ಪಾಗಿರಬೇಕು. ಅದರಿಂದ ಏನೂ ಆಗುತ್ತಿಲ್ಲ ಅಥವಾ ಎಲ್ಲಾ ತಪ್ಪೂ ನನ್ನದೇ ಆಗಿರಬೇಕು’ ಎನ್ನಬೇಡಿ. ಏಕೆಂದರೆ ಇರುವುದೆಲ್ಲವೂ ವರ್ತಮಾನದ ಕ್ಷಣ! ಈ ಕ್ಷಣದಲ್ಲಿ ಅಹಿತಕರವಾದ ವಿಷಯಗಳು ಆಗುತ್ತಿರಲಿ ಅಥವಾ ಹಿತಕರವಾದ ವಿಷಯಗಳು ಆಗುತ್ತಿರಲಿ, ನಾನು ಅದಕ್ಕೆ ಸಾಕ್ಷಿ. ನನ್ನ ಮನಸ್ಸು, ಇದರಲ್ಲಿ ಸಿಲುಕಿ ಕೊಳ್ಳುತ್ತಿದೆ. ಅದುವೂ ನಡೆಯುತ್ತಿರುವ ಎಲ್ಲದರ ಒಂದು ಭಾಗ. ನಾನು ಇದಕ್ಕೂ ಸಾಕ್ಷಿ ಎಂದು ಹೇಳಿ, ಪರಿಸ್ಥಿತಿಯಿಂದ ಮೇಲೇಳಿ!
(ಪ್ರತಿಕ್ರಿಯಿಸಿ: vvsudina@gmail.com)