ಫೋನ್​ನಲ್ಲೇ ನಡೆಯುತ್ತಿದೆ ಸ್ಕ್ರಿಪ್ಟಿಂಗ್ ಕೆಲಸ, ಲಾಕ್​ಡೌನ್​ ಮುಗೀತಿದ್ದಂತೆ ಶೂಟಿಂಗ್​...!

Milana Nagaraj 22 april 20
Published on

ಬೆಂಗಳೂರು: ‘ಲವ್ ಮಾಕ್​ಟೇಲ್’ ಸಿನಿಮಾಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಇತ್ತೀಚೆಗಷ್ಟೇ ಅದರ ಸೀಕ್ವೆಲ್ ಮಾಡುವುದಾಗಿ ನಟ-ನಿರ್ದೇಶಕ ‘ಡಾರ್ಲಿಂಗ್’ ಕೃಷ್ಣ ಹೇಳಿಕೊಂಡಿದ್ದರು. ಇದೀಗ ಆ ಸೀಕ್ವೆಲ್ ಬಗ್ಗೆ ಒಂದಷ್ಟು ಅಪ್​ಡೇಟ್ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಲಾಕ್​ಡೌನ್ ಮುಗಿಯುತ್ತಿದ್ದಂತೆ ಸೀಕ್ವೆಲ್ ಶೂಟಿಂಗ್​ಗೆ ಚಾಲನೆ ಸಿಗಲಿದೆಯಂತೆ.

ಹೌದು, ಸದ್ಯ ಹೊಳೆದ ಕಥೆಗೆ ಚಿತ್ರಕಥೆ ಬರೆಯುವುದರಲ್ಲಿ ಕೃಷ್ಣ ಮತ್ತು ಮಿಲನಾ ಬಿಜಿಯಾಗಿದ್ದಾರೆ. ಈಗಾಗಲೇ ಸ್ಕ್ರಿಪ್ಟಿಂಗ್ ಒಂದು ಹಂತಕ್ಕೆ ಬಂದಿದ್ದು, ಬದಲಾವಣೆಗೆ ಒಗ್ಗಿಕೊಳ್ಳುತ್ತಿದೆ. ಮೊದಲ ಭಾಗಕ್ಕಿಂತ ರೋಚಕವಾದ ಕಥೆಯನ್ನು ಸೀಕ್ವೆಲ್​ನಲ್ಲಿ ಹೇಳಬೇಕೆಂದುಕೊಂಡಿರುವ ನಿರ್ದೇಶಕರು, ಲಾಕ್​ಡೌನ್​ನಲ್ಲಿ ಎಲ್ಲ ಕೆಲಸಗಳನ್ನು ಬದಿಗೊತ್ತಿ, ಸೀಕ್ವೆಲ್​ಗಾಗಿಯೇ ಸಮಯವನ್ನು ಮುಡಿಪಾಗಿಟ್ಟಿದ್ದಾರೆ.

ವಿಶೇಷ ಏನೆಂದರೆ, ‘ಲವ್ ಮಾಕ್​ಟೇಲ್’ ಸ್ಕ್ರಿಪ್ಟಿಂಗ್​ನಲ್ಲಿ ಕೃಷ್ಣ ಮತ್ತು ಮಿಲನಾ ಇಬ್ಬರೂ ಜತೆಯಾಗಿ ಕೆಲಸ ಮಾಡಿದ್ದರು. ಅದೀಗ ಸೀಕ್ವೆಲ್​ನಲ್ಲಿ ಮುಂದುವರಿದಿದ್ದು, ಫೋನ್​ನಲ್ಲೇ ಚರ್ಚೆಗಳು ನಡೆಯುತ್ತಿವೆ. ಅಂದರೆ, ಸದ್ಯ ಕೃಷ್ಣ ಮೈಸೂರಿನಲ್ಲಿದ್ದಾರೆ. ಇತ್ತ ಮಿಲನಾ ಹಾಸನದ ಮನೆಯಲ್ಲಿದ್ದಾರೆ. ಹಾಗಾಗಿ ನಿತ್ಯ ಫೋನ್​ನಲ್ಲೇ ಗಂಟೆಗಟ್ಟಲೆ ಮಾತನಾಡುತ್ತ ಸ್ಕ್ರಿಪ್ಟಿಂಗ್ ಬಗ್ಗೆ ಚರ್ಚೆ ಮಾಡುತ್ತಾರಂತೆ. ಆದರೆ, ನಿರ್ವಣದಲ್ಲಿ ಈ ಸಲ ಈ ಜೋಡಿ ಹಣ ಹಾಕುತ್ತೋ ಇಲ್ಲವೋ ಎಂಬುದಿನ್ನೂ ಅಂತಿಮ ಆಗಿಲ್ಲ. ಏಕೆಂದರೆ, ಸೀಕ್ವೆಲ್​ಗೆ ಬೇರೆ ನಿರ್ವಪಕರೊಬ್ಬರು ಹಣ ಹೂಡಲು ಮುಂದೆ ಬಂದಿದ್ದು, ಲಾಕ್​ಡೌನ್ ಮುಗಿಯುತ್ತಿದ್ದಂತೆ ಶೂಟಿಂಗ್ ಶುರುವಾಗಲಿದೆ.

ಈಗಾಗಲೇ ಸ್ಕ್ರಿಪ್ಟಿಂಗ್ ಒಂದು ಹಂತಕ್ಕೆ ಬಂದಿದೆ. ಲಾಕ್​ಡೌನ್ ಮುಗಿಯುತ್ತಿದ್ದಂತೆ ಶೂಟಿಂಗ್ ಶುರು ಮಾಡುವ ಪ್ಲಾನ್ ಇದೆ. ನಿರ್ವಣದಲ್ಲೂ ಬೇರೆ ನಿರ್ವಪಕರು ಕೈ ಜೋಡಿಸಲು ಮುಂದೆ ಬಂದಿದ್ದಾರೆ. ಶೀಘ್ರದಲ್ಲಿಯೇ ಎಲ್ಲವನ್ನೂ ಅಧಿಕೃತವಾಗಿ ಘೊಷಣೆ ಮಾಡಲಿದ್ದೇವೆ. | ಮಿಲನಾ ನಾಗರಾಜ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net