ಅಪ್ಪನೆಂಬ ಅದ್ಭುತ| ನನಗಾಗಿ ಎಲ್ಲಾ ಫಂಕ್ಷನ್ ಕ್ಯಾನ್ಸಲ್ ಮಾಡ್ತಿದ್ರು!

Sumanyu S Kopp
Published on

ಮಕ್ಕಳ ಪಾಲಿನ ಮೊದಲ ಹೀರೋ ಎಂದರೆ ಅಪ್ಪನೇ. ಬದುಕಿನ ಪ್ರತಿ ಹಂತದಲ್ಲಿಯೂ, ಹೆಜ್ಜೆ ಹೆಜ್ಜೆಗೂ ಮಕ್ಕಳನ್ನು ಕಣ್​ರೆಪ್ಪೆಯಂತೆ ಕಾಯುವ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ಸಲುವಾಗಿ ಬಂದಿದೆ ಫಾದರ್ಸ್ ಡೇ. ಅಪ್ಪನ ಜತೆಗಿನ ನೆನಪುಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ್ದ ಕರೆಗೆ 11 ಸಾವಿರಕ್ಕೂ ಅಧಿಕ ಪತ್ರಗಳು ನಮಗೆ ಬಂದಿವೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

ಅತ್ಯಂತ ಹಟಮಾರಿಯಾದ ನನ್ನನ್ನು ಹಿಡಿಯುವುದೇ ಹರಸಾಹಸವಾಗಿತ್ತು. ಒಮ್ಮೆ, ಚಿತ್ರ ಮಂದಿರಕ್ಕೆ ಹೋದಾಗ ನಾನು ಅಳಲು ಪ್ರಾರಂಭಿಸಿದಾಗ ಸಿನಿಮಾ ನೋಡದೇ ಹೊರಗೆ ಕರೆದುಕೊಂಡು ಹೋಗಿ ಆಟ ಆಡಿಸುತ್ತಾ ಕೂತರು. ನನ್ನ ಹಟದ ಸಲುವಾಗಿಯೇ ಯಾವ ಸಮಾರಂಭಗಳಿಗೂ ಹೆಚ್ಚಾಗಿ ಹೋಗುತ್ತಿರಲಿಲ್ಲ. ಆಟೋದಲ್ಲಿ ಕೂರುವ ಅತಿ ಹುಚ್ಚು ಆಗ ನನಗೆ. ರಸ್ತೆಯಲ್ಲಿ ನಡೆಯುತ್ತಾ ಆಟೋ ನೋಡಿ ಅಲ್ಲೇ ಮಲಗಿ ಅಳುತ್ತಿದ್ದೆ. ಒಂದು ಬಾರಿ ಪಕ್ಕದ ರಸ್ತೆಯಿಂದಲೂ ಮನೆಯವರೆಗೆ ಆಟೋದಲ್ಲಿ ಬಂದಿದ್ದುಂಟು. ಆಗಿದ್ದ ಕಷ್ಟದ ಪರಿಸ್ಥಿತಿಯಲ್ಲಿಯೂ ನನ್ನ ಹಟಕ್ಕೆ ಕೋಪ ಮಾಡಿಕೊಳ್ಳದೇ ರಾಜಕುಮಾರನಂತೆ ಬೆಳೆಸಿದರು. ಆಗಸದಿ ಹೊಳೆಯುವ ಚಂದಮಾಮ ಏಕೆ ನನಗೆ? ಮಿನುಗು ತಾರೆಯ ರೀತಿಯಲ್ಲಿರುವ ನೀನೇ ನನ್ನ ಸರ್ವಸ್ವ... | ಸುಮನ್ಯ ಎಸ್.ಕೊಪ್ಪ ಮೈಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net