ರಂಗಪಂಚಮಿಯ ದಿನ ಜನಿಸಿದವರು ನನ್ನ ಅಪ್ಪ ರಂಗಣ್ಣಾ . ಅವರ ಹೆಸರು, ಹುಟ್ಟಿದ ದಿನ, ಅವರ ಜೀವನ ಎಲ್ಲವೂ ರಂಗುರಂಗೇ. ಅಂಥ ಕಲರ್ಫುಲ್ ವ್ಯಕ್ತಿತ್ವ ಅವರದ್ದು. ಅಪ್ಪ ಎಂಬ ಎರಡಕ್ಷರಕ್ಕೆ ನೂರಾನೆ ಬಲ ಇದೆಯಲ್ಲ, ಅದಕ್ಕೆ ಇರಬೇಕು ಅಪ್ಪ ಬೆನ್ನಿಗಿದ್ದಾರೆ ಎಂಬ ಬೆಚ್ಚನೆ ಭಾವನೆಯ ಸಾಕು ಜೀವನದಲ್ಲಿ ಏನನ್ನಾದರೂ ಎದುರಿಸುವ ಶಕ್ತಿ ಕೊಡುತ್ತದೆ. ಇಂದು ನನ್ನ ಸಾಧನೆ ಹಾಗೂ ವ್ಯಾಪಾರ ಸಹ ಅವರ ದೂರದೃಷ್ಟಿ ಹಾಗೂ ಪರಿಶ್ರಮದ ಫಲವೇ. ಅವರ ಜೀವನೋತ್ಸಾಹ, ಹಾಸ್ಯಪ್ರಜ್ಞೆ ಹಾಗೂ ಎಲ್ಲವನ್ನೂ ತೂಗಿಸಿಕೊಂಡು ಹೋಗುವ ತಾಕತ್ತು ಶೇ.10ರಷ್ಟಾದರೂ ನನಗೆ ಬಂದರೂ ಸಾಕು ಜೀವನ ಸಾರ್ಥಕ. ಅವರ ಧೀಮಂತ ವ್ಯಕ್ತಿತ್ವದ ಮುಂದೆ ನಾನೆಷ್ಟು ಕುಬ್ಜ. ಈ ದಿನ ದೇವರು ಪ್ರತ್ಯಕ್ಷವಾಗಿ ಏನಾದರೂ ವರ ಬೇಡಿಕೋ ಅಂದರೆ ಕೇಳುವುದೊಂದೇ ತಂದೆಯೊಂದಿಗಿನ ಈ ಬೆಚ್ಚಗಿನ ಅಪ್ಪುಗೆ ಹಾಗೂ ನನ್ನ ಜತೆ ಸದಾ ಕಾಲ ಹೀಗೆ ನಗುತ್ತಾ ಇರಲಿ ಎಂದು. | ಸಂಜೀವ ನಾಡಗೀರ ಹುಬ್ಬಳ್ಳಿ