ಅಪ್ಪನೆಂಬ ಅದ್ಭುತ| ಅಪ್ಪನೇ ಅಮ್ಮನಾದ

padmini bhat
Published on

ಮಕ್ಕಳ ಪಾಲಿನ ಮೊದಲ ಹೀರೋ ಎಂದರೆ ಅಪ್ಪನೇ. ಬದುಕಿನ ಪ್ರತಿ ಹಂತದಲ್ಲಿಯೂ, ಹೆಜ್ಜೆ ಹೆಜ್ಜೆಗೂ ಮಕ್ಕಳನ್ನು ಕಣ್​ರೆಪ್ಪೆಯಂತೆ ಕಾಯುವ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ಸಲುವಾಗಿ ಬಂದಿದೆ ಫಾದರ್ಸ್ ಡೇ. ಅಪ್ಪನ ಜತೆಗಿನ ನೆನಪುಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ್ದ ಕರೆಗೆ 11 ಸಾವಿರಕ್ಕೂ ಅಧಿಕ ಪತ್ರಗಳು ನಮಗೆ ಬಂದಿವೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

ಶಿಕ್ಷಕಿಯಾಗಿದ್ದ ನನ್ನಮ್ಮ ನಾನು ಮೂರು ತಿಂಗಳ ಮಗುವಿರುವಾಗಲೇ ಅಪ್ಪನ ಕೈಗೆ ನನ್ನನ್ನಿತ್ತು ಕರ್ತವ್ಯಕ್ಕೆ ಹಾಜರಾಗಬೇಕಾಯಿತು. ಆಗ ಅಪ್ಪನೇ ನನಗೆ ಅಮ್ಮ. ಸಂಜೆ ಅಮ್ಮ ಬರುವವರೆಗೂ ಅಪ್ಪ ಅರೆಕ್ಷಣ ನನ್ನನ್ನು ಬಿಟ್ಟಿರುತ್ತಿರಲಿಲ್ಲ. ತೋಟದ ಕೆಲಸ ಮಾಡಿಸುತ್ತಿರುವಾಗಲೂ ನನ್ನನ್ನು ಎತ್ತಿಕೊಂಡೇ ಹೋಗುತ್ತಿದ್ದರು. ಕಾಲಿನ ಮೇಲೆ ಮಲಗಿಸಿಕೊಂಡು ಚಮಚದಲ್ಲಿ ಹಾಲು ಕುಡಿಸುತ್ತಿದ್ದರು. ಅದಕ್ಕೆ ಬುದ್ಧಿ ಬಂದಾಗಿನಿಂದಲೂ ಅಪ್ಪನೇ ಜತೆಗಾರ. ಕೈ ಹಿಡಿದು ಹೆಜ್ಜೆಯಿಡಲು ಹೇಳಿಕೊಟ್ಟವರು ನನ್ನಪ್ಪ, ನನ್ನಲ್ಲಿ ಧೈರ್ಯ ತುಂಬಿ, ಆತ್ಮವಿಶ್ವಾಸ ಬೆಳೆಸಿ ಬೈಕು ಕಾರು ಕಲಿಸಿದ ನನ್ನ ಹೀರೋ ಅವರು. ಸಾಮಾನ್ಯವಾಗಿ ಎಲ್ಲರಿಗೂ ಅಪ್ಪ ಅಂದರೆ ಭಯ, ಅಮ್ಮ ಎಂದರೆ ಮುದ್ದು. ಆದರೆ ನನಗೆ ಅಪ್ಪ ಅಂದರೆ ಮುದ್ದು, ಅಮ್ಮ ಅಂದರೆ ಭಯ. | ಪದ್ಮಿನಿ ಭಟ್ ಬೆಳ್ವೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net