ಅಪ್ಪನೆಂಬ ಅದ್ಭುತ| ಬಯಸಿದಾಗ ಅಪ್ಪನ ಜತೆ ತಿಂಡಿಯೂ ಹಾಜರ್!

dhanushree
Published on

ಮಕ್ಕಳ ಪಾಲಿನ ಮೊದಲ ಹೀರೋ ಎಂದರೆ ಅಪ್ಪನೇ. ಬದುಕಿನ ಪ್ರತಿ ಹಂತದಲ್ಲಿಯೂ, ಹೆಜ್ಜೆ ಹೆಜ್ಜೆಗೂ ಮಕ್ಕಳನ್ನು ಕಣ್​ರೆಪ್ಪೆಯಂತೆ ಕಾಯುವ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ಸಲುವಾಗಿ ಬಂದಿದೆ ಫಾದರ್ಸ್ ಡೇ. ಅಪ್ಪನ ಜತೆಗಿನ ನೆನಪುಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ್ದ ಕರೆಗೆ 11 ಸಾವಿರಕ್ಕೂ ಅಧಿಕ ಪತ್ರಗಳು ನಮಗೆ ಬಂದಿವೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

ಅದೊಂದು ದಿನ ಮಗಳೇಕೋ ಅಳುತ್ತಿದ್ದಾಳೆಂದು ಅಮ್ಮ ತಿಳಿಸುತ್ತಿದ್ದಂತೆ ಆಫೀಸಿಗೆ ರಜೆ ಹಾಕಿ ತಕ್ಷಣವೇ ಮನೆಗೆ ಹೊರಟು ಬಂದವರು ನನ್ನಪ್ಪ. ರಾತ್ರಿಯೆಲ್ಲಾ ಓದಿದ್ದರೂ ಪರೀಕ್ಷೆಗೆ ಹೆದರಿ ಹೋಗೋಲ್ಲವೆಂದು ಅತ್ತಾಗ ನೀನು ಫೇಲ್ ಆಗಲ್ಲ ಆದರೂ ಚಿಂತೆಯಿಲ್ಲ ನಿನ್ನ ಪ್ರಯತ್ನ ನೀನು ಕೊಡಬೇಕು ಎಂದು ಪ್ರೋತ್ಸಾಹ ತುಂಬಿದವರು. ನನಗೆ ಏನು ಓದಲು ಇಷ್ಟವೋ ಅದೇ ಓದಲು ಹೇಳಿ ನನ್ನ ನಿರ್ಧಾರದ ಮೇಲೆ ನಂಬಿಕೆಯಿಟ್ಟರು. ಮಗಳ ಧ್ವನಿ ರಾತ್ರಿಯ ಕರೆಯಲ್ಲಿ ಸರಿಯಿಲ್ಲವೆಂದು ತಿಳಿದು ಬೆಳಗ್ಗೆ 3 ಗಂಟೆಗೇ ದೂರದ ಹಾಸ್ಟೆಲ್ ತಲುಪಿದರು. ಅಮ್ಮ ಮನೆಯಲ್ಲಿ ಇಲ್ಲದಿದ್ದಾಗ ಹೆಣ್ಣುಮಗಳು ನೀನು ಹೋಗು ಅಡುಗೆ ಮಾಡು ಅನ್ನದೇ ಅವರೇ ರುಚಿ ರುಚಿಯಾಗಿ ಅಡುಗೆ ಮಾಡಿ ಬಡಿಸಿದವರು. ತಿಂಡಿ ತಿನ್ನಬೇಕೆನ್ನಿಸಿದಾಗ ನಾವು ಕೇಳದೆಯೇ ಅಪ್ಪನ ಜತೆ ತಿಂಡಿಯೂ ಮನೆಗೆ ಬರುತ್ತದೆ. ಅದು ಹೇಗೆಂದು ಮಾತ್ರ ಇದುವರೆಗೂ ತಿಳಿಯಲಾಗಲಿಲ್ಲ. ಅದು ನನ್ನಪ್ಪನ ಸೂಪರ್ ಶಕ್ತಿಯೇ ಇರಬೇಕು. | ಧನುಶ್ರೀ ಎನ್. ಮೇಘಶ್ರೀ ಎನ್. ಚಿಕ್ಕಬಿದರಕಲ್ಲು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net