ಅಪ್ಪನೆಂಬ ಅದ್ಭುತ| ದೇಶಸೇವೆಯ ಬಳುವಳಿ

jaiprakash
Published on

ಮಕ್ಕಳ ಪಾಲಿನ ಮೊದಲ ಹೀರೋ ಎಂದರೆ ಅಪ್ಪನೇ. ಬದುಕಿನ ಪ್ರತಿ ಹಂತದಲ್ಲಿಯೂ, ಹೆಜ್ಜೆ ಹೆಜ್ಜೆಗೂ ಮಕ್ಕಳನ್ನು ಕಣ್​ರೆಪ್ಪೆಯಂತೆ ಕಾಯುವ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ಸಲುವಾಗಿ ಬಂದಿದೆ ಫಾದರ್ಸ್ ಡೇ. ಅಪ್ಪನ ಜತೆಗಿನ ನೆನಪುಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ್ದ ಕರೆಗೆ 11 ಸಾವಿರಕ್ಕೂ ಅಧಿಕ ಪತ್ರಗಳು ನಮಗೆ ಬಂದಿವೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

ನನ್ನ ತಂದೆ ಧೂಳಪ್ಪ ಶಿಂಧೆ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ. ದೇಶಪ್ರೇಮ ತುಂಬಿದೆ ಆ ಹೃದಯದಲ್ಲಿ. ದೇಶಕ್ಕಾಗಿ ತನು-ಮನವನ್ನು ಅರ್ಪಿಸಿರುವ ತಂದೆಯವರ ನೆರಳಿನಲ್ಲಿ ಬೆಳೆದ ನಾನು ಕಿಂಚಿತ್ತಾದರೂ ದೇಶಪ್ರೇಮ ಮೆರೆಯಬೇಕಲ್ಲವೇ? ಅವರ ಶಿಸ್ತುಬದ್ಧ ಜೀವನ ನನ್ನ ಮೇಲೆ ತುಂಬಾ ಪ್ರಭಾವ ಬೀರಿದೆ. ಕರೊನಾ ವೈರಸ್​ನ ಈ ಬಿಕ್ಕಟ್ಟಿನ ಸಮಯದಲ್ಲಿ ದೇಶಸೇವೆಗೆ ನನಗೊಂದು ಅವಕಾಶ ಸಿಕ್ಕಿದ್ದು, ಕರೊನಾ ವಾರಿಯರ್ ಆಗಿ ಶುಶ್ರೂಷಕ ಸೇವೆ ಸಲ್ಲಿಸುತ್ತಿದ್ದೇನೆ. | ಜೈಪ್ರಕಾಶ ವಿದ್ಯಾನಗರ ಬೀದರ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net