ಅಪ್ಪನೆಂಬ ಅದ್ಭುತ| ಮುಳ್ಳಿನಿಂದ ಪ್ಯಾಂಟ್ ಹರಿದೋಯ್ತು

anwesha
Published on

ಮಕ್ಕಳ ಪಾಲಿನ ಮೊದಲ ಹೀರೋ ಎಂದರೆ ಅಪ್ಪನೇ. ಬದುಕಿನ ಪ್ರತಿ ಹಂತದಲ್ಲಿಯೂ, ಹೆಜ್ಜೆ ಹೆಜ್ಜೆಗೂ ಮಕ್ಕಳನ್ನು ಕಣ್​ರೆಪ್ಪೆಯಂತೆ ಕಾಯುವ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ಸಲುವಾಗಿ ಬಂದಿದೆ ಫಾದರ್ಸ್ ಡೇ. ಅಪ್ಪನ ಜತೆಗಿನ ನೆನಪುಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ್ದ ಕರೆಗೆ 11 ಸಾವಿರಕ್ಕೂ ಅಧಿಕ ಪತ್ರಗಳು ನಮಗೆ ಬಂದಿವೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

ಅದೊಂದು ದಿನ ಅಪ್ಪನ ಜತೆ ತೋಟಕ್ಕೆ ಹೋಗಿದ್ದೆ. ತೋಟ ಸುತ್ತುವಷ್ಟರಲ್ಲಿ ಸಂಜೆಯಾಯಿತು. ನನಗೆ ತುಂಬಾ ಸುಸ್ತು ಎಂದಾಗ ಅಪ್ಪ ಷಾರ್ಟ್​ಕಟ್​ನಲ್ಲಿ ಮನೆಗೆ ಕರೆದುಕೊಂಡು ಹೋದರು. ದಾರಿಯಲ್ಲಿ ಮುಳ್ಳುತಂತಿ ಇತ್ತು. ಅವಸರದಲ್ಲಿ ದಾಟುವಾಗ ತಂತಿ ನನ್ನ ಹೊಸ ಪ್ಯಾಂಟಿಗೆ ಸಿಕ್ಕಿ ಹರಿಯಿತು. ಅಳಲು ಪ್ರಾರಂಭಿಸಿದೆ. ಅಪ್ಪನಿಗೂ ಬೇಜಾರಾದರೂ ತೋರಿಸಿಕೊಳ್ಳದೇ ನನ್ನನ್ನು ಖುಷಿಪಡಿಸಲು ಏನೂ ಆಗಲ್ಲ ಬಿಡು, ಯಾರಾದರೂ ಕೇಳಿದರೆ ಇದು ಹೊಸ ಫ್ಯಾಷನ್ ಅಂತ ಹೇಳು ಎಂದು ನನ್ನನ್ನು ನಗಿಸಿ ಮನೆಗೆ ಕರೆದೊಯ್ದರು. ಆ ದಿನದ ನೆನಪಿಗೆ ಇಂದೂ ಆ ಪ್ಯಾಂಟು ನನ್ನ ಕಪಾಟಿನಲ್ಲಿದೆ. ಆ ಪ್ಯಾಂಟ್ ನೋಡಿದಾಗಲೆಲ್ಲ ಈ ಘಟನೆ ನೆನಪಾಗಿ ನಗು ಬರುತ್ತದೆ.  ಅನ್ವೇಷಾ.ಡಿ.ಆರ್. ಶಿವಮೊಗ್ಗ 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net