

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಕ್ರಮಬದ್ಧಗೊಳಿಸುವ ಯೋಜನೆ (Prime Minister Formalization of Micro Food Processing Enterprises-PMFME)ಯನ್ನು 2020-21ರಿಂದ ಐದು ವರ್ಷಗಳ ಅವಧಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ 60:40 ಅನುಪಾತದ ಅನುದಾನದೊಂದಿಗೆ ಅನುಷ್ಟಾನಗೊಳಿಸಲಾಗುತ್ತಿದೆ. ಕೃಷಿಕರ ಆದಾಯ ದ್ವಿಗುಣಗೊಳಿಸಲು ಆಹಾರ ಸಂಸ್ಕರಣೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅರಿತಿರುವ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಐದು ವರ್ಷಗಳವರೆಗೆ ಆಹಾರ ಸಂಸ್ಕರಣೆಗಾಗಿ 10 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ. 2 ಲಕ್ಷ ಆಹಾರ ಸಂಸ್ಕರಣಾ ಆಧುನಿಕ ಘಟಕಗಳನ್ನು ಪ್ರಾರಂಭಿಸಲು ಗುರಿ ಹಾಕಿಕೊಳ್ಳಲಾಗಿದೆ. ಇದರಂತೆ ರಾಜ್ಯಕ್ಕೆ 493.65 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, 10,784 ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಗುರಿ ನೀಡಲಾಗಿದೆ. ಈ ಯೋಜನೆಯನ್ನು ರಾಜ್ಯದಲ್ಲಿ ಕಾರ್ಯರೂಪಕ್ಕೆ ತರಲು ಕೃಷಿ ಇಲಾಖೆಯನ್ನು ನೋಡಲ್ ಇಲಾಖೆ ಎಂದು, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿ. (ಕೆಎಪಿಪಿಇಸಿ) ಅನ್ನು ರಾಜ್ಯದ ನೋಡೆಲ್ ಏಜೆನ್ಸಿ, ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್ಟಿಆರ್ಐ) ತಾಂತ್ರಿಕ ಸಂಸ್ಥೆಯನ್ನಾಗಿ ಅಧಿಕೃತವಾಗಿ ನೇಮಿಸಲಾಗಿದೆ. ಯೋಜನೆಯಲ್ಲಿ ಸರ್ಕಾರವು ಒಂದು ಜಿಲ್ಲೆ-ಒಂದು ಉತ್ಪನ್ನ ಮಾರ್ಗವನ್ನು ಅನುಸರಿಸುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಮಾರುಕಟ್ಟೆ ಸೃಷ್ಟಿಸುವ ದೃಷ್ಟಿಯಿಂದ ಆಸಕ್ತಿಯುಳ್ಳ ಉತ್ಸಾಹಿ ಉದ್ಯಮಿಗಳು ಹಾಗೂ ಈಗಾಗಲೆ ಸಣ್ಣ ಪ್ರಮಾಣದಲ್ಲಿ ಪ್ರಾಥಮಿಕ ಹಂತದ ಆಹಾರ ಸಂಸ್ಕರಣೆಯಲ್ಲಿ ತೊಡಗಿರುವವರಿಗೆ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಲು ಶೇ.35 ಸಾಲ ಸಂರ್ಪತ ಸಹಾಯಧನವನ್ನು ಗರಿಷ್ಠ 10 ಲಕ್ಷ ರೂ.ವರೆಗೆ ಪ್ರೋತ್ಸಾಹಧನವಾಗಿ ನೀಡಲಾಗುತ್ತಿದೆ. ಸ್ವಸಹಾಯ ಗುಂಪು, ರೈತ ಉತ್ಪಾದಕ ಸಂಸ್ಥೆಗಳಿಗೆ ಸಹಾಯಧನ ಒದಗಿಸಲಾಗುತ್ತದೆ. ಈ ಕುರಿತು ರಾಜ್ಯ ಸರ್ಕಾರವು ಆಹಾರ ಸಂಸ್ಕರಣೆ ಉದ್ಯಮಗಳ ಪೋ›ತ್ಸಾಹಕ್ಕಾಗಿ ಶೇ.15 ಹೆಚ್ಚಿನ ಸಹಾಯಧನ ನೀಡಲು 2021-22ರ ಬಜೆಟ್ನಲ್ಲಿ ಘೊಷಿಸಿ, ಕಾರ್ಯಗತಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ನಿಯಮಗಳೇನು?: ಕಿರು ಉದ್ಯಮ ಸ್ಥಾಪಿಸುವವರು ಶೇ.10 ಹಣವನ್ನು ವಂತಿಕೆ ಇರಿಸಿಕೊಳ್ಳಬೇಕಾಗುತ್ತದೆ. ಅರ್ಜಿದಾರರು ಆಯಾ ಕೃಷಿ ಉತ್ಪನ್ನಗಳ ಸಂಸ್ಕರಣೆ ಕುರಿತು ತಾಂತ್ರಿಕ ಮಾಹಿತಿಯುಳ್ಳವರಾಗಿರ ಬೇಕಾಗುತ್ತದೆ. ಸರ್ಕಾರದಿಂದ ಉಚಿತ ತರಬೇತಿ ನೀಡಲಾಗುತ್ತದೆ. ಸಂಸ್ಥೆಗಳಾಗಿದ್ದಲ್ಲಿ ಕನಿಷ್ಠ 3 ವರ್ಷದ ಸಂಸ್ಕರಣಾ ಅನುಭವ ಹೊಂದಿದವರಾಗಿರಬೇಕು.
ಶೇ.50 ಸಹಾಯ ಧನ: ಸ್ವಸಹಾಯ ಗುಂಪಿನ ಸದಸ್ಯರುಗಳಿಗೆ ಯೋಜನೆಯಲ್ಲಿ 40 ಸಾವಿರ ರೂ. ಸೀಡ್ ಕ್ಯಾಪಿಟಲ್ ಸಪೋರ್ಟ್ ಪಡೆಯಲೂ ಅವಕಾಶವಿರುತ್ತದೆ. ಈ ಸೀಡ್ ಮನಿಯನ್ನು ರಾಜ್ಯ ಮಟ್ಟದ ಸ್ವಸಹಾಯ ಸಂಘಗಳ ಫೆಡರೇಷನ್ಗಳಿಗೆ ಗ್ರಾಂಟ್ ಎಂದು ನೀಡಲಾಗುತ್ತದೆ. ಫೆಡರೇಷನ್ಗಳು ಮುಂದುವರಿದು ಸ್ವಸಹಾಯ ಗುಂಪಿನ ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವಾಗಿ ನೀಡುತ್ತವೆ. ಈ ಹಣದಲ್ಲಿ ಸ್ವಸಹಾಯ ಗುಂಪಿನ ಸದಸ್ಯರು ಸಂಸ್ಕರಣೆಗೆ ಅವಶ್ಯವಿರುವ ಸಣ್ಣ ಯಂತ್ರೋಪಕರಣ ಖರೀದಿ/ರ್ವಂಗ್ ಕ್ಯಾಪಿಟಲ್ ಆಗಿ ಬಳಸಿಕೊಳ್ಳಬಹುದು. ಈ ರೈತ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಪದಾರ್ಥಗಳನ್ನು ಮಾರಾಟ, ಬ್ರಾ್ಯಂಡಿಂಗ್ ಮಾಡಲೂ ಯೋಜನಾ ವೆಚ್ಚದ ಶೇ.50 ಅನುದಾನವನ್ನು ಸಹಾಯಧನವಾಗಿ ಪಡೆಯಲು ಅವಕಾಶ ಇದೆ.
ಇನ್ಕ್ಯೂಬೆಷನ್ ಕೇಂದ್ರ ಮಂಜೂರು: ಪಿಎಂ ಕಿರು ಆಹಾರ ಯೋಜನೆಯಡಿ ರಾಜ್ಯದ ಕೃಷಿ ವಿವಿಗಳಿಗೆ 12 ಇನ್ಕ್ಯೂಬೆಷನ್ ಕೇಂದ್ರ ಮಂಜೂರಾಗಿದ್ದು, ಹಂಚಿಕೆಯಾದ 19 ಕೋಟಿ ರೂ. ಪೈಕಿ 9.73 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸಬಯಸುವವರು http://mofpi.nic.in /pmfme/ ಪೋರ್ಟಲ್ನಲ್ಲಿ ವಿವರಗಳನ್ನು ಭರ್ತಿ ಮಾಡಬೇಕು ಅಥವಾ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಮೂಲಕ ಕೂಡ ಅರ್ಜಿ ವಿವರಗಳನ್ನು ಭರ್ತಿ ಮಾಡಿಸಬಹುದು. ಜಿಲ್ಲಾ ಮಟ್ಟದಲ್ಲಿ ನೇಮಿಸಲ್ಪಟ್ಟ ಸಂಪನ್ಮೂಲ ವ್ಯಕ್ತಿಗಳು ಅರ್ಜಿ ಹಾಗೂ ಯೋಜನಾ ವರದಿ ಪರಿಶೀಲಿಸಿ, ಜಿಲ್ಲಾ ಮಟ್ಟದ ಸಮಿತಿಗೆ ಸಲ್ಲಿಸುತ್ತಾರೆ. ಈ ಸಮಿತಿ ಅಧ್ಯಕ್ಷರು ಜಿಲ್ಲಾಧಿಕಾರಿಗಳಾಗಿದ್ದು, ಸದರಿ ಅರ್ಜಿಗಳನ್ನು ಸಮಿತಿಯಲ್ಲಿಟ್ಟು, ಅರ್ಹ ಫಲಾನುಭವಿಗಳು ಆಯ್ಕೆ ಮಾಡಿಕೊಂಡ ಬ್ಯಾಂಕ್ಗಳಿಗೆ ಸಾಲ ಮಂಜೂರಾತಿಗಾಗಿ ಕಳುಹಿಸುತ್ತಾರೆ. ಸಂಸ್ಥೆಗಳ ಗುಂಪು ಅರ್ಜಿಗಳಾಗಿದ್ದಲ್ಲಿ ಜಿಲ್ಲಾ ಸಮಿತಿಯು ನೋಡಲ್ ಏಜೆನ್ಸಿಯಾದ ಕೆಪೆಕ್ಗೆ ವರ್ಗಾಯಿಸುತ್ತದೆ. ಬ್ಯಾಂಕ್ಗಳಿಗೆ ಹಾಗೂ ಅರ್ಜಿದಾರರಿಗೆ ಮಾಹಿತಿ ನೀಡಲು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಹಕರಿಸುತ್ತಾರೆ. ಒಂದು ವೇಳೆ ಅರ್ಜಿಗಳು ಸ್ವಸಹಾಯ ಗುಂಪು ಅಥವಾ ರೈತ ಉತ್ಪಾದಕ ಸಂಸ್ಥೆ ಗಳಿಂದ ಗುಂಪು ಅರ್ಜಿಗಳಾದಲ್ಲಿ ಜಿಲ್ಲಾ ಮಟ್ಟದ ಸಮಿತಿ, ಕೆಪೆಕ್ಗೆ ಅರ್ಜಿ ಹಾಗೂ ಯೋಜನಾ ವರದಿ ಸಲ್ಲಿಸುತ್ತದೆ. ತದನಂತರ ರಾಜ್ಯ ಮಟ್ಟದ ಅನು ಮೋದನಾ ಸಮಿತಿಗೆ ಸಲ್ಲಿಸುತ್ತದೆ. 10 ಲಕ್ಷ ರೂ.ಗೂ ಹೆಚ್ಚು ಸಹಾಯಧನ ಬೇಕಾಗಿದ್ದಲ್ಲಿ ಸದರಿ ಅರ್ಜಿಗಳನ್ನು ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಉಧ್ಯಮಗಳ ಮಂತ್ರಾಲಯಕ್ಕೆ ಅನುಮೋದನೆಗಾಗಿ ಕಳುಹಿಸಲಾಗುವುದು.
(ಲೇಖಕರು: ಕೃಷಿ ತಜ್ಞರು)