

| ಕೆ.ಬಿ. ಶುಭ ಬೆಂಗಳೂರು
ರಾಸಾಯನಿಕ ಬಣ್ಣಗಳಿಂದ ಸಿದ್ಧಪಡಿಸಿದ ಗಣೇಶನ ಮೂರ್ತಿ ಬಳಕೆ ನಿಷೇಧಿಸಿದ ಮೇಲೆ ಪರಿಸರಸ್ನೇಹಿ ಗಣೇಶ ವಿಗ್ರಹಕ್ಕೆ ಬೇಡಿಕೆ ಹೆಚ್ಚಿದೆ. ಪರಿಸರಸ್ನೇಹಿ ವಿಗ್ರಹಗಳು 4 ಇಂಚಿನಿಂದ 20 ಇಂಚಿನವರೆಗೂ ಇರುತ್ತವೆ. ಮಕ್ಕಳು ತಮ್ಮ ಆಸಕ್ತಿಯ ಮೇರೆಗೆ ಗಾತ್ರ ನಿಗದಿಪಡಿಸಿಕೊಳ್ಳಬಹುದು. ಪರಿಸರಸ್ನೇಹಿ ಗಣಪನ ತಯಾರಿಗೆ ಮುಖ್ಯವಾಗಿ ಬೇಕಾಗಿರುವುದು ಜೇಡಿ ಮಣ್ಣು/ ಕೆರೆ ಮಣ್ಣು. ಆದರೆ ನಗರ ಪ್ರದೇಶದ ಕೆರೆಗಳಲ್ಲಿ ಸಿಗುವ ಮಣ್ಣಿನಿಂದ ವಿಗ್ರಹ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಹಳ್ಳಿಯ ಕೆರೆ/ ಗದ್ದೆೆಗಳ ಮಣ್ಣನ್ನು ತರಬೇಕಾಗುತ್ತದೆ ಎನ್ನುತ್ತಾರೆ ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಕ ಮಹೇಶ್ ಕುಂಬಾರ.
ತಯಾರಿ ತರಬೇತಿ: ಬೆಂಗಳೂರಿನ ಹನುಮಂತನಗರದಲ್ಲಿರುವ ರಾಮಾಂಜನೇಯ ಗುಡ್ಡದಲ್ಲಿ ಭಾನುವಾರ (ಸೆ.5) ದಂದು ಬೆಳಗ್ಗೆ 9.30ರಿಂದ ಪರಿಸರ ಸ್ನೇಹಿ ಗಣಪತಿ ತಯಾರಿ ತರಬೇತಿಯನ್ನು ಪ್ರಯೋಗ ಮಂಟಪ ಹಾಗೂ ರಂಗ ಚಂದಿರ ತಂಡ ಆಯೋಜಿಸುತ್ತಿವೆ. ಜೇಡಿಮಣ್ಣು ಹಾಗೂ ಅಡಿಕೆ ತಟ್ಟೆಯನ್ನು ಸ್ಥಳದಲ್ಲೇ ನೀಡಲಾಗುವುದು. ನೋಂದಣಿಗೆ 9113081894 ಸಂರ್ಪಸಿ.
ಜೇಡಿ ಮಣ್ಣು ಎಲ್ಲಿ ಸಿಗುತ್ತದೆ?: ಇತ್ತೀಚಿನ ದಿನಗಳಲ್ಲಿ ಆನ್ಲೈನ್ನಲ್ಲೂ ಜೇಡಿ ಮಣ್ಣು ಸಿಗುತ್ತದೆ. ಬೆಂಗಳೂರಿನ ಮಕ್ಕಳು ಏರ್ಪೋರ್ಟ್ರಸ್ತೆ, ಫ್ರೇಜರ್ ರಸ್ತೆ ಹಾಗೂ ಸಮೀಪದ ಸ್ಥಳಗಳಿಗೆ ಮಹೇಶ್ ಕುಂಬಾರ- 6366002825, ರಾಜಾಜಿನಗರ ಹಾಗೂ ಸಮೀಪದ ಪ್ರದೇಶಗಳಿಗೆ ಸಮರ್ಪಣಾ ಸಂಸ್ಥೆ - 9606402979 ಸಂರ್ಪಸಬಹುದು.
| ಶಿವಕುಮಾರ್ ಹೊಸಮನಿ ಸಮರ್ಪಣಾ ಸಂಸ್ಥೆ ಅಧ್ಯಕ್ಷ
| ಮಯೂಖಾ ಎ ಕೌಶಿಕ್ 7ನೇ ತರಗತಿ, ಪೂರ್ಣಪ್ರಮತಿ ಶಾಲೆ