ಬೆಂಗಳೂರು 69ನಲ್ಲಿ ಯೂರೋಪ್ ಬೆಲ್ಲಿ ಡಾನ್ಸರ್

BelllyDancer 11 Feb 20
Published on

ಬೆಂಗಳೂರು: ಪೋಸ್ಟರ್ ಮೂಲಕವೇ ಸದ್ದು ಮಾಡಿತ್ತು ‘ಬೆಂಗಳೂರು 69’ ಸಿನಿಮಾ. ನಟಿ ಅನಿತಾ ಭಟ್ ಹೊಸ ಅವತಾರದಲ್ಲಿ ಕಾಣಿಸಿಕೊಂಡು ಚಿತ್ರದ ಬಗೆಗಿನ ನಿರೀಕ್ಷೆ ಹೆಚ್ಚಿಸಿದ್ದರು. ಈಗ ಇದೇ ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ಚಿತ್ರದ ವಿಶೇಷ ಹಾಡೊಂದಕ್ಕೆ ಯೂರೋಪ್ ಮೂಲದ ಬೆಲ್ಲಿ ನೃತ್ಯಗಾರ್ತಿ ಗ್ರೇಸಿಲಾ ಪಿಶ್ಚನರ್ ಅವರನ್ನು ಕರೆತಂದಿದ್ದಾರೆ. ಅಂದಹಾಗೆ, ಗ್ರೇಸಿಲಾ ಮೂಲತಃ ಬ್ರೇಜಿಲ್ ದೇಶದವರು. ಮಾಡೆಲಿಂಗ್​ನಲ್ಲಿ ಗುರುತಿಸಿಕೊಂಡಿದ್ದು, ‘ಬೆಂಗಳೂರು 69’ ಮೂಲಕ ಮೊದಲ ಇಂಡಿಯನ್ ಸಿನಿಮಾದ ಭಾಗವಾಗಿದ್ದಾರೆ. ಬರೀ ಯೂರೋಪಿಯನ್ ಡಾನ್ಸರ್ ಕರೆತಂದಿದ್ದಷ್ಟೇ ವಿಶೇಷವಲ್ಲ. ಆ ಹಾಡನ್ನು ಅಷ್ಟೇ ವಿಭಿನ್ನವಾಗಿ ಚಿತ್ರೀಕರಣ ಸಹ ಮಾಡಲಾಗಿದೆ. ಯುನೈಟೆಡ್

ಎಮಿರೇಟ್ಸ್​ನಲ್ಲಿ ಹಾಡಿನ ಕೆಲ ದೃಶ್ಯಾವಳಿಗಳನ್ನು ಸೆರೆಹಿಡಿಯಲಾಗಿದೆ. ಬುರ್ಜ್ ಖಲೀಫಾ, ರೆಡ್​ರೆೋನ್ ಮತ್ತು ಶಾರ್ಜಾ ಮರುಭೂಮಿಯಲ್ಲೂ ಗ್ರೇಸಿಲಾ ಹೆಜ್ಜೆ ಹಾಕಿದ್ದಾರೆ. ಹಾಡಿನ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಅಮೆರಿಕ ಮೂಲದ ಕಾಸ್ಟೂ್ಯಮ್ ಡಿಸೈನರ್​ಒಬ್ಬರಿಂದ ವಸ್ತ್ರ ವಿನ್ಯಾಸ ಮಾಡಿಸಲಾಗಿದೆ. ಲ್ಯಾಟಿನ್ ಅಮೆರಿಕ, ರಷ್ಯಾ, ದಕ್ಷಿಣ ಆಫ್ರಿಕಾದ ಕೆಲ ನುರಿತ ತಂತ್ರಜ್ಞರನ್ನೂ ಈ ಹಾಡಿಗಾಗಿ ಕರೆತಂದಿದ್ದಾರೆ. ಚಿತ್ರದಲ್ಲಿ ಅನಿತಾ ಭಟ್ ನಾಯಕಿಯಾಗಿ ಕಾಣಿಸಿಕೊಂಡರೆ, ಟಾಲಿವುಡ್ ನಟ ಶಫಿ, ಪವನ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ‘ಬೆಂಗಳೂರು 69’ ಚಿತ್ರ ಇತ್ತೀಚೆಗಷ್ಟೇ ಕಬಿನಿ ರೆಸಾರ್ಟ್ ಸುತ್ತಮುತ್ತ ಚಿತ್ರೀಕರಣ ಮಾಡಿಕೊಂಡಿತ್ತು. ಚಿತ್ರಕ್ಕೆ ಗುಲ್ಜಾರ್ ಬಂಡವಾಳ ಹೂಡುತ್ತಿದ್ದು, ಪರಮೇಶ್ ಛಾಯಾಗ್ರಹಣ, ವಿಕ್ರಮ್ ಚಂದನಾ ಸಂಗೀತ ನೀಡಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಈ ಸಿನಿಮಾ ತೆರೆಕಾಣಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net