ಇದು ಎಂಥಾ ಲೋಕವಯ್ಯಾ...!;  ವೃದ್ಧರನ್ನು ನದಿಗೆ ಕಳಿಸುವರು

VRUDDHA
Published on

ಅಪ್ಪ- ಅಮ್ಮ ವೃದ್ಧರಾಗುತ್ತಿದ್ದಂತೆಯೇ ಇಂದಿನ ಕೆಲವು ಮಕ್ಕಳು ತಮಗೂ ಮುಂದೆ ಇಂಥದ್ದೊಂದು ದಿನ ಬರಬಹುದು ಎನ್ನುವ ಅರಿವೇ ಇಲ್ಲದೇ ಅವರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಾರೆ. ಅವರನ್ನು ನೋಡಿಕೊಳ್ಳಲು ಟೈಂ ಇಲ್ಲ, ಕಾಳಜಿ ಮಾಡಲು ಆಗುವುದಿಲ್ಲ, ವಿದೇಶಕ್ಕೆ ಹೋಗುವುದಾದರೆ ಕರೆದುಕೊಂಡು ಹೋಗಲು ಆಗುವುದಿಲ್ಲ ಎಂಬಿತ್ಯಾದಿ ಅಸಂಬದ್ಧ ಕಾರಣಗಳು ಇಂದಿನ ಯುವಪೀಳಿಗೆಯದ್ದು.

ಇದು ಬಹುತೇಕ ದೇಶಗಳ ಮಾತಾದರೆ, ಎಸ್ಕಿಮೊ ಜನಾಂಗದ ಪದ್ಧತಿ ಕೇಳಿದರೆ ಮೈ ಜುಂ ಎನ್ನುತ್ತದೆ. ಈ ಜನಾಂಗದಲ್ಲಿ ಬದುಕಿರುವವರೇ ತುತ್ತು ಅನ್ನಕ್ಕಾಗಿ ಹೋರಾಟ ಮಾಡುವ ಪರಿಸ್ಥಿತಿ ಇದೆ. ಆದ್ದರಿಂದ ವಯಸ್ಸಾಗುತ್ತಿದ್ದಂತೆಯೇ, ದುಡಿಯುವ ಶಕ್ತಿಯೂ ಇಲ್ಲದ ಕಾರಣ, ಅವರು ಬದುಕಿದ್ದೂ ಪ್ರಯೋಜನ ಇಲ್ಲವೆಂದುಕೊಂಡು ಅವರನ್ನು ಮಂಜುಗಡ್ಡೆಯಿಂದ ಮುಚ್ಚಿ ಅಲ್ಲಿಯೇ ಇರುವ ನದಿಯ ಸಮೀಪ ಬಿಟ್ಟುಬರಲಾಗುತ್ತದೆ. ಚಳಿಯಿಂದ, ಹಸಿವಿನಿಂದ ಅವರು ಅಲ್ಲಿಯೇ ಸಾಯಲಿ ಎನ್ನುವುದು ಇದಕ್ಕೆ ಕಾರಣ!

| ಸುಚೇತನಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net