ಇದು ಎಂಥಾ ಲೋಕವಯ್ಯಾ...!; ಗಂಡನ ಕೊಲೆಗೆ ಅವಕಾಶ!

GANDA
Published on

ಗಂಡನನ್ನು ಕೊಲ್ಲಲು ಹೆಂಡತಿಗೆ ಒಂದು ಕಾನೂನು ಅನುಮತಿ ನೀಡಿದೆ! ಗಂಡ ವಂಚಿಸಿರುವುದು ತಿಳಿದರೆ ಅವನನ್ನು ಕೊಲ್ಲಲು ಹೆಂಡತಿಗೆ ಸಂಪೂರ್ಣ ಅನುಮತಿ ನೀಡಲಾಗಿದೆ. ಹಾಗೆಂದು ಭಾರತದ ಗಂಡಂದಿರು ಭಯಪಡುವ ಅಗತ್ಯವಿಲ್ಲ.

ಏಕೆಂದರೆ ಈ ಕಾನೂನು ಇರುವುದು ಹಾಂಗ್​ಕಾಂಗ್​ನಲ್ಲಿ. ಆದರೆ ಒಂದೇ ಒಂದು ಷರತ್ತು ಈ ಕಾನೂನಿನಲ್ಲಿದೆ. ಅದೇನೆಂದರೆ ಗಂಡನನ್ನು ಹೆಂಡತಿ ಬರಿಗೈಯಿಂದ ಕೊಲೆ ಮಾಡಬೇಕು. ಆಯುಧ ಹಿಡಿದು ಕೊಲೆ ಮಾಡಿದರೆ ಅದು ಅಪರಾಧ! ತಮಗೂ ‘ಸಮಾನ’ ಅವಕಾಶ ಬೇಕು ಎಂದು ಗಂಡಂದಿರು ಕೋರ್ಟ್ ಮೆಟ್ಟಿಲೇರಿದ್ದಾರೋ ಗೊತ್ತಿಲ್ಲ...!

| ಸುಚೇತನಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net