

ಹರಕೆ ಹೊತ್ತವರು ಬಿಸಿ ಕೆಂಡದ ಮೇಲೆ ಬರಿಗಾಲಲ್ಲಿ ನಡೆದು ಭಕ್ತಿ ಮೆರೆಯುವುದು ಭಾರತದಲ್ಲಿ ಅನೇಕ ಕಡೆಗಳಲ್ಲಿ ಕಾಣಸಿಗುತ್ತದೆ. ಚೀನಾದ ಕೆಲವು ಪ್ರಾಂತ್ಯಗಳಲ್ಲಿಯೂ ಇಂಥದ್ದೊಂದು ಸಂಪ್ರದಾಯವಿದೆ. ಆದರೆ ಒಂದೇ ಒಂದು ವ್ಯತ್ಯಾಸ ಎಂದರೆ, ನಮ್ಮಲ್ಲಿ ಭಕ್ತರು ಕೆಂಡದ ಮೇಲೆ ನಡೆದರೆ, ಅಲ್ಲಿ ಗರ್ಭಿಣಿ ಪತ್ನಿಯನ್ನು ಹೊತ್ತುಕೊಂಡು ಗಂಡ ಬಿಸಿ ಕೆಂಡದ ಮೇಲೆ ಬರಿಗಾಲಿನಲ್ಲಿ ನಡೆಯಬೇಕಂತೆ. ಅವನು ಎಷ್ಟು ನಿರಾಯಾಸವಾಗಿ ನಡೆಯುತ್ತಾನೆಯೋ ಅಷ್ಟು ಸುಲಭದಲ್ಲಿ ಹೆರಿಗೆ ಆಗುತ್ತದೆ ಎಂಬ ನಂಬಿಕೆ ಅಲ್ಲಿಯವರದ್ದು. ಎರಡಕ್ಕೂ ಅದೇನು ಸಂಬಂಧವಿದೆಯೋ ಅಲ್ಲಿಯ ದೇವರೇ ಬಲ್ಲ! ಗಂಡ ಸ್ವಲ್ಪ ಎಡವಿದರೂ ಆ ಗರ್ಭಿಣಿಯ ಸ್ಥಿತಿ ಮಾತ್ರ ಅಯೋಮಯ!
| ಸುಚೇತನಾ