ಇದು ಎಂಥಾ ಲೋಕವಯ್ಯಾ...!; ದೊಡ್ಡದಾಗಿ ಮಾತಾಡುವಂತಿಲ್ಲ

MATU
Published on

ಗಾಂಧಿ ಜಯಂತಿ, ಸ್ವಾತಂತ್ರ್ಯ ದಿನ ಸೇರಿದಂತೆ ಕೆಲವು ಸಂದರ್ಭಗಳಲ್ಲಿ ಮದ್ಯಪಾನ ನಿಷೇಧ ಮಾಡುವುದು ಸಾಮಾನ್ಯ. ಇಂಥದ್ದೇ ಕಾನೂನು ಉತ್ತರ ಕೊರಿಯಾದಲ್ಲಿಯೂ ಇದೆ. ಅಲ್ಲಿ ಅಧ್ಯಕ್ಷನಾಗಿದ್ದ ಕಿಮ್ 2 ಸಂಗ್ ನಿಧನರಾದ ದಿನವಾದ ಜೂನ್ 8 ಶೋಕಾಚರಣೆ ಇರುವುದರಿಂದ ಮದ್ಯಪಾನಕ್ಕೆ ನಿಷೇಧವಿದೆ. ಇಷ್ಟೇ ಆದರೆ ಪರವಾಗಿರಲಿಲ್ಲ.

ಅಂದು ಯಾರೂ ಜೋರಾಗಿ ಮಾತನಾಡುವಂತಿಲ್ಲ. ಅಷ್ಟೇ ಅಲ್ಲ, ಯಾವುದೇ ಕಾರಣಕ್ಕೂ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳುವಂತಿಲ್ಲ. ಹೀಗೆ ಮಾಡಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.

| ಸುಚೇತನಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net